Thursday, September 17, 2026
Menu

ಪೋಟೊ ಕ್ರೇಜ್‌: ಚನ್ನಪಟ್ಟಣದ ಐವರು ಮುತ್ತತ್ತಿಯಲ್ಲಿ ಕಾವೇರಿ ಪಾಲು

ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಮುತ್ತತ್ತಿ  ಬಳಿ ಕಾವೇರಿ ನದಿಯಲ್ಲಿ ಈಜಲು ಹೋದ ಐವರು ಮುಳುಗಿ ಮೃತಪಟ್ಟಿದ್ದಾರೆ. ಮೃತರು ರಾಮನಗರದ  ಚನ್ನಪಟ್ಟಣದಿಂದ   ಇಲ್ಲಿಗೆ ಪ್ರವಾಸಿಗಳಾಗಿ ಬಂದಿದ್ದವರು. ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ಕುಟುಂಬ ಮುತ್ತತ್ತಿಯ ಮುತ್ತತ್ತಿರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮುಗಿಸಿ ಕಾವೇರಿ ನದಿ ತೀರಕ್ಕೆ ತೆರಳಿದ್ದಾರೆ. ನದಿ ಮಧ್ಯೆ ನಿಂತು ಪೋಟೊ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸರ್ಕಾರಿ ಜಾಗ ಪರಭಾರೆ ಆರೋಪ: ಶಿವಮೊಗ್ಗ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಶಿವಮೊಗ್ಗ ನಗರದ ತಾಲೂಕು ಕಚೇರಿಯ ಆಡಳಿತ ವಿಭಾಗದ ಮೇಲೆ ಲೋಕಾಯುಕ್ತ ಅಧಿಕಾರಿಗಳು  ಸರ್ಚ್ ವಾರಂಟ್‌ನೊಂದಿಗೆ ದಿಢೀರ್ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ. ಶಿವಮೊಗ್ಗದ ಗೋವಿಂದಾಪುರದಲ್ಲಿ 11 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ

ಅಯೋಧ್ಯೆ ಮಂದಿರದಲ್ಲಿ ಸ್ಫೋಟಕ್ಕೆ ಸಂಚು: ಹರಿಹರದಲ್ಲಿ ಬಂಧಿತ ಉಗ್ರ

ಹರಿಹರದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್‌ ಉತ್ತರ ಪ್ರದೇಶ ಮೂಲದವನಾಗಿದ್ದು, ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಹರಿಹರದಲ್ಲಿ ಮಂಗಳವಾರ ಶಂಕಿತ ಉಗ್ರನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಅಯೋಧ್ಯೆಯ

ವಾರಕ್ಕೊಂದು ಬೈಕ್‌ ಕಳವು: ನಕಲಿ ಆರ್‌ಸಿ ಜೊತೆ ರೈತರಿಗೆ ಮಾರಾಟ

ಬಳ್ಳಾರಿಯ ಸಿರಗುಪ್ಪ ತಾಲೂಕು ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿ 20.50 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 41 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿಯ ಅಹಂಬಾವಿ ನಗರದ ನಿವಾಸಿ, ಆಟೋ ಚಾಲಕ ಸಿದ್ದಾರೆಡ್ಡಿ ಬಂಧಿತ ಆರೋಪಿ. ಒಂದೂವರೆ ವರ್ಷದಿಂದ ಬೈಕ್ ಕಳ್ಳತನದಲ್ಲಿ ತೊಡಗಿದ್ದ

ತುಮಕೂರಿನಲ್ಲಿ ಎಲ್‌ಐಸಿ ದುಡ್ಡಿಗಾಗಿ ತಮ್ಮನ ಕೊಂದ ಅಣ್ಣ

ಎಲ್‌ಐಸಿ ಪಾಲಿಸಿಯಿಂದ 30 ಲಕ್ಷ ರೂ. ಪಡೆದುಕೊಳ್ಳುವ ಆಸೆಗೆ ಬಿದ್ದ ಅಣ್ಣನೊಬ್ಬ ತಮ್ಮನ ಕೊಲೆ ಮಾಡಿರುವ ಘಟನೆ ತುಮಕೂರಿನ ಪಟ್ಟನಾಯಕನಹಳ್ಳಿಯಲ್ಲಿ ಬಹಿರಂಗಗೊಂಡಿದೆ.  35 ವರ್ಷದ ರಮೇಶ್‌ ಸಾವು ಮೊದಲಿಗೆ ಬೈಕ್ ಅಪಘಾತದ ಪ್ರಕರಣ ಎಂದು ಹೇಳಲಾಗಿತ್ತು, ಎಲ್‌ಐಸಿ ಪಾಲಿಸಿ ಹಣ ಲಪಟಾಯಿಸಲು

