Wednesday, October 28, 2026
Menu

10 ಕೋಟಿ ರೂ.ಅಕ್ರಮ ವ್ಯವಹಾರ: ದರ್ಶನ್ ಪತ್ನಿ ಹಾಗೂ ನಟ ಧನ್ವೀರ್ ವಿರುದ್ಧ ಇ.ಡಿ, ಐ.ಟಿಗೆ ದೂರು!

ಉದಯಕಾಲ ನ್ಯೂಸ್, ಬೆಂಗಳೂರು: ಜೈಲುಪಾಲಾಗಿರುವ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅವರ ಕಾನೂನು ಹೋರಾಟ ಹಾಗೂ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ, ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಹಾಗೂ ಯುವ ನಟ ಧನ್ವೀರ್ ಗೌಡ ವಿರುದ್ಧ ಬೃಹತ್ ಹಣಕಾಸು ಅಕ್ರಮದ ಗಂಭೀರ ಆರೋಪ ಕೇಳಿಬಂದಿದೆ. ಇವರ ನಡುವೆ ಬರೋಬ್ಬರಿ 10 ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತದ ಅಕ್ರಮ ನಗದು ವ್ಯವಹಾರ ನಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ (IT) ಇಲಾಖೆಗೆ ಅಧಿಕೃತವಾಗಿ ದೂರು ದಾಖಲಾಗಿದೆ.

ಅಕ್ರಮದ ವಿರುದ್ಧ ದೂರು

ಹೈಕೋರ್ಟ್ ವಕೀಲರಾದ ಪ್ರಶಾಂತ್ ಮೆಥಲ್ ಎಂಬುವರು ಐ.ಟಿ ಮತ್ತು ಇ.ಡಿ ಅಧಿಕಾರಿಗಳಿಗೆ ಈ ದೂರು ಸಲ್ಲಿಸಿದ್ದು, ವಿಜಯಲಕ್ಷ್ಮಿ ದರ್ಶನ್ ಮತ್ತು ನಟ ಧನ್ವೀರ್ ಗೌಡ ಅವರ ನಡುವೆ ಕಾನೂನುಬಾಹಿರವಾಗಿ ಕೋಟ್ಯಂತರ ರೂ. ಹಣದ ವಹಿವಾಟು ನಡೆದಿದೆ ಎಂದು ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ ಉಂಟಾದ ವಿವಾದ ಮತ್ತು ಗಲಾಟೆಗೆ ಈ 10 ಕೋಟಿ ರೂಪಾಯಿ ನಗದು ವ್ಯವಹಾರವೇ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ದರ್ಶನ್ ಅವರ ಪ್ರಕರಣದ ಕಾನೂನು ಹೋರಾಟ ಹಾಗೂ ಪ್ರಕರಣದ ನಿರ್ವಹಣೆಗಾಗಿ ಈ ಹಣದ ವರ್ಗಾವಣೆ ನಡೆದಿದೆ ಎಂಬ ಗುಮಾನಿ ವ್ಯಕ್ತಪಡಿಸಲಾಗಿದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿ ಅಥವಾ ವ್ಯವಹಾರದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ (Cash Transaction) ಪಡೆಯುವಂತಿಲ್ಲ ಅಥವಾ ನೀಡುವುದಿಲ್ಲ. ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ ನೇರವಾಗಿ 10 ಕೋಟಿ ರೂಪಾಯಿ ನಗದು ರೂಪದಲ್ಲಿ ಕೈಯಿಂದ ಕೈಗೆ ಅಥವಾ ಅಕ್ರಮ ಮಾರ್ಗದ ಮೂಲಕ ವ್ಯವಹಾರ ನಡೆಸಲಾಗಿದೆ ಎಂದು ದೂರುದಾರರು ಗಂಭೀರವಾಗಿ ಆರೋಪಿಸಿದ್ದಾರೆ.

ಸಮಗ್ರ ತನಿಖೆಗೆ ಒತ್ತಾಯ

ಈ ಬೃಹತ್ ಮೊತ್ತದ ಹಣದ ಅಸಲಿ ಮೂಲ ಯಾವುದು? ಈ ಅಕ್ರಮ ವಹಿವಾಟಿನ ಹಿಂದಿನ ಗುಪ್ತ ಉದ್ದೇಶವೇನು? ಎಂಬ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ದೇಶದ ಕಾನೂನು ಶ್ರೀಮಂತರಿಗೂ ಸಾಮಾನ್ಯರಿಗೂ ಒಂದೇ ಆಗಿದ್ದು, ದರ್ಶನ್ ವಿರುದ್ಧದ ಇತರೆ ಕಾನೂನು ಪ್ರಕ್ರಿಯೆಗಳು ಹೇಗೆ ನಡೆಯುತ್ತಿವೆಯೋ, ಅದೇ ಮಾದರಿಯಲ್ಲಿ ಈ 10 ಕೋಟಿ ರೂ. ಅಕ್ರಮ ನಗದು ವರ್ಗಾವಣೆ ಜಾಲದ ಬಗ್ಗೆಯೂ ಜಿಜ್ಞಾಸೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ. ಸ್ಯಾಂಡಲ್‌ವುಡ್ ಅಂಗಳದಲ್ಲಿ ಈ ಬೆಳವಣಿಗೆ ಭಾರೀ ಸಂಚಲನ ಮೂಡಿಸಿದೆ.

#VijayalakshmiDarshan #DhanveerGowda #EnforcementDirectorate #IncomeTaxIndia #DarshanThoogudeepa #IllegalCashTransaction #UdayakalaNews #SandalwoodNews #LegalAction #CurrentAffairs

Related Posts

Leave a Reply

Your email address will not be published. Required fields are marked *