ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯಲ್ಲಿ ಪ್ರಿನಿಪಾಲ್ ರೂಪಾ ರೆಡ್ಡಿಯವರನ್ನು ಕೊಲೆ ಮಾಡಿರುವುದು ಆಕೆಯ ವಿದ್ಯಾರ್ಥಿಗಳು ಎಂಬದನ್ನು ಪೊಲೀಸರರು ತನಿಖೆಯಲ್ಲಿ ದೃಢಪಡಿಸಿದ್ದಾರೆ.
ನಾಗಾರ್ಜುನ ಗ್ರಾಮರ್ ಕಾನ್ಸೆಪ್ಟ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳು ಜಲ್ಸಾ ಚಟಕ್ಕೆ ಒಳಗಾಗಿ ಹಣಕ್ಕಾಗಿ ಪ್ರಾಂಶುಪಾಲರಾದ ರೂಪಾ ರೆಡ್ಡಿ ಅವರನ್ನು ಕೊಲೆ ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ.
ನಲ್ಗೊಂಡ ಜಿಲ್ಲಾ ಎಸ್ಪಿ ಶರತ್ ಚಂದ್ರ ಪವಾರ್, ಪ್ರಕರಣದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಎಲ್ಲಾ ಆರೋಪಿಗಳನ್ನು ಕೊಂಡಮಲ್ಲೇಪಲ್ಲಿ ಮಂಡಲದ ಬಾಲಕರು ಎಂದು ಗುರುತಿಸಲಾಗಿದೆ. ಪ್ರಾಂಶುಪಾಲರ ಕೊಲೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಇನ್ನಷ್ಟು ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿ ಶರತ್ ಚಂದ್ರ ಪವಾರ್ ಹೇಳಿದ್ದಾರೆ.
ಆಗಸ್ಟ್ 11ರಂದು ಕೊಂಡಮಲ್ಲೇಪಲ್ಲಿಯಲ್ಲಿರುವ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಕೆ. ರೂಪಾ ರೆಡ್ಡಿ ಅವರನ್ನು ಬರ್ಬರ ಹತ್ಯೆ ಮಾಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಮೂವರು ವಿದ್ಯಾರ್ಥಿಗಳು ಅವರನ್ನು ಕೊಲೆ ಮಾಡಿದ್ದಾರೆ ಎಂದು ಗುರುತಿಸಲಾಗಿದೆ. ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಮಹಿಳಾ ಆಯೋಗವು, ಈ ವಿಚಾರದಲ್ಲಿ ಜಿಲ್ಲಾ ಎಸ್ಪಿಗೆ ಆದೇಶ ನೀಡಿದೆ.


