ಸ್ವಯಂ ರಕ್ಷಣೆ ಹೆಸರಿನಲ್ಲಿ ಅಮೆರಿಕ ಸೇನೆಯು ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಇರಾನ್ ಪಡೆಗಳಿಂದ ನಮ್ಮ ಸೈನಿಕರಿಗೆ ಎದುರಾಗಬಹುದಾದ ಅಪಾಯಗಳನ್ನು ತಡೆಯುವ ಸಲುವಾಗಿ ಕ್ಷಿಪಣಿ ಉಡಾವಣೆ ತಾಣಗಳು ಹಾಗೂ ಸಮುದ್ರದಲ್ಲಿ ಮೈನ್‌ಗಳನ್ನು ಅಳವಡಿಸುತ್ತಿದ್ದ ದೋಣಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.
ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಇರಾನ್ ಜೊತೆಗಿನ ಮಾತುಕತೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿವೆ ಎಂದು ಹೇಳಿದ್ದರು. ರಾಜತಾಂತ್ರಿಕ ಮಾತುಕತೆಗಳು ಮುಂದುವರಿಯುತ್ತಿರುವಾಗ, ಮತ್ತೊಂದೆಡೆ ಅಮೆರಿಕ ಸೇನೆ ದಾಳಿ ನಡೆಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.
ಟ್ರಂಪ್ ಅವರ ಹೊಸ ಶಾಂತಿ ಪ್ರಸ್ತಾಪ ಎಲ್ಲ ದೇಶ ಸುಲಭವಾಗಿ ಒಪ್ಪಿಕೊಳ್ಳುವಂತಹದ್ದಲ್ಲ. ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆಗೆ ಸ್ಪಷ್ಟ ಮಾರ್ಗಸೂಚಿ ಇಲ್ಲದೆ ಇಸ್ರೇಲ್ ಜೊತೆ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ಸಿದ್ಧವಿಲ್ಲ ಎಂದು ಸೌದಿ ಅರೇಬಿಯಾ ಹಲವು ಬಾರಿ ಸ್ಪಷ್ಟಪಡಿಸಿದೆ. ಇದು ಪಾಕಿಸ್ತಾನದ ನಿಲುವೂ ಆಗಿದೆ. ಟ್ರಂಪ್ ಅವರ ಇತ್ತೀಚಿನ ಪ್ರಸ್ತಾಪದಿಂದ ಪಾಕಿಸ್ತಾನದ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಪ್ಯಾಲೆಸ್ಟೀನ್ ಪ್ರಶ್ನೆಗೆ ನ್ಯಾಯಯುತ ಪರಿಹಾರ ಸಿಗುವವರೆಗೆ ಇಸ್ರೇಲ್ ಜೊತೆ ಸಂಬಂಧ ಸ್ಥಾಪಿಸುವ ಸಾಧ್ಯತೆ ಕಡಿಮೆ ಎಂದು ಇಸ್ಲಾಮಾಬಾದ್‌ನ ರಾಜಕೀಯ ವಿಶ್ಲೇಷಕ ಸಯ್ಯದ್ ಮೊಹಮ್ಮದ್ ಅಲಿ ಹೇಳಿದ್ದಾರೆ.


