Menu

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ!

ಉದಯಕಾಲ ನ್ಯೂಸ್‌, ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನೂತನ ಮುಖ್ಯ ಕೋಚ್ (Head Coach) ಆಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಮುಂಬರುವ ಐಪಿಎಲ್ ಆವೃತ್ತಿಗಾಗಿ ಫ್ರಾಂಚೈಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

2019ರಲ್ಲಿ ಸಲಹೆಗಾರರಾಗಿ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಕೈಜೋಡಿಸಿದ್ದ ಗಂಗೂಲಿ, ಬಳಿಕ ಪುರುಷ ಹಾಗೂ ಮಹಿಳಾ ಎರಡೂ ತಂಡಗಳ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಇದೀಗ ಅವರು ಹೆಡ್ ಕೋಚ್ ಹುಂಡಿಯ ಮೂಲಕ ನೇರವಾಗಿ ಡಗೌಟ್‌ನ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ.

ದಾದಾ ಪ್ರತಿಕ್ರಿಯೆ
ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಸಂತಸ ಹಂಚಿಕೊಂಡಿರುವ ಸೌರವ್ ಗಂಗೂಲಿ, “ಐಪಿಎಲ್‌ನಲ್ಲಿ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ಫ್ರಾಂಚೈಸಿ. ಮಾಲೀಕರು, ಮ್ಯಾನೇಜ್‌ಮೆಂಟ್, ಸಹಾಯಕ ಸಿಬ್ಬಂದಿ ಹಾಗೂ ಆಟಗಾರರೊಂದಿಗೆ ನನಗೆ ಉತ್ತಮ ಒಡನಾಟವಿದೆ. ನಮ್ಮ ಬಳಿ ಅದ್ಭುತ ಪ್ರತಿಭೆಗಳಿದ್ದು, ಹೊಸ ಸೀಸನ್‌ನಲ್ಲಿ ಬಲಿಷ್ಠ ಹಾಗೂ ನಿರ್ಭೀತ ತಂಡವನ್ನು ಕಟ್ಟಲು ಕಾತರನಾಗಿದ್ದೇನೆ” ಎಂದಿದ್ದಾರೆ.

ಪಾರ್ಥ್ ಜಿಂದಾಲ್ ಹರ್ಷ
ಡೆಲ್ಲಿ ಕ್ಯಾಪಿಟಲ್ಸ್ ಅಧ್ಯಕ್ಷ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್ ಮಾತನಾಡಿ, “ದಾದಾ ಯಾವಾಗಲೂ ಡೆಲ್ಲಿ ಕ್ಯಾಪಿಟಲ್ಸ್ ಕುಟುಂಬದ ಅವಿಭಾಜ್ಯ ಅಂಗ. ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕ ಹಾಗೂ ಆಡಳಿತಗಾರರೊಬ್ಬರು ಈಗ ನಮ್ಮ ತಂಡದ ಮುಖ್ಯ ಕೋಚ್ ಆಗಿ ಕೋಚಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಅವರ ಅನುಭವ ಮತ್ತು ದೂರದೃಷ್ಟಿ ತಂಡವನ್ನು ಪ್ರಶಸ್ತಿ ಗೆಲ್ಲುವಂತೆ ಸಜ್ಜುಗೊಳಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#SouravGanguly #DelhiCapitals #IPL2027 #IPLHeadCoach #TeamIndia #CricketNews #UdayakalaNews #DC #IndianPremierLeague

Related Posts

Leave a Reply

Your email address will not be published. Required fields are marked *