Menu

ಗಂಡನ ಕಿರುಕುಳಕ್ಕೆ ಬೇಸತ್ತ ಗರ್ಭಿಣಿ ಆತ್ಮಹತ್ಯೆ, ಕ್ಯಾನ್ಸರ್‌ಗೆ ಹೆದರಿ ಡಾಕ್ಟರ್‌ ಸುಸೈಡ್‌

ಕಲಬುರಗಿ ತಾಲೂಕಿನ ಔರಾದ್ (ಬಿ) ಗ್ರಾಮದಲ್ಲಿ ಗಂಡನ ಕಿರುಕುಳ ಮತ್ತು ಹಿಂಸೆಗೆ ಬೇಸತ್ತು 22 ವರ್ಷದ 4 ತಿಂಗಳ ಗರ್ಭಿಣಿ ಶೃತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಶೃತಿ ಮತ್ತು ಗೋಪಾಲ್ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಗೋಪಾಲ್ ಕುಡಿತ ಮತ್ತು ಜೂಜು ವ್ಯಸನಿಯಾಗಿದ್ದ. ಆತ ಸಾಲ ತೀರಿಸಲು ಮನೆ ಮಾರಲು ಮುಂದಾದಾಗ ಶೃತಿ ತಡೆದಿದ್ದರು. ಇದಕ್ಕೆ ಕೋಪಗೊಂಡ ಗೋಪಾಲ್ ಶೃತಿಯನ್ನು ಥಳಿಸುತ್ತಿದ್ದ, ತಾಳಿ ಕಿತ್ತುಕೊಳ್ಳುತ್ತಿ ಮತ್ತು ತವರು ಮನೆಗೂ ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಶೃತಿ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬಸ್ಥರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರುತನಿಖೆ ಆರಂಭಿಸಿದ್ದಾರೆ.

ತಲೆಗೆ ಗುಂಡಿಕ್ಕಿಕೊಂಡು ವೈದ್ಯ ಆತ್ಮಹತ್ಯೆ

ಬೆಳಗಾವಿಯಲ್ಲಿ ಅಂಕೋಲಾದ ವೈದ್ಯ ದಿನೇಶ್ ಲಕ್ಷ್ಮಣ ಭಟ್ಕಳ ಎಂಬವರು ಮನೆಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡೋಲಿ ರಸ್ತೆಯಲ್ಲಿರುವ ಅವರ ಮನೆಯ ಗ್ಯಾಲರಿಯಲ್ಲಿ ಈ ಘಟನೆ ನಡೆದಿದೆ.

ಡಾ. ದಿನೇಶ್ ಲಂಗ್ಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕ್ಯಾನ್ಸರ್ ಭೀತಿಯಿಂದಾಗಿ ಅವರು ಮಾನಸಿಕವಾಗಿ ತುಂಬಾ ಒತ್ತಡಕ್ಕೆ ಒಳಗಾಗಿ ಹೀಗೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ದಿನೇಶ್ ಲಕ್ಷ್ಮಣ ಭಟ್ಕಳ ಅವರು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸ್ಥಳಕ್ಕೆ ಟಿಳಕವಾಡಿ ಸಿಪಿಐ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *