Menu

ಪಿಎಂ ಕಿಸಾನ್ 24ನೇ ಕಂತಿನಡಿ ₹2,000 ಬಿಡುಗಡೆ: 9.34 ಕೋಟಿ ರೈತರು ಫಲಾನುಭವಿಗಳು

ಉದಯಕಾಲ ನ್ಯೂಸ್, ನವದೆಹಲಿ: ದೇಶದ ಅನ್ನದಾತರಿಗೆ ಮತ್ತೊಮ್ಮೆ ಆರ್ಥಿಕ ಬಲ ತುಂಬಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISAN) ಯೋಜನೆಯ 24ನೇ ಕಂತಿನ ಹಣವು ಇಂದು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ. ಈ ಯೋಜನೆಯು ರೈತರ ಕೃಷಿ ಖರ್ಚು-ವೆಚ್ಚಗಳನ್ನು ನಿರ್ವಹಿಸಲು ದೊಡ್ಡ ಮಟ್ಟದ ನೆರವು ನೀಡುತ್ತಿದೆ.

ಬನಸ್ಕಾಂಠದಲ್ಲಿ ಪ್ರಧಾನಿ ಮೋದಿ ಚಾಲನೆ

ಗುಜರಾತ್‌ನ ಬನಸ್ಕಾಂಠ ಜಿಲ್ಲೆಯ ಭಿಲ್ಡಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 10 ಗಂಟೆಗೆ 24ನೇ ಕಂತಿನ ಹಣ ಬಿಡುಗಡೆಯ ಅಧಿಕೃತ ಚಾಲನೆ ನೀಡಲಿದ್ದಾರೆ. ದೇಶಾದ್ಯಂತ ಇರುವ ಒಟ್ಟು 9.34 ಕೋಟಿಗೂ ಅಧಿಕ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕಾಗಿ ಒಟ್ಟು 18,690 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಬಿಡುಗಡೆ ಮಾಡಲಾಗುತ್ತಿದೆ.

ವರ್ಷಕ್ಕೆ ₹6,000 ಆರ್ಥಿಕ ನೆರವು

ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕ ಒಟ್ಟು 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ. ಈ ಮೊತ್ತವನ್ನು ತಲಾ 2,000 ರೂಪಾಯಿಗಳಂತೆ ಮೂರು ಸಮಾನ ಕಂತುಗಳಲ್ಲಿ ವರ್ಷವಿಡೀ ವಿತರಿಸಲಾಗುತ್ತದೆ. ಈ ಮುಂಚೆ ಜೂನ್ 20ರಂದು 23ನೇ ಕಂತಿನ ಹಣ ಬಿಡುಗಡೆಯಾಗಿತ್ತು. ಪ್ರಸ್ತುತ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಈ ಹಣವು ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಹಣ ಪಡೆಯಲು ನಿಯಮಗಳು ಕಡ್ಡಾಯ

ಸರ್ಕಾರದ ಮಾರ್ಗಸೂಧಿಯಂತೆ, ಕೆಲವು ಪ್ರಮುಖ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ರೈತರಿಗೆ ಮಾತ್ರ ಈ ಹಣ ಲಭ್ಯವಾಗಲಿದೆ

ಇ-ಕೆವೈಸಿ (e-KYC):ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು.
ಆಧಾರ್ ಜೋಡಣೆ:ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಅಗತ್ಯ.
ಭೂ ದಾಖಲೆಗಳು: ಜಮೀನಿನ ನೈಜ ದಾಖಲೆಗಳ ಪರಿಶೀಲನೆ ಸರಿಯಾಗಿರಬೇಕು.

ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೇ ಇಲ್ಲವೇ ಎಂಬುದನ್ನು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ (pmkisan.gov.in) ಮೂಲಕ ‘ಬೆನಿಫಿಷಿಯರಿ ಸ್ಟೇಟಸ್’ ಪರಿಶೀಲಿಸಿಕೊಳ್ಳಬಹುದು.

#PMKisan #KisanSammanNidhi #NarendraModi #FarmersUpdate #UdayakalaNews #AgricultureIndia #CentralScheme

 

Related Posts

Leave a Reply

Your email address will not be published. Required fields are marked *