Wednesday, September 23, 2026
Menu

ಕೊಪ್ಪಳದಲ್ಲಿ ರಸ್ತೆ ಅಪಘಾತ: ಯುವಕರಿಬ್ಬರ ಸಾವು

ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದ ಬಳಿ ಟಾಟಾ ಏಸ್‌ ಮತ್ತು ಬೈಕ್‌ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಂಡಿ ಹರ್ಲಾಪುರ ನಿವಾಸಿಗಳಾದ ಹುಲ್ಲೇಶ್ ವಾಲಿಕಾರ, ಮಾರುತಿ ಮೃತಪಟ್ಟವರು.

ಈ ಯುವಕರು ಮುಕುಂದ್ ಸ್ಟೀಲ್ ಕಂಪನಿಯ ಉದ್ಯೋಗಿಗಳಾಗಿದ್ದರು. ಮಂಗಳವಾರ ರಾತ್ರಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿಪ್ರಕರಣ ದಾಖಲಿಸಿಕೊಂಡಿದ್ದಾರೆ, ತನಿಖೆ ಮುಂದವರಿದಿದೆ.

ಕೊಡಗಿನಲ್ಲಿ ವಿದ್ಯುತ್‌ ಸ್ಪರ್ಶಿಸಿ ಮೂರು ವರ್ಷದ ಮಗು ಸಾವು

ಮನೆಯ ಹಿಂಬದಿಯಲ್ಲಿ ಆಟವಾಡುತ್ತಿದ್ದ 3ವರ್ಷದ ಮಗು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ಹೃದಯವಿದ್ರಾವಕ ಘಟನೆ ಸಿದ್ದಾಪುರದ ಚೆಟ್ಟಳ್ಳಿಯಲ್ಲಿ ನಡೆದಿದೆ.

ಚೆಟ್ಟಳ್ಳಿಯ ಪುತ್ತರಿರ ಶಿವು ನಂಜಪ್ಪ ಹಾಗೂ ರತಿ ದಂಪತಿಯ ಮಗು ಶಿಯಾನ್ ಕುಶಾಲಪ್ಪ(3) ಮೃತಪಟ್ಟಿದೆ. ಮನೆಯ ಹಿಂಬದಿಯಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

Related Posts

Leave a Reply

Your email address will not be published. Required fields are marked *