Thursday, November 12, 2026
Menu

ಎನ್‌ವಿಡಿಯಾದಲ್ಲಿ ವಿವಾಹೇತರ ಸಂಬಂಧ ಬಯಲು – ಸಿಇಒ ಜೆನ್ಸನ್ ಹುವಾಂಗ್ ತಲೆದಂಡ!

ಬೀಜಿಂಗ್: ಜಾಗತಿಕ ಕೃತಕ ಬುದ್ಧಿಮತ್ತೆ ಚಿಪ್ ಮಾರುಕಟ್ಟೆಯ ದಿಗ್ಗಜ ಎನಿಸಿರುವ ಅಮೆರಿಕದ ಸೆಮಿಕಂಡಕ್ಟರ್ ದೈತ್ಯ ‘ಎನ್‌ವಿಡಿಯಾ’ (Nvidia) ಸಂಸ್ಥೆಯಲ್ಲಿ ತೀವ್ರ ಬಿಕ್ಕಟ್ಟು ಎದುರಾಗಿದೆ. ಕಂಪನಿಯ ಸಹ-ಸಂಸ್ಥಾಪಕ ಹಾಗೂ ಸಿಇಒ ಜೆನ್ಸನ್ ಹುವಾಂಗ್ ಅವರ ಎರಡು ವಿವಾಹೇತರ ಸಂಬಂಧಗಳು ಬಹಿರಂಗಗೊಂಡಿದ್ದು, ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಕುರಿತು ಎನ್‌ವಿಡಿಯಾ ಆಡಳಿತ ಮಂಡಳಿ ಗಂಭೀರ ಚಿಂತನೆ ನಡೆಸಿದೆ ಎಂದು ಪ್ರತಿಷ್ಠಿತ ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಅಧೀನ ಉದ್ಯೋಗಿ ಹಾಗೂ ಚೀನಾ ಗುಪ್ತಚರ ನಂಟಿನ ಆರೋಪ

‘ದಿ ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಜೆನ್ಸನ್ ಹುವಾಂಗ್ ಅವರು ಎನ್‌ವಿಡಿಯಾದ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ವಿಶೇಷವೆಂದರೆ, ಕಿಂಬರ್ಲಿ ಪೊವೆಲ್ ಅವರು ನೇರವಾಗಿ ಜೆನ್ಸನ್ ಹುವಾಂಗ್ ಅವರಿಗೆ ವರದಿ ಮಾಡಿಕೊಳ್ಳುವ ಹುದ್ದೆಯಲ್ಲಿದ್ದರು. ಮಾರ್ಚ್ ತಿಂಗಳಲ್ಲಿ ಸ್ಯಾನ್ ಜೋಸ್‌ನಲ್ಲಿ ನಡೆದ ಸಮ್ಮೇಳನದ ವೇಳೆ ಇಬ್ಬರೂ ಹೋಟೆಲ್‌ನಲ್ಲಿ ಆತ್ಮೀಯವಾಗಿ ವರ್ತಿಸುತ್ತಿರುವ ವಿಡಿಯೋ ಬಹಿರಂಗಗೊಂಡು ಕಂಪನಿಯ ಆಂತರಿಕ ನೀತಿ ಸಂಹಿತೆ ಉಲ್ಲಂಘನೆಯ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೂ ಮೊದಲು, ಸಿಂಗಾಪುರ ಮೂಲದ ‘ಮೆಗಾಸ್ಪೀಡ್’ ಕಂಪನಿಯ ಕಾರ್ಯನಿರ್ವಾಹಕಿ ಹಾಗೂ ಚೀನಾದ ಗುಪ್ತಚರ ಏಜೆಂಟ್ ಎಂದು ಶಂಕಿಸಲಾದ ಆಲಿಸ್ ಹುವಾಂಗ್ ಜೊತೆಗಿನ ಸಂಬಂಧವೂ ದೊಡ್ಡ ವಿವಾದ ಸೃಷ್ಟಿಸಿತ್ತು. ಈ ಕುರಿತು ತಮ್ಮ ಪತ್ನಿಗೆ ದ್ರೋಹ ಬಗೆದಿರುವುದಾಗಿ ಜೆನ್ಸನ್ ಹುವಾಂಗ್ ಸ್ವತಃ ಉದ್ಯೋಗಿಗಳಿಗೆ ಪತ್ರ ಬರೆದು ಕ್ಷಮೆಯಾಚಿಸಿದ್ದರು.

