Menu

H-1B ವೀಸಾಗೆ 1 ಲಕ್ಷ ಡಾಲರ್‌ ಶುಲ್ಕ ರದ್ದುಗೊಳಿಸಿದ ಅಮೆರಿಕ ಕೋರ್ಟ್‌

ಡೊನಾಲ್ಡ್ ಟ್ರಂಪ್ ಆಡಳಿತ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುವ H-1B ವೀಸಾಗಳ ಮೇಲೆ ವಿಧಿಸಿದ್ದ 1 ಲಕ್ಷ ಡಾಲರ್‌ ( ರೂ.83 ಲಕ್ಷ) ಶುಲ್ಕವನ್ನು ಅಲ್ಲಿನ ಫೆಡರಲ್ ಕೋರ್ಟ್ ರದ್ದುಗೊಳಿಸಿದೆ.

ಬೋಸ್ಟನ್‌ನ ಫೆಡರಲ್ ಜಿಲ್ಲಾ ನ್ಯಾಯಾಧೀಶ ಲಿಯೋ ಸೊರೊಕಿನ್ ಈ ಸಂಬಂಧ ತೀರ್ಪು ನೀಡಿದ್ದು, ಈ ಶುಲ್ಕವನ್ನು “ಕಾನೂನುಬಾಹಿರ ತೆರಿಗೆ ಎಂದು ಪರಿಗಣಿಸಿ ಅಸಿಂಧುಗೊಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಟ್ರಂಪ್ ಆಡಳಿತ ಹೊಸ H-1B ವೀಸಾ ಅರ್ಜಿದಾರರಿಗೆ 1 ಲಕ್ಷ ಡಾಲರ್ ಪಾವತಿಸಿದರೆ ಅರ್ಜಿಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುವ ವ್ಯವಸ್ಥೆ ಜಾರಿಗೊಳಿಸಿತ್ತು. ಇಂತಹ ತೆರಿಗೆ ವಿಧಿಸುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ ಎಂದು ಕೋರ್ಟ್‌
H-1B ವೀಸಾ ಅರ್ಜಿದಾರರಿಗೆ 1 ಲಕ್ಷ ಡಾಲರ್ ಶುಲ್ಕ ಆದೇಶವನ್ನು ಪ್ರಶ್ನಿಸಿ 20 ಡೆಮಾಕ್ರಟಿಕ್ ಪಕ್ಷದ ರಾಜ್ಯಗಳ ಅಟಾರ್ನಿ ಜನರಲ್‌ಗಳು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಟ್ರಂಪ್ ಆಡಳಿತದ ಕ್ರಮವು ಅಮೆರಿಕ ಕಾಂಗ್ರೆಸ್‌ಗೆ ಸೇರಿದ ವಲಸೆ ನೀತಿ ಹಾಗೂ ತೆರಿಗೆ ವಿಧಿಸುವ ಅಧಿಕಾರವನ್ನು ಅತಿಕ್ರಮಿಸಿದೆ ಎಂದು ಹೇಳಿದೆ.

ಕೆಲವೇ ದಿನಗಳ ಹಿಂದೆ ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್, 2026ನೇ ಹಣಕಾಸು ವರ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು H-1B ಅರ್ಜಿದಾರರು ತ್ವರಿತ ಪ್ರಕ್ರಿಯೆಗಾಗಿ 1 ಲಕ್ಷ ಡಾಲರ್ ಶುಲ್ಕ ಪಾವತಿಸಿದ್ದಾರೆ ಎಂದು ಸೆನೆಟ್ ಸಮಿತಿಗೆ ಮಾಹಿತಿ ನೀಡಿದ್ದರು. ಹೆಚ್ಚುವರಿ ಶುಲ್ಕ ಪಾವತಿಸಿದ ಅರ್ಜಿದಾರರ ಅರ್ಜಿಗಳು 15 ದಿನಗಳಲ್ಲಿ ವಿಲೇವಾರಿಯಾಗುತ್ತಿದ್ದರೆ, ಸಾಮಾನ್ಯ ಪ್ರಕ್ರಿಯೆಯಲ್ಲಿ 7.5 ತಿಂಗಳು ಕಾಯಬೇಕಾಗುತ್ತಿತ್ತು. ಭಾರತೀಯ ಐಟಿ ವೃತ್ತಿಪರರು, ವೈದ್ಯರು ಹಾಗೂ ಪರಿಣತ ಉದ್ಯೋಗಿಗಳು H-1B ವೀಸಾ ಪಡೆಯುವ ಅತಿ ದೊಡ್ಡ ಸಮುದಾಯ.

Related Posts

Leave a Reply

Your email address will not be published. Required fields are marked *