Menu

ವಿಶೇಷಚೇತನರ ಅಗತ್ಯ ಸಾಧನಗಳ ಮೇಲಿನ ಜಿಎಸ್‌ಟಿ ಕೈಬಿಡಿ: ಕೇಂದ್ರಕ್ಕೆ ಸಂತೋಷ್‌ ಲಾಡ್‌ ಆಗ್ರಹ

ವಿಶೇಷಚೇತನರು ಸ್ವತಂತ್ರ ಜೀವನ ನಡೆಸಲು ಸಹಾಯವಾಗುವ ಎಲ್ಲಾ ಸಾಧನ, ಸಲಕರಣೆಗಳ ಮೇಲಿನ ಜಿಎಸ್‌ಟಿ ವಿನಾಯಿತಿ ನೀಡುವಂತೆ ಇಲ್ಲವೇ ಜಿಎಸ್‌ಟಿಯನ್ನು ಸಂಪೂರ್ಣ ಮನ್ನಾ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಪತ್ರ ಬರೆದಿದ್ದಾರೆ. ವಿಶೇಷಚೇತನರಿಗೆ ಅಗತ್ಯವಾದ ಸಹಾಯಕ ಸಾಧನಗಳು, ಪುನರ್ವಸತಿ ಸಾಧನಗಳು, ಸಲಕರಣೆಗಳ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ. ಈ ಸಾಧನಗಳು ಐಷಾರಾಮಿ ವಸ್ತುಗಳಲ್ಲ, ಬದಲಾಗಿ ಅನಿವಾರ್ಯ ಅವಶ್ಯಕತೆಗಳಾಗಿದ್ದು ಜಿಎಸ್‌ಟಿ ವಿನಾಯಿತಿ ಅಥವಾ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ: ಪ್ರಧಾನಿ ಮೋದಿಯಿಂದ ಜನಸಾಮಾನ್ಯರ ಲೂಟಿ : ಸಿಎಂ ಸಿದ್ದರಾಮಯ್ಯ

ಮೋದಿಯವರು ಪ್ರಧಾನಿ ಆದ ಬಳಿಕ ಸತತವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವುದನ್ನು ರೂಢಿ ಮಾಡಿಕೊಂಡಿದ್ದು ಈ ಬಾರಿ ಸತತ ನಾಲ್ಕನೇ ದಿನ ಇಂಧನ ದರ ಏರಿಕೆ ಮಾಡಿ ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತ್ವಿಷಾ ಶರ್ಮಾ ಸಾವು: ಸಿಬಿಐ ತನಿಖೆಗೆ ಸುಪ್ರೀಂ ಸಮ್ಮತಿ, ಮಾಧ್ಯಮಗಳ ನಡೆಗೆ ಕಿಡಿ

ಮಾಡೆಲ್​ ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣದ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ಪ್ರಕರಣದ ಸ್ವಯಪ್ರೇರಿತ ವಿಚಾರಣೆಗೆ ಮುಂದಾಗಿರುವ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹಾಗೂ ಹೇಳಿಕೆಗಳನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಕರಣದ ತನಿಖೆ ಮುಂದುವರಿದಿರುವ

ಡಿಜಿಟಲ್‌ ಅರೆಸ್ಟ್‌ ವಂಚನೆ: ಮಹಿಳೆಯಿಂದ ದೋಚಿದ್ದು 24 ಕೋಟಿ ರೂ.

ಡಿಜಿಟಲ್​​ ಅರೆಸ್ಟ್​​ ಎಂದು ಬೆದರಿಸಿದ ಸೈಬರ್‌ ವಂಚಕರು ಬೆಂಗಳೂರಿನ ಮಹಿಳೆಯೊಬ್ಬರಿಂದ 24 ಕೋಟಿ ರೂಪಾಯಿ ಸುಲಿಗೆ ಮಾಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನು ಬ್ಯಾಂಕ್​​ನಲ್ಲಿ ಅಡ ಇಡಲು ಬಂದ ಕಾರಣ ಮಹಿಳೆ ಮತ್ತಷ್ಟು ವಂಚನೆಯಿಂದ ಪಾರಾಗಿದ್ದಾರೆ.

ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಓಟ ಮುಂದುವರಿಕೆ

ದೇಶದಲ್ಲಿ ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಓಟ ಮುಂದುವರಿದಿದೆ, ಸೋಮವಾರ ಪೆಟ್ರೋಲ್ ದರ ಲೀಟರ್‌ಗೆ ರೂ.2.61 ಹಾಗೂ ಡೀಸೆಲ್ ದರ 2.71 ಏರಿಕೆಯಾಗಿದೆ. ಕಳೆದ 12 ದಿನಗಳಲ್ಲಿ  ನಾಲ್ಕನೇ ಬಾರಿ ನಡೆದ ದರ ಏರಿಕೆಯಾಗಿದೆ. ಮೇ 15ರಿಂದ ಒಟ್ಟಾರೆ ಪೆಟ್ರೋಲ್ ಮತ್ತು

