ಎಸ್ಟಿ ಸಮುದಾಯಕ್ಕೆ ಸೇರಿದ ತಳವಾರ, ನಾಯ್ಕಡ್ ವರ್ಗದ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ, ಇದರಿಂದ ಸಮಾಜದ ಯುವಕರಿಗೆ ಉದ್ಯೋಗ, ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಕಲಬುರಗಿಯಲ್ಲಿ ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಸಿ.ಪಾಟೀಲ ನೇತೃತ್ವದಲ್ಲಿ ಸಮುದಾಯದ ಮುಖಂಡರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಲಬುರಗಿ ವಿಭಾಗ ಮಟ್ಟದ ಬರ ಪರಿಸ್ಥಿತಿ ಅವಲೊಕಿಸಲು ಜಿಲ್ಲೆಗೆ ಅಗಮಿಸಿರುವ ಮುಖ್ಯಮಂತ್ರಿ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ನೂರಾರು ಪ್ರತಿನಿಧಿಗಳಿಂದ ಅಹವಾಲು ಆಲಿಸಿದರು.
ಜುಲೈ ತಿಂಗಳಲ್ಲಿಯೂ ಮಳೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕಲಬುರಗಿ ಜಿಲ್ಲೆಯನ್ನು ಬರಗಾಲ ಪಿಡಿತ ಪ್ರದೇಶವೆಂದು ಘೋಷಿಸಬೇಕು. ಕಳೆದ ವರ್ಷದ ಬಾಕಿ ಬೆಳೆ ವಿಮಿ ಮೊತ್ತ 300 ಕೋಟಿ ರೂ. ಕೂಡಲೆ ಬಿಡುಗಡೆ ಮಾಡಬೇಕೆಂದು ದಯಾನಂದ ಸಿ.ಪಾಟೀಲ ಮನವಿ ಮಾಡಿದರು.
ಕಳೆದ ವರ್ಷ ಅತಿವೃಷ್ಟಿಯಿಂದ ಬರಗಾಲ ಬಂದರೆ, ಈ ವರ್ಷ ಮಳೆ ಬಾರದೆ ಒಣ ಬರಗಾಲ ನೋಡುವ ಸ್ಥಿತಿ ಬಂದಿದೆ. ಕಲಬುರಗಿ ಜಿಲ್ಲೆಯಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದ ಕಾರಣ ಇದೂವರೆಗೆ ಶೇ.30 ಮಾತ್ರ ಬಿತ್ತನೆ ಮಾಡಲಾಗಿದೆ. ಬಿತ್ತನೆ ನಂತರ ಮಳೆ ಬರದ ಕಾರಣ ರೈತ ಕಂಗೆಟ್ಟಿದ್ದಾನೆ. ಸಾಲ ಮಾಡಿ ಬೀಜ. ಗೊಬ್ಬರ ಖರೀದಿ ಮಾಡಿದ್ದು, ಬೆಳೆ ಕೈಕೊಡುವ ಎಲ್ಲಾ ಲಕ್ಷಣ ಕಂಡು ಬಂದಿದೆ. ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದ ರೈತರಿಗೆ ಸಾಲ ಮನ್ನಾ ಮಾಡಬೇಕೆಂದು ಸಿಎಂಗೆ ಮನವಿ ಪತ್ರ ಸಲ್ಲಿಸಿ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಆಗ್ರಹಿಸಿದರು.


