Menu

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ: ಸಂತೋಷ್‌ ಲಾಡ್‌

ಸರ್ಕಾರದ ವತಿಯಿಂದ ಆಯೋಜಿಸುವ ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದು ಹಾಗೂ ಅಬ್ಬರದ ಡಿ. ಜೆ ಸಿಸ್ಟಂ ಬಳಕೆಗೆ ಕಡಿವಾಣ ಹಾಕುವ ಕುರಿತು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ವಿಧಾನಸಭೆಯ ಕಲಾಪದಲ್ಲಿ ಸಲಹೆಗಳನ್ನು ನೀಡಿದರು. ಸರ್ಕಾರ ಆಯೋಜಿಸುವ ಉತ್ಸವಗಳಲ್ಲಿ ಲಕ್ಷಾಂತರ ಹಣ ವೆಚ್ಚ ಮಾಡಿ ಹೊರಗಿನಿಂದ ಕಲಾವಿದರನ್ನು ಕರೆಸುವ ಬದಲು ನಮ್ಮ ರಾಜ್ಯದ ಸ್ಥಳೀಯ ಕಲಾವಿದರನ್ನು ಆಹ್ವಾನಿಸಿದರೆ ಆ ಉತ್ಸವಗಳ ಅರ್ಥವೂ ಹೆಚ್ಚಾಗುತ್ತದೆ ಹಾಗೆಯೇ ಸರ್ಕಾರದ ಹಣ

ದೇವೇಗೌಡರು, ಕುಮಾರಸ್ವಾಮಿಯನ್ನು ಪಿಎಂ, ಸಿಎಂ ಮಾಡಿದ್ದು ಕಾಂಗ್ರೆಸ್‌: ಡಿಕೆ‌ ಶಿವಕುಮಾರ್

“ಕಾಂಗ್ರೆಸ್ ಪಕ್ಷವು ಜಾತ್ಯಾತೀತ ತತ್ವ ಉಳಿಸಬೇಕು ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದೆವು‌. ಆದರೆ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ವಿಶಾಲ ಹೃದಯ ಅವರಿಗೆ ಇರಲಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಕುಟುಕಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್

“ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ” ಬ್ಯಾನ್‌: ಜೋಗಿ ಪ್ರೇಮ್‌ಗೆ ಚುರುಕು ಮುಟ್ಟಿಸಿದ ಕೇಂದ್ರ

ಜೋಗಿ ಪ್ರೇಮ್‌ ನಿರ್ದೇಶನ ಹಾಗೂ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾದ ‘ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ’ ಹಾಡಿಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದ್ದು, ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದೆ. ಈ ಹಾಡಿನ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ಬಾಗಲಕೋಟೆ ಕಾಂಗ್ರೆಸ್‌ ಟಿಕೆಟ್‌ ಫೈನಲ್‌: ಸಿಎಂ ಸಂಧಾನ ಫಲಪ್ರದ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕಗ್ಗಂಟು ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆಯಿಂದ ಪರಿಹಾರಗೊಂಡಿದೆ. ಮಾಜಿ ಶಾಸಕ ಎಚ್.ವೈ. ಮೇಟಿ ಕುಟುಂಬದಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಕಾಂಗ್ರೆಸ್‌ಗೆ ಸವಾಲಾಗಿತ್ತು. ಮೇಟಿಯವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ,

ನಾಮಪತ್ರ ಸಲ್ಲಿಕೆಗೆ ಆರು ದಿನ ಮಾತ್ರ ಬಾಕಿ: ಬಾಗಲಕೋಟೆಯಲ್ಲಿ ಘೋಷಣೆಯಾಗದ ಕೈ-ಕಮಲ ಟಿಕೆಟ್

-ಬಾಲಚಂದ್ರ ರೂಗಿ ಬಾಗಲಕೋಟೆ  ವಿಧಾನಸಭೆ ಕ್ಷೇತ್ರ  ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳು ಇನ್ನೂವರೆಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಿದೆ. ಮಾರ್ಚ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಇನ್ನು ಆರು ದಿನ ಮಾತ್ರ ಬಾಕಿ ಉಳಿದಿದ್ದು, ಅಭ್ಯರ್ಥಿಗಳ