ಕಲಬುರಗಿಯಲ್ಲಿ ತೆರಿಗೆ ಇಲಾಖೆ ಅಧಿಕಾರಿಯ ಮಗ ಸುಸೈಡ್‌

ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಯ ಪುತ್ರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಮಾನಸ ಲೇಔಟ್ ನಲ್ಲಿರುವ ಮನೆಯಲ್ಲಿ ನಡೆದಿದೆ. ಕೃಷ್ಣ ಪಾಟೀಲ್ ( 25 ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಭಾರತಿ- ಅಪ್ಪಾರಾವ್ ಮಾಲಿಪಾಟೀಲ್ ಪುತ್ರ

ಕಡೂರಿನಲ್ಲಿ ಪೊಲೀಸ್‌ ವಿಚಾರಣೆ ಎದುರಿಸಿದ ಯುವಕ ಆತ್ಮಹತ್ಯೆ

ಕಡೂರು ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಇಪ್ಪತ್ತು ವರ್ಷದ ಯುವಕ ಪ್ರಕರಣವೊಂದರಲ್ಲಿ ಪೊಲೀಸ್‌ ವಿಚಾರಣೆ ಎದುರಿಸಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಚಂದನ್  ಆತ್ಮಹತ್ಯೆ ಮಾಡಿಕೊಂಡ ಯುವಕ. ಕುಡ್ಲೂರು ಗ್ರಾಮದ ಯುವತಿಯೊಬ್ಬಳು ಪ್ರಿಯಕರನೊಂದಿಗೆ ತೆರಳಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಬೀರೂರು ಪೊಲೀಸರು, ಆಕೆಯ

ಮೈಸೂರಿನಲ್ಲಿ ವಿಷ ಸೇವಿಸಿ ಮದುವೆ ನಿಗದಿಯಾಗಿದ್ದ ಮಗಳು,ತಂದೆ, ತಾಯಿ ಸುಸೈಡ್‌

ಮೈಸೂರು ಟಿ.ನರಸೀಪುರದ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ತಂದೆ, ತಾಯಿ ಮತ್ತು ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಣ್ಣ, ಪತ್ನಿ ನಾಗರತ್ನ ಮತ್ತು ಮಗಳು ರಕ್ಷಿತಾಆತ್ಮಹತ್ಯೆ ಮಾಡಿಕೊಂಡವರು. ಕುಟುಂಬ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್​ನೋಟ್​​

ಚಳ್ಳಕೆರೆ ಮತದಾರರ ಗುರುತಿನ ಚೀಟಿಯಲ್ಲಿ ಪಡಿತರ ಚೀಟಿ ಫೋಟೊ: ಸಾರ್ವಜನಿಕರ ಆಕ್ರೋಶ

  ಚಳ್ಳಕೆರೆಯಲ್ಲಿ  ಮತದಾರರ ಗುರುತಿನ ಚೀಟಿಯಲ್ಲಿ ಮತದಾರನ ಭಾವಚಿತ್ರದ ಬದಲು ಪಡಿತರ ಚೀಟಿಯಲ್ಲಿನ ಕುಟುಂಬದ ಫೋಟೊ ಮುದ್ರಿಸಿದ್ದು,  ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಚಳ್ಹಳಕೆರೆ ಳೇ ಟೌನ್ ನಿವಾಸಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಗುರುತಿನ ಚೀಟಿ ಪಡೆಯುವ

ಗಿಫ್ಟ್‌ ಆಮಿಷವೊಡ್ಡಿ ನಿವೃತ್ತ ಯೋಧನಿಗೆ 2.82 ಲಕ್ಷ ರೂಪಾಯಿ ವಂಚನೆ

ನಿವೃತ್ತ ಯೋಧರೊಬ್ಬರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಕರೆ ಮಾಡಿದ್ದ ದುಷ್ಕರ್ಮಿಗಳು ಉಡುಗೊರೆ ಕಳುಹಿಸುವುದಾಗಿ ನಂಬಿಸಿ 2.82 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ. ಜೂನ್ 20ರಂದು ನಿವೃತ್ತ ಯೋಧ ಶಿವಕುಮಾರ್ ಅವರ ಹುಟ್ಟುಹಬ್ಬದಂದು ಬೆಳಗ್ಗೆ ವಂಚಕರು