Wednesday, September 23, 2026
Menu

ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಯರ ಸ್ನಾನದ ಚಿತ್ರ ಸೆರೆ ಹಿಡಿಯುತ್ತಿದ್ದಾತ ಅರೆಸ್ಟ್‌

ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಯರು ಸ್ನಾನ ಮಾಡುತ್ತಿದ್ದ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಆರೋಪದಡಿಯಲ್ಲಿ ಸಿದ್ದಾಪುರ  ಖಾಸಗಿ ಸಂಸ್ಥೆಯ ಕಾಫಿ ತೋಟದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಬಾಡಗ – ಬಾಣಂಗಾಲ ಗ್ರಾಮದ ಖಾಸಗಿ ಸಂಸ್ಥೆಗೆ ಸೇರಿದ ತೋಟದಲ್ಲಿ ಈ ಹಿಂದೆ ಫೀಲ್ಡ್ ಆಫೀಸರ್ ಆಗಿದ್ದ ದೀಪಕ್ (39) ಎಂಬಾತ ತೋಟದ ಲೈನ್ ಮನೆಯೊಂದರ ಸ್ನಾನದ ಕೊಠಡಿಯ ಮೇಲ್ಛಾವಣಿಯ ಹೆಂಚಿನ ಬದಿಯ ಮರದ ರೀಪರ್‌ಗೆ ರಹಸ್ಯ ಕ್ಯಾಮರವೊಂದನ್ನು ಅಳವಡಿಸಿ ಅದಕ್ಕೆ ಚಿಪ್ ಹಾಕಿ ತನ್ನ ಮೊಬೈಲ್ ಸಂಖ್ಯೆಗೆ ಅದರ ಸಂಪರ್ಕವನ್ನು ಕಲ್ಪಿಸಿಕೊಂಡಿದ್ದ ಎನ್ನಲಾಗಿದೆ.

ಇತ್ತೀಚೆಗೆ ಆ ಖಾಸಗಿ ತೋಟದ ಲೈನ್‌ಮನೆಗೆ ಗೌರಿ – ಗಣೇಶ ಉತ್ಸವಕ್ಕೆ ಬಂದವೇಳೆ ಸ್ನಾನಕ್ಕೆ ಮಹಿಳೆ ತೆರಳಿದಾಗ ಈ ರಹಸ್ಯ ಕ್ಯಾಮೆರಾ ಕಂಡುಬಂದಿದ್ದು, ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಭೇಟಿ ನೀಡಿ ಆರೋಪಿ ದೀಪಕ್‌ನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *