Monday, September 21, 2026
Menu

ಕೊಪ್ಪಳದಲ್ಲಿ ಕೋತಿ ತಳ್ಳಿದ್ದಕ್ಕೆ ಬಿದ್ದು ಮೃತಪಟ್ಟ ಮಹಿಳೆ

ಕೊಪ್ಪಳದ ಬಿಟಿ ಪಾಟೀಲ್‌ ನಗರದಲ್ಲಿ ಕೋತಿಯೊಂದು ತಳ್ಳಿದ ರಭಸಕ್ಕೆ ಕುಸಿದುಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಜಮುನಿಸಾ ಬೇಗಂ (91) ಮೃತಪಟ್ಟವರು.

ನಜಮುನಿಸಾ ಬೇಗ್‌ಂ ಮನೆ ಮುಂದೆ ನಿಂತುಕೊಂಡಿದ್ದಾಗ ಬಂದ ಕೋತಿ ಅವರನ್ನು ತಳ್ಳಿದೆ, ಪರಿಣಾಮ ನಜಮುನಿಸಾ ಬೇಗಂ ಅವರ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಅಸು ನೀಗಿದ್ದಾರೆ. ನಜಮುನಿಸಾ ಬೇಗಂ ಅವರನ್ನು ಎಬ್ಬಿಸಲು ಬಂದ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕುಡಿದ ಮತ್ತಲ್ಲಿ ತಂದೆಯ ಕೊಲೆಗೈದ ಮಗ

ಕುಡಿದ ಮತ್ತಿನಲ್ಲಿದ್ದ ಮಗನನ್ನು ತಂದೆಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ತರೀಕೆರೆ ತಾಲೂಕಿನ ವಡ್ಡರದಿಬ್ಬದಲ್ಲಿ ನಡೆದಿದೆ. ತಮ್ಮಯ್ಯ (59) ಮಗನಿಂದಲೇ ಕೊಲೆಯಾದವರು, ಗಣೇಶ್ (29) ಕೊಲೆಗೈದ ಆರೋಪಿ. ಕುಡಿದ ಮತ್ತಲ್ಲಿ ಕುತ್ತಿಗೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಆರೋಪಿ ಗಣೇಶ್‌, ತಮ್ಮಯ್ಯನ ಮೊದಲ ಹೆಂಡತಿಯ ಮಗ ಎನ್ನಲಾಗಿದೆ.

ಕೊಲೆಯಾದ ತಮ್ಮಯ್ಯ ಪತ್ನಿ ಸತ್ತ ಬಳಿಕ 2ನೇ ಮದುವೆಯಾಗಿದ್ದ. ಅಪ್ಪ-ಮಗ ಯಾವಾಗಲೂ ಕುಡಿಯುತ್ತಾರೆ ಎಂದು ಪತ್ನಿ ಮನೆ ಬಿಟ್ಟು ಹೋಗಿದ್ದಳು. ಸೆ.19 ರಂದು ಪತ್ನಿಗೆ ಮನೆಗೆ ಬರುವಂತೆ ತಮ್ಮಯ್ಯ ಹೇಳಿದ್ದ. ಇಬ್ಬರು ಒಂದಾದರೆ ತನ್ನನ್ನು ಮನೆಯಿಂದ ಹೊರಗೆ ಹಾಕುತ್ತಾರೆ ಎಂದು ಆರೋಪಿ ಈ ಕೃತ್ಯ ಎಸಗಿದ್ದಾನೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತಕ್ಕೆ ಮೂವರು ಬಲಿ

ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ರಸ್ತೆ ಅಪಘಾತಕ್ಕೆ ಮೂವರು ಬಲಿಯಾಗಿದ್ದಾರೆ. ಅತಿವೇಗವಾಗಿ ಸಂಚರಿಸುತ್ತಿದ್ದ ಸ್ವಿಫ್ಟ್ ಕಾರು ಬೈಕ್‌ನ್ನು ಓವರ್‌ಟೇಕ್ ಮಾಡುವಾಗ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿ ಪಿಕ್‌ಅಪ್ ವಾಹನಕ್ಕೆ ಅಪ್ಪಳಿಸಿ ಕಾರು ಚಾಲಕ ರತನ್ ಅಲಿಯಾಸ್ ಉಣ್ಣಿ ಹಾಗೂ ಮಡಿಕೇರಿ ಅರಣ್ಯ ಇಲಾಖೆಯ ವಾಚ್‌ಮೆನ್ ಕುಮಾರ್ ಸೇರಿ ಮೂವರು ಮೃತಪಟ್ಟಿದ್ದಾರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುಡ್ಡೆಹೊಸೂರಿನ ಗಣಪತಿ ವಿಸರ್ಜನಾ ಕಾರ್ಯಕ್ರಮದಿಂದ ವಾಪಸ್‌ ಮಡಿಕೇರಿ ಕಡೆಗೆ ಹೋಗುವಾಗ ಈ ದುರಂತ ಸಂಭಬವಿಸಿದೆ. ಸ್ವಿಫ್ಟ್ ಕಾರಿನಲ್ಲಿದ್ದ ಸುವಿನ್, ಆದರ್ಶ್, ಚಂದ್ರಶೇಖರ್ ಹಾಗೂ ಅಜಯ್ ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Related Posts

Leave a Reply

Your email address will not be published. Required fields are marked *