ಬಿಡದಿ ಟೌನ್‌ಶಿಪ್‌ ಚರ್ಚೆಗೆ ಕರೆದವರು ವಸೂಲಿಯಲ್ಲಿ ಫುಲ್ ಬ್ಯುಸಿ: ಹೆಚ್‌ಡಿ ಕುಮಾರಸ್ವಾಮಿ 

ಮೊದಲು ಬಿಡದಿ ಟೌನ್ ಶಿಪ್ ಬಗ್ಗೆ ಚರ್ಚೆಗೆ ಆಹ್ವಾನ ಕೊಟ್ಟಿದ್ದು‌ ಅವರು. ಅದಕ್ಕೆ ನಾನು ಸಿದ್ಧ ಎಂದು ಹೇಳಿದ್ದೇನೆ. ಪಾಪ ಅವರು ತುಂಬಾ ಬ್ಯುಸಿ‌ ಇದ್ದಾರೆ. ದಿನವೂ ಇಷ್ಟು ಅಂತ ವಸೂಲಿ ಆಗಲೇಬೇಕು ಅಂತ ಬ್ಯುಸಿ‌ ಇದ್ದಾರೆ ಎಂದು  ಕೇಂದ್ರ ಸಚಿವ ಕುಮಾರಸ್ವಾಮಿ

ಎಸ್ ಐಆರ್ ಮ್ಯಾಪಿಂಗ್‌ನಲ್ಲಿ 75 ಲಕ್ಷ ಮಂದಿಯನ್ನು ಹೊರಗಿಡಲಾಗಿದೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

ಬಿಜೆಪಿ ಹಾಗೂ ಚುನಾವಣಾ ಆಯೋಗದ  ಸಹಯೋಗದಲ್ಲಿ 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ(ಎಸ್ ಐಆರ್) ಮಾಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್  ಆರೋಪಿಸಿದರು. ರಾಜ್ಯದಲ್ಲಿ ಎಸ್ ಐಆರ್ ಗೆ ಮುನ್ನ ನಡೆದಿರುವ ಮ್ಯಾಪಿಂಗ್‌ನಲ್ಲಿ 75 ಲಕ್ಷ

ನಕಲಿ ಸುಪ್ರೀಂ ಆದೇಶ: 8 ವರ್ಷದ ಹಿಂದೆ ಜೈಲಿಂದ ಬಿಡುಗಡೆಯಾದ ಆರೋಪಿಗಾಗಿ ಶೋಧ

ನಕಲಿಯಾಗಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸೃಷ್ಟಿಸಿ, ಜೈಲು ಅಧಿಕಾರಿಗಳನ್ನೇ ಯಾಮಾರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಕೈದಿಯೊಬ್ಬನ ವಂಚನೆ ಎಂಟು ವರ್ಷದ ಬಳಿಕ ಬಯಲಾಗಿದೆ. ಈಗ ಪೊಲೀಸರು ಆತನಿಗಾಗಿ ಹುಟುಕಾಟ ನಡೆಸುತ್ತಿದ್ದಾರೆ. ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಎಂಬ ಅಪರಾಧಿ 2001ರಲ್ಲಿ

ಕಪ್ಪೆಚಿಪ್ಪು ಹೆಕ್ಕುತ್ತಿದ್ದಾಗ ಸಮುದ್ರ ಪಾಲಾದವರ ಸಂಖ್ಯೆ 11ಕ್ಕೆ ಏರಿಕೆ

ಭಟ್ಕಳ ಬಳಿ ಅಳ್ವೆಕೋಡಿ ಕಡಲತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಭಾನುವಾರ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಸೋಮವಾರ ಪತ್ತೆಯಾಗಿದೆ. ಎನ್‌ಡಿಆರ್‌ಎಫ್‌, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು

ರಾಜ್ಯ ಬಿಜೆಪಿ ನೂತನ ಸಾರಥಿಯ ತಳಮಳ 

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸಂಪೂರ್ಣ ರಾಜಕೀಯ ಲಾಭ ಪಡೆಯುವ ದಿಶೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ರಚಿಸಿರುವ ಚಕ್ರವ್ಯೂಹ ಏನೆಂಬುದೇ ರಾಜ್ಯದ ಬಿಜೆಪಿ ನಾಯಕರಿಗೆ ಇದುವರೆಗೂ ಅರ್ಥವಾಗಿಲ್ಲ. ರಾಜ್ಯ ಬಿಜೆಪಿ ಸಾರಥಿ ವಿಚಾರವೀಗ ಚರ್ಚೆಯಲ್ಲಿದೆ. ಅಸೆಂಬ್ಲಿ ಚುನಾವಣೆಗೆ ಇನ್ನು ದಿನಾಂಕವೇನೂ ಬಹಳ ದೂರವಿಲ್ಲ.