Wednesday, August 19, 2026
Menu

ಚಿನ್ನದ ಗಣಿ ಕುಸಿದು 30 ಕಾರ್ಮಿಕರು ಬಲಿ

ಮಧ್ಯ ಆಫ್ರಿಕಾ ಗಣರಾಜ್ಯದ ಪಶ್ಚಿಮ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದಾಗ ಚಿನ್ನದ ಗಣಿ ಕುಸಿದು ಮೂವತ್ತು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಅವಶೇಷಗಲಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ನಾನಾ-ಮಾಂಬೆರೆ ಪ್ರಾಂತ್ಯದ ಅಬ್ಬಾ ಪ್ರದೇಶದಲ್ಲಿ ಈ ಗಣಿ ದುರಂತ ನಡೆದಿದೆ, ಗಣಿಯ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದಿದೆ. ಸ್ಥಳೀಯ ಉಪ-ಆಡಳಿತ ಪ್ರದೇಶದ ಉಪ ಮೇಯರ್ ಸುಲೇಮನೆ ಬಿ ಮಾಹಿತಿ ನೀಡಿದ್ದು, ರಕ್ಷಣಾ ತಂಡಗಳು ಮತ್ತು ಸ್ಥಳೀಯರು 30 ಶವಗಳನ್ನು ಹೊರತೆಗೆದರು. ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಅನೇಕರು ಸಿಕ್ಕಿಕೊಂಡಿದ್ದು, ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ. ಸಂತ್ರಸ್ತರಿಗೆ ಪರಿಹಾರ ಮತ್ತು ನೆರವು ನೀಡಲು ಆಡಳಿತವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಇದೊಂದು ಭೀಕರ ದುರಂತ, ಕುಸಿದ ಗಣಿಯ ಅವಶೇಷಗಳಡಿ ಸಿಲುಕಿದವರನ್ನು ಹೊರ ತೆಗೆಯಲು ನೆರವು ನೀಡುವಂತೆ ನಾವು ನಾನಾ ಸಂಘಟನೆಗಳು ಮತ್ತು ಸದುದ್ದೇಶ ಹೊಂದಿರುವ ಎಲ್ಲ ಜನರಲ್ಲೂ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ. ಅವಶೇಷಗಳಡಿ ಸಿಲುಕಿದವರನ್ನು ಸಜೀವವಾಗಿ ಹೊರ ತೆಗೆಯುವ ಸಾಧ್ಯತೆ ಕ್ಷೀಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

Related Posts

Leave a Reply

Your email address will not be published. Required fields are marked *