ಷೇರುಗಳಲ್ಲಿ ತೀವ್ರ ಕುಸಿತ

ಜೆನ್ಸೆನ್ ಹುವಾಂಗ್ ಈ ಅಕ್ರಮ ಸಂಬಂಧದ ಸುದ್ದಿಯು ಎನ್‌ವಿಡಿಯಾದ ಮಾರುಕಟ್ಟೆ ಮೌಲ್ಯವನ್ನು ಕುಸಿಯುವಂತೆ ಮಾಡಿದೆ. ಕಿಂಬರ್ಲಿಯ ಸಂಬಂಧದ ವಿಷಯ ಬಹಿರಂಗಗೊಂಡ ನಂತರ ಕಂಪನಿಯ ಷೇರುಗಳು ತೀವ್ರವಾಗಿ ಕುಸಿಯಲಾರಂಭಿಸಿವೆ. ಬುಧವಾರದ ವಹಿವಾಟಿನ ಅವಧಿಯಲ್ಲಿ ಎನ್‌ವಿಡಿಯಾ ಷೇರುಗಳು ಚೇತರಿಸಿಕೊಂಡು ಶೇಕಡಾ 2ಕ್ಕಿಂತ ಹೆಚ್ಚು ಏರಿಕೆಯನ್ನು ಕಂಡಿದ್ದವು.

ಆದರೆ ಕಿಂಬರ್ಲಿ ಮತ್ತು ಜೆನ್ಸೆನ್ ಅವರಿಗೆ ಸಂಬಂಧಿಸಿದ ವಿಷಯ ಬೆಳಕಿಗೆ ಬಂದಿರುವುದು ಹಾಗೂ ಕಂಪನಿಯ ಮಂಡಳಿಯು ಇಂದು ಸಭೆ ಸೇರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಹಿವಾಟು ಮುಕ್ತಾಯದ ನಂತರದ ಅವಧಿಯಲ್ಲಿ ಷೇರುಗಳು ಶೇಕಡಾ 8ರಷ್ಟು ಕುಸಿದು 159 ಡಾಲರ್‌ಗೆ ಇಳಿದವು. ಇದರ ಪರಿಣಾಮವಾಗಿ ಎನ್‌ವಿಡಿಯಾದ ಮಾರುಕಟ್ಟೆ ಮೌಲ್ಯದಲ್ಲಿ 280 ಶತಕೋಟಿ ಡಾಲರ್‌ (ಸುಮಾರು 26 ಲಕ್ಷ ಕೋಟಿ ರೂಪಾಯಿ) ನಷ್ಟ ಉಂಟಾಯಿತು.

90ರ ದಶಕದಿಂದ ಎನ್‌ವಿಡಿಯಾ ಸಂಸ್ಥೆಯನ್ನು ಜಾಗತಿಕ ಎಐ ಸಾಮ್ರಾಜ್ಯವನ್ನಾಗಿ ಕಟ್ಟಿ ಬೆಳೆಸಿದ ಜೆನ್ಸನ್ ಹುವಾಂಗ್ ಅವರ ವೈಯಕ್ತಿಕ ವಿವಾದಗಳು ಈಗ ಕಂಪನಿಯ ಆಡಳಿತ ಮತ್ತು ರಾಷ್ಟ್ರೀಯ ಭದ್ರತೆಗೆ ತಳುಕು ಹಾಕಿಕೊಂಡಿವೆ. ಇಂದು ನಡೆಯಲಿರುವ ಎನ್‌ವಿಡಿಯಾ ಆಡಳಿತ ಮಂಡಳಿಯ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರವು ಕೇವಲ ಜೆನ್ಸನ್ ಹುವಾಂಗ್ ಅವರ ವೃತ್ತಿಜೀವನವನ್ನಷ್ಟೇ ಅಲ್ಲದೆ ಇಡೀ ಜಾಗತಿಕ ಸೆಮಿಕಂಡಕ್ಟರ್ ಮತ್ತು ಎಐ ಮಾರುಕಟ್ಟೆಯ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆಯಿದೆ.

#NvidiaCrisis #JensenHuang #TechNews #GlobalAI #BusinessNews #UdayakalaNews

Related Posts

Leave a Reply

Your email address will not be published. Required fields are marked *