Menu

ದುಬಾರೆಯಲ್ಲಿ ಕಂಜನ್‌ ದಾಳಿಗೆ ಒಳಗಾಗಿದ್ದ ಮಾರ್ತಾಂಡ ಆನೆ ಸಾವು

ಕೊಡಗಿನ ದುಬಾರೆ ಶಿಬಿರದಲ್ಲಿ ಮಾರ್ತಾಂಡ ಮತ್ತು ಕಂಜನ್‌ ಆನೆಗಳ ಕದನದ ವೇಳೆ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಆನೆ ಬಿದ್ದು ಆಕೆ ಮೃತಪಟ್ಟಿದ್ದು, ಕದನದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೆ ಮಂಗಳವಾರ ಅಸು ನೀಗಿದೆ.

ಸೋಮವಾರ ಮಧ್ಯಾಹ್ನ ಆನೆಗಳ ಸ್ನಾನದ ವೇಳೆ ಮಾರ್ತಾಂಡ ಮತ್ತು ಕಂಜನ್ ಆನೆಗಳ ನಡುವೆ ಅನಿರೀಕ್ಷಿತವಾಗಿ ಕಾದಾಟ ಶುರುವಾಗಿ ಕಂಜನ್ ಆನೆಯು ಮಾರ್ತಾಂಡನ ಮೇಲೆ ಭೀಕರ ದಾಳಿ ನಡೆಸಿತ್ತು. ಕಂಜನ್ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ತಿವಿದತ್ತು. ಇದರಿಂದಾಗಿ ಮಾರ್ತಾಂಡನಿಗೆ ಗಂಭೀರ ಗಾಯಗಳಾಗಿದ್ದವು. ಪಶುವೈದ್ಯ ಮುಜೀಬ್ ನೇತೃತ್ವದ ತಂಡ ಇಡೀ ರಾತ್ರಿ ಮಾರ್ತಾಂಡನಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಪ್ರಯತ್ನಿಸಿದ್ದರೂ ಫಲಕಾರಿಯಾಗಿಲ್ಲ. ಗಾಯಗಳು ಅತ್ಯಂತ ಆಳವಾಗಿದ್ದರಿಂದ ಮತ್ತು ಅತಿ ರಕ್ತಸ್ರಾವವಾಗಿ ಮಾರ್ತಾಂಡ ಮೃತಪಟ್ಟಿದೆ.

ಮಾರ್ತಾಂಡ ಆನೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮಾವುತ ಮತ್ತು ಇತರ ಸಿಬ್ಬಂದಿ ದುಃಖಿತರಾಗಿದ್ದಾರೆ. ಸೌಮ್ಯ ಮಾರ್ತಾಂಡ ಅರಣ್ಯ ಇಲಾಖೆಯ ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು, ಪ್ರವಾಸಿಗರಿಗೆ ಅತ್ಯಂತ ಪ್ರಿಯವಾಗಿತ್ತು.
ಆನೆಗಳಿಗೆ ಸ್ನಾನ ಮಾಡಿಸುವಾಗ ಮಾವುತರ ನಡುವಿನ ಹೊಂದಾಣಿಕೆ ಇರಲಿಲ್ಲವೇ, ಆನೆಗಳನ್ನು ನಿಯಂತ್ರಿಸಲು ಸಿದ್ಧತೆ ಇರಲಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸದ್ಯಕ್ಕೆ ದುಬಾರೆ ಶಿಬಿರವನ್ನು ಪ್ರವಾಸಿಗರಿಗೆ ಬಂದ್ ಮಾಡಲಾಗಿದೆ.

Related Posts

Leave a Reply

Your email address will not be published. Required fields are marked *