ಯಡ್ರಾಮಿಯಲ್ಲಿ ಸತತ 3ನೇ ವರ್ಷ ರಂಜಾನ್ ಉಪವಾಸ ಆಚರಿಸಿದ ಹಿಂದೂ ಯುವಕ

ಎಲ್ಲ ಧರ್ಮಗಳನ್ನು ಒಳಗೊಳ್ಳುವ ಮನುಷ್ಯ ಧರ್ಮವೇ  ಶ್ರೇಷ್ಟ ಎಂಬುದನ್ನು ಸಾರುವಂತೆ  ಯಡ್ರಾಮಿ ಪಟ್ಟಣದಲ್ಲಿ   ಹಿಂದೂ ಯುವಕ ಸತತ ಮೂರನೇ ವರ್ಷ ರಂಜಾನ್‌ ಉಪವಾಸ ಆಚರಿಸಿ , ನಮಾಜ್‌ ಮಾಡಿ ಸುದ್ದಿಯಾಗಿದ್ದಾರೆ.  ಪವಿತ್ರ ರಂಜಾನ್ ಮಾಸದಲ್ಲಿ ಸತತ ಮೂರು ವರ್ಷಗಳಿಂದ ಉಪವಾಸ (ರೋಜಾ)

ರೀಲ್ಸ್‌ ವ್ಯಸನ: ವೃದ್ಧರನ್ನು ಕೊರಿಯರ್‌ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಕುಟುಂಬ

ರೀಲ್ಸ್​​ ಮಾಡುವ ವ್ಯಸನಕ್ಕೆ ವೃದ್ಧ ವ್ಯಕ್ತಿಯನ್ನು ಚೀಲದಲ್ಲಿ ಹಾಕಿ ಕೂರಿಯರ್ ಮಾಡಲು ಕುಟುಂಬವೊಂದು ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ, ಆಕೆಯ ಪತಿ, ಅತ್ತೆ ಹಾಗೂ ಮಾವ ಸೇರಿ ಐವರು ಮಂಗಳವಾರ ವೈಯ್ಯಾಲಿಕಾವಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೂರಿಯರ್ ಕಚೇರಿಗೆ ದೊಡ್ಡ

ವೀಸಾ ಮುಗಿದಿದ್ದರೂ ಬೆಂಗಳೂರಿನಲ್ಲಿ 542 ವಿದೇಶಿಗರು ಅಕ್ರಮ ವಾಸ

ವೀಸಾ ಅವಧಿ ಮೀರಿ ವಾಸಿಸುತ್ತಿರುವ 588 ವಿದೇಶಿಗರಲ್ಲಿ, ಹೆಚ್ಚಿನವರು ಬೆಂಗಳೂರು ನಗರದಲ್ಲೇ 542 ಮಂದಿ ಪತ್ತೆಯಾಗಿದ್ದಾರೆ. ಇನ್ನುಳಿದಂತೆ ಮೈಸೂರಿನಲ್ಲಿ 26, ಮಂಗಳೂರಿನಲ್ಲಿ 1, ಹುಬ್ಬಳ್ಳಿ-ಧಾರವಾಡದಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 11, ರಾಮನಗರದಲ್ಲಿ 4, ಉತ್ತರ ಕನ್ನಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ

ವಸತಿ ಕಟ್ಟಡದಲ್ಲಿ ಬೆಂಕಿ ದುರಂತ: ಎಂಟು ಮಂದಿ ಸಾವು

ವಸತಿ ಕಟ್ಟಡವೊಂದರಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಎಂಟು ಮಂದಿ ಮೃತಪಟ್ಟಿರುವ ಘಟನೆ ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿ ನಡೆದಿದೆ. ಮುಂಜಾನೆ ಏಳು ಗಂಟೆಯಷ್ಟೊತ್ತಿಗೆ ಅಗ್ನಿ ದುರಂತದ ಬಗ್ಗೆ ಕರೆ ಬಂದಿದೆ. ಘಟನಾ ಸ್ಥಳಕ್ಕೆ 30 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ರಕ್ಷಣಾ

ಪ್ರಜ್ವಲ್ ರೇವಣ್ಣ ವೀಡಿಯೊ ಕೇಸ್‌: ಪೆನ್‌ಡ್ರೈವ್‌ ಹಂಚಿಕೆಯಲ್ಲಿ 39 ಜನರ ವಿರುದ್ಧ ಆರೋಪ ಸಾಬೀತುಪಡಿಸಿದ ಎಸ್‌ಐಟಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ವೈರಲ್ ಪ್ರಕರಣದಲ್ಲಿ ಪೆನ್‌ಡ್ರೈವ್ ಹಂಚಿಕೆ ವಿಚಾರವಾಗಿ ವಿಶೇಷ ತನಿಖಾ ತಂಡ ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, 52 ಜನರ ಹೆಸರು ಉಲ್ಲೇಖಿಸಲಾಗಿದೆ. 39