Friday, September 11, 2026
Menu

ಗಣೇಶ ಮೂರ್ತಿ ಒಯ್ಯುವಾಗ ವಿದ್ಯುತ್‌ ತಂತಿ ತಗುಲಿ ಯುವಕ ಸಾವು

ರಾಯಚೂರಿನ ಸಿರವಾರ ತಾಲೂಕಿನಲ್ಲಿರುವ ಅತ್ತನೂರು ಗ್ರಾಮದಲ್ಲಿ ವಿದ್ಯುತ್‌ ತಂತಿ ತಗುಲಿ ಪ್ರತಿಷ್ಠಾಪನೆಗಾಗಿ ತರುತ್ತಿದ್ದ ಗಣೇಶ ಮೂರ್ತಿ ಉರುಳಿ ಬಿದ್ದು, ಯುವಕ ಮೃತಪಟ್ಟಿದ್ದಾನೆ. ೨೭ ವರ್ಷದ ಪ್ರೇಮ್‌ ಕುಮಾರ್‌ ಮೃತಪಟ್ಟ ಯುವಕ.

ಪ್ರತಿಷ್ಠಪನೆಗಾಗಿ ಗಣೇಶ ಮೂರ್ತಿ ಕೊಂಡೊಯ್ಯುತ್ತಿದ್ದಾಗ ವಿದ್ಯುತ್ ತಂತಿ ತಾಗಿ ಮೂರ್ತಿ ಉರುಳಿಬಿದ್ದಿದೆ. ಮೂರ್ತಿ ಬಿದ್ದ ರಭಸಕ್ಕೆ ತಂತಿ ಕಟ್‌ ಆಗಿ ಲಾರಿಯಲ್ಲಿ ಮಲಗಿದ್ದ ಯುವಕನ ಮೇಲೆ ಬಿದ್ದಿದೆ. ವಿದ್ಯುತ್‌ ಸ್ಪರ್ಶಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದ ಯುವಕರು ಲಾರಿಯಿಂದ ಹೊರಗೆ ಜಿಗಿದು ಪಾರಾಗಿದ್ದಾರೆ.

ಹನೂರಿನಲ್ಲಿ ಅಪಘಾತಕ್ಕೆ ಮೂವರು ಬಲಿ

ಚಾಮರಾಜನಗರ ಜಿಲ್ಲೆಯ ಹಬೂರು ರತಾಲೂಕಿನ ಆರ್‌ಎಸ್‌ ದೊಡ್ಡಿ ಸಮೀಪ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಹನೂರು ತಾಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾದ ರಮೇಶ್, ಸುರೇಶ್ ಮತ್ತು ಮುನಿಯಪ್ಪ ಮೃತಪಟ್ಟವರು.

ತುರ್ತು ಕಾರ್ಯನಿಮಿತ್ತ ಕೊಪ್ಪ ಗ್ರಾಮದಿಂದ ಆರ್.ಎಸ್. ದೊಡ್ಡಿ ಮಾರ್ಗವಾಗಿ ಕೊಳ್ಳೇಗಾಲದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ರಕ್ತಸ್ರಾವವಾಗಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಾರಿಯಾದ ಕಾರು ಮತ್ತು ಚಾಲಕನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *