Breaking
ಪತ್ನಿಯ ಕೊಲೆ ಆರೋಪದಡಿ ಧಾರವಾಡ ಜೈಲಿನಲ್ಲಿದ್ದ ಕೈದಿ ಆತ್ಮಹತ್ಯೆ
ಪತ್ನಿಯ ಕೊಲೆ ಆರೋಪದಡಿ 14 ವರ್ಷಗಳ ಶಿಕ್ಷೆಗೆ ಒಳಗಾಗಿ ಧಾರವಾಡ ಜೈಲಿನಲ್ಲಿದ್ದ ಕೈದಿಯೊಬ್ಬರು ಕಾರಾಗೃಹದ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೈಲಿನ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಸಾಪುರದ ಈಶ್ವರಪ್ಪ ಪೂಜಾರ್ ಎಂದು ಗುರುತಿಸಲಾಗಿದೆ. ಏಳು ವರ್ಷಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಕಾಲ ಜೈಲಿನಲ್ಲೇ ಕಳೆದಿದ್ದ ಈಶ್ವರಪ್ಪ ಜೈಲಿನಲ್ಲೇ
ಮುಂಬೈ ಮಹಾನಗರ ಪಾಲಿಕೆ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಗೆಲುವು
ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಲ್ನಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಗೆದ್ದಿದ್ದಾರೆ. 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ಅವರ ಮನೆಯ ಹೊರಗೆ ಗೌರಿ ಲಂಕೇಶ್ ಅವರ ಹತ್ಯೆ
KFC ಇಂಡಿಯಾದಿಂದ ಹೊಸ ‘ಡಂಕ್ಡ್’ ರೇಂಜ್ ಶುರು!
KFC ಇಂಡಿಯಾ ತನ್ನ ಹೊಸ ಡಂಕ್ಡ್ ರೇಂಜ್ ಪರಿಚಯಿಸಿದ್ದು, KFC ಪ್ರಿಯರಿಗೆ ಸಾಸ್-ಲೋಡೆಡ್ ಟ್ವಿಸ್ಟ್ ನೀಡಲು ತಯಾರಾಗಿದೆ. KFCಯ ಅದ್ಭುತವಾದ ಸಾಸ್ಸಮ್ ಶ್ರೇಣಿಯು ಐಕಾನಿಕ್ ಫಿಂಗರ್ ಲಿಕಿಂಗ್ ಗುಡ್ ಚಿಕನ್ ಅನ್ನು ಟೇಸ್ಟಿಯಾದ ಸಾಸ್‌ಗಳಲ್ಲಿ ಮುಳುಗಿಸಲಿದೆ. ಹೊಸ ಫೈರಿ ಟೆಕ್ಸಾಸ್ BBQ
ಮದುವೆಗೆ ಐದು ದಿನ ಬಾಕಿ: ಮಂಡ್ಯದಲ್ಲಿ ಆಸ್ತಿಗಾಗಿ ತಮ್ಮನ ಕೊಲೆಗೈದ ಅಣ್ಣ
ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಆಸ್ತಿಗಾಗಿ ಅಣ್ಣನೊಬ್ಬ ಸದ್ಯದಲ್ಲೇ ಮದುವೆಯಾಗಲಿದ್ದ ತಮ್ಮನನ್ನು ಇರಿದು ಕೊಂದಿರುವ ಘಟನೆ ನಡೆದಿದೆ. ಯೋಗೇಶ್ (30) ಅಣ್ಣ ಮತ್ತು ಆತನ ಮಕ್ಕಳಿಂದ ಕೊಲೆಯಾದವರು. ಯೋಗೇಶ್‌ಗೆ ಇದೇ ತಿಂಗಳು 21 ರಂದು ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮವಿತ್ತು. ಸಂಬಂಧಿಕರಿಗೆಲ್ಲ
ತುಮಕೂರಿನಲ್ಲಿ ಬಾಲಕಿ ಎದುರೇ ತಂದೆಯ ಕೊಲೆಗೈದಿದ್ದ ಕಳ್ಳರು ಅರೆಸ್ಟ್
ತುಮಕೂರಿನಲ್ಲಿ ಮಗಳ ಜೊತೆ ಮನೆ ಮುಂದೆ ಕುಳಿತಿದ್ದ ಮಂಜುನಾಥ್ ಎಂಬ ವ್ಯಕ್ತಿಯನ್ನು ಅಪರಿಚಿತ ಮುಸುಕುಧಾರಿಗಳು ಕೊಲೆಗೈದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಿದ್ದಾರೆ. ತಮಿಳುನಾಡಿನ ಸತೀಶ, ಕೇಶವನ್, ಕವಿತೇಶ್ವರನ್ ಹಾಗೂ ಅರುಣ್ ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರಿನ
ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಮಗನೂ ಭಾಗಿ ಎಂದ ಇಡಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ದೇಶದಿಂದ ಪಲಾಯನ ಮಾಡಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ) ಚೋಕ್ಸಿ ಮಗ ರೋಹನ್ ಚೋಕ್ಸಿ ಕೂಡ ಅಕ್ರಮ ಹಣ ವರ್ಗಾವಣೆಯಲ್ಲಿ ಸಕ್ರಿಯ ಭಾಗಿ ಎಂದು
ಮುಖ್ಯಮಂತ್ರಿ ಸ್ಥಾನ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ: ಡಿಕೆ ಶಿವಕುಮಾರ್
“ಮುಖ್ಯಮಂತ್ರಿ ಸ್ಥಾನದ ವಿಚಾರ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದದಾರೆ. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಅವರ ಜೊತೆ ಸಿಎಂ
ಬೆಂಗಳೂರು ಉಪನಗರ ರೈಲು ಯೋಜನೆ ತ್ವರಿತಗೊಳಿಸಲು ಪ್ರಧಾನಿ ಸೂಚನೆ
ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿದ್ದು, ತ್ವರಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಇತ್ತೀಚೆಗೆ ನಡೆಸಿದ ಪ್ರಗತಿ ಸಭೆಯಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎರಡು ಮೆಗಾ ಯೋಜನೆಗಳನ್ನು ಪರಿಶೀಲಿಸಿದ ಬಳಿಕ ಈ ಸೂಚನೆ
ಕೌಟುಂಬಿಕ ಕಲಹ: ಬೆಂಗಳೂರಿನಲ್ಲಿ ಮಗು ಕೊಂದು ಸುಸೈಡ್ ಮಾಡಿಕೊಂಡ ತಾಯಿ
ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ಪತಿ ಮತ್ತು ಪತ್ನಿ ಮಧ್ಯೆ ಜಗಳವಾದ ಬಳಿಕ ಪತ್ನಿಯು ಬೆಂಕಿ ಹಚ್ಚಿ ನಾಲ್ಕು ವರಚದ ಮಗಳನ್ನು ಕೋಮದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿ ಸೀತಾ (29), ಮಗಳು ಸೃಷ್ಟಿ (4) ಮೃತಪಟ್ಟವರು. ಗುರುವಾರ
ಚೀನಾ ಯುದ್ಧ ವೇಳೆ ದೇಶಕ್ಕೆ 600 ಕೆಜಿ ಚಿನ್ನ, 3 ವಿಮಾನ, 90 ಎಕರೆ ಭೂಮಿ ನೀಡಿದ್ದ ರಾಣಿ ಕಾಮಸುಂದರಿ ದೇವಿ ಇನ್ನಿಲ್ಲ
1962ರಲ್ಲಿ ಭಾರತ- ಚೀನಾ ಯುದ್ಧ ನಡೆಯುವ ವೇಳೆ ದೇಶದ ರಕ್ಷಣೆಗಾಗಿ 600 ಕೆಜಿ ಚಿನ್ನ ಹಾಗೂ ಮೂರು ಖಾಸಗಿ ವಿಮಾನವನ್ನು ದಾನವಾಗಿ ನೀಡಿದ್ದ ದರ್ಭಾಂಗ ರಾಜಮನೆತನದ ಕೊನೆಯ ರಾಣಿ ಕಾಮಸುಂದರಿ ದೇವಿ( 96) ನಿಧನರಾಗಿದ್ದಾರೆ. ಮಹಾರಾಜ ದಿ. ಕಾಮೇಶ್ವರ ಸಿಂಗ್ ಅವರ




