ಚುನಾವಣಾ ಲಕ್ಷ್ಮಿಯಾಗಿ ಬದಲಾದ ಗೃಹಲಕ್ಷ್ಮೀ
ಗೃಹಲಕ್ಷ್ಮಿ ಯೋಜನೆ ಇವತ್ತು ಚುನಾವಣಾ ಲಕ್ಷ್ಮಿಯಾಗಿ ಪರಿವರ್ತನೆಯಾಗಿದೆ. ಇವರು ಬಡವರಿಗೆ ಯೋಜನೆಗಳನ್ನು ನೀಡಲಿ. ಇವರೊಬ್ಬರೇ ಯೋಜನೆಗಳನ್ನು ನೀಡಿಲ್ಲ. ಯಡಿಯೂರಪ್ಪನವರು ಹಿಂದೆ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಬೈಸಿಕಲ್ ಯೋಜನೆಗಳನ್ನು ನೀಡಿದ್ದರು. ಇನ್ನೂ ಹಲವು ಒಳ್ಳೆಯ ಯೋಜನೆ ಕೊಟ್ಟಿದ್ದಾರೆ. ಆದರೆ, ಗೃಹಲಕ್ಷ್ಮಿ ಇವತ್ತು ಚುನಾವಣಾ ಲಕ್ಷ್ಮಿಯಾಗಿರುವುದು ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರ ಆಕ್ಷೇಪಿಸಿದರು. ಚಿತ್ರದುರ್ಗ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಗ್ಯಾರಂಟಿಗಳಿಂದ ಬೀಗುತ್ತಿದ್ದಾರೆ.
ಬೋವಿ ಸಮುದಾಯದವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಬಗ್ಗೆ ಪರಿಶೀಲನೆ: ಸಿಎಂ ಸಿದ್ದರಾಮಯ್ಯ
ಬೋವಿ ಸಮುದಾಯದವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು ಹಾಗೂ ಯಾರೂ ಅವಕಾಶಗಳಿಂದ ವಂಚಿತರಾಗಬಾರದು. ಸಂವಿಧಾನ ರಚನೆಯಾದ ನಂತರ ಸಮಾನತೆ ಸಾಧಿಸುವತ್ತ ದೇಶ ಸಾಗಿದ್ದು, ಸಂವಿಧಾನ ಹೇಳುವಂತೆಯೇ ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ
ಉಪಸಮರ: ಕೈ-ಕಮಲಕ್ಕೆ ಪಾಠವೇನು?
ಸೋಲು ಮತ್ತು ಗೆಲುವು ರಾಜಕಾರಣದಲ್ಲಿ ಯಾವಾಗಲೂ ಒಂದೇ ವಿಧವಾಗಿರುವುದಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತೆ ತಮ್ಮ ಪ್ರತಿನಿಧಿ ಆಯ್ಕೆ ಕುರಿತು ಹೇಗೆ ಆಲೋಚಿಸಿ ತೀರ್ಪು ನೀಡುವರೆಂಬುದಕ್ಕೆ ಈಗ ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ದಕ್ಕಿರುವ ಜನಾದೇಶವೇ ಸಾಕ್ಷಿ. ಉಪಚುನಾವಣೆಗಳ ಫಲಿತಾಂಶದಿಂದ ಸರ್ಕಾರಗಳು ಉರುಳಿ
ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಭಾರತದ ಹಡಗು ಸಿಬ್ಬಂದಿಯ ರಕ್ಷಿಸಿದ ಪಾಕ್ ನೌಕಾಪಡೆ
ಅರಬ್ಬಿ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ವಾಣಿಜ್ಯ ಹಡಗಿನ ಸಿಬ್ಬಂದಿಯನ್ನು ಪಾಕಿಸ್ತಾನ ನೌಕಾಸೇನೆ ರಕ್ಷಣಾ ಕಾರ್ಯಾಚರಣೆ ಕೈಗೊಂಡು ರಕ್ಷಿಸಿದೆ. ಕಾರ್ಯಾಚರಣೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮುದ್ರದಲ್ಲಿ ಸಿಲುಕಿದ್ದ ಭಾರತೀಯ ಹಡಗಿನ ತುರ್ತು ಕರೆಗೆ ಪಾಕಿಸ್ತಾನ ನೌಕಾಪಡೆ ಸ್ಪಂದಿಸಿ ಸಿಬ್ಬಂದಿಗೆ
ರಾಜ್‌ಕುಮಾರ್ ಸಮಾಧಿ ಜಮೀನು: ನಟ ಚೇತನ್ ವಿರುದ್ಧ ಸಾರಾ ಗೋವಿಂದ ಪ್ರಕರಣ ದಾಖಲು
ಡಾ.ರಾಜ್‌ಕುಮಾರ್ ಸಮಾಧಿ ಜಮೀನಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯಿಂದ ಶುರುವಾಗಿದ್ದ ವಿವಾದ ಮುಂದುವರಿದಿದ್ದು, ನಟ ಚೇತನ್ ಅಹಿಂಸಾವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಟ ಚೇತನ್ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಸಾರಾ ಗೋವಿಂದು ವಿರುದ್ಧ ದೂರು ನೀಡಿದ್ದರು. ಎಫ್‌ಐಆರ್ ಕೂಡ ದಾಖಲಾಗಿತ್ತು. ಈಗ ಸಾರಾ
ಶಾಸಕರಿಗೆ ಟಿಕೆಟ್ ವಿತರಣೆಗೂ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಡಿಕೆ ಶಿವಕುಮಾರ್
“ಅಹಮದಾಬಾದ್ ನಲ್ಲಿ ದೊಡ್ಡ ಕ್ರೀಡಾಂಗಣವಿದೆ, ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಐಪಿಎಲ್ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡಿರಬೇಕು. ಶಾಸಕರಿಗೆ ಟಿಕೆಟ್ ವಿತರಣೆಗೂ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ
ಹೊಸಕೋಟೆಯಲ್ಲಿ 50 ಬೈಕ್‌ಗಳ ಸಮೇತ ಕಳ್ಳರಿಬ್ಬರ ಬಂಧನ
ಇಬ್ಬರು ಅಂತರರಾಜ್ಯ ಬೈಕ್ ಕಳ್ಳರನ್ನು 50 ಬೈಕ್‌ಗಳ ಸಮೇತ ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ನರಸಿಂಹಮೂರ್ತಿ ಮತ್ತು ಪ್ರಸಾದ್ ಬಂಧಿತರು. ಅವರಿಂದ 55 ಲಕ್ಷ ರೂಪಾಯಿ ಮೌಲ್ಯದ ನಾನಾ ಕಂಪನಿಯ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಮೋಜು ಮಸ್ತಿಗಾಗಿ ಬೈಕ್‌ಗಳನ್ನು ಕದ್ದು ಆಂಧ್ರದ ಗಡಿ
ಡಿಎಂಕೆಗೆ ಕೈ ಕೊಟ್ಟ ಕಾಂಗ್ರೆಸ್, ಇಂಡಿ ಪರಾಮರ್ಶೆ ಮಾಡಲಿ: ಆರ್ ಅಶೋಕ
ತಮಿಳುನಾಡಲ್ಲಿ ಡಿಎಂಕೆ ಜೊತೆ ಚುನಾವಣೆ ಎದುರಿಸಿದ ಕಾಂಗ್ರೆಸ್, ಈಗ ಅದೇ ಪಕ್ಷಕ್ಕೆ ಕೈ ಕೊಟ್ಟಿದೆ. ಇಂಡಿ ಒಕ್ಕೂಟದ ಮಿತ್ರಪಕ್ಷಗಳು ಈ ಬಗ್ಗೆ ಪರಾಮರ್ಶೆ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಲ್ಲಿ ಕಾಂಗ್ರೆಸ್‌ನ ಬಣ್ಣ
ಗ್ಯಾರಂಟಿ ಸಮರ್ಪಕ ಅನುಷ್ಠಾನದಲ್ಲಿ ಬಬಲೇಶ್ವರ ರಾಜ್ಯದಲ್ಲೇ ಮೊದಲ ಸ್ಥಾನ: ಎಂಬಿ ಪಾಟೀಲ್
ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಬಬಲೇಶ್ವರ ಮತಕ್ಷೇತ್ರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ವಿಜಯಪುರದ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ. ಸಿಎಂ ಬದಲಾವಣೆ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ವರಿಷ್ಠರ ಭೇಟಿಗೆ ಕರೆ ಬಂದರೆ ನವದೆಹಲಿಗೆ ತೆರಳುವುದಾಗಿ ಸಿಎಂ ಸಿದ್ದರಾಮಯ್ಯ




