Menu

ಶಿವಮೊಗ್ಗದಲ್ಲಿ ರೌಡಿಶೀಟರ್‌ ಮುಖ ಗುರುತು ಸಿಗದಂತೆ ಕೊಚ್ಚಿ ಕೊಲೆಗೈದ ಐವರ ಬಂಧನ

ಶಿವಮೊಗ್ಗ ನಗರದ ಗಾಂಧಿ ಬಜಾರ್ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ನರಸಿಂಹ (39) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಅಂಬು ಅನಿಲ್, ಮಧು, ರವಿ, ಹಾಗೂ ಕತ್ತೆ ಕಾರ್ತಿಕ್​, ಶಬರೀಶ್  ಬಂಧಿತರು.   ಆರೋಪಿಗಳನ್ನು  ಪೊಲೀಸರು  ಶಿವಮೊಗ್ಗ ಕೋಟೆ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.  ಅಡಿಷನಲ್​ ಎಸ್​ಪಿ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡ 24 ಗಂಟೆ ಒಳಗಾಗಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಗೋವಿಂದಾಪುರ ಆಶ್ರಯ ಬಡಾವಣೆ ನಿವಾಸಿ ನರಸಿಂಹ ಹತ್ಯೆಯಾದ ರೌಡಿಶೀಟರ್‌.  ನರಸಿಂಹನ ಮೇಲೆ  ದುಷ್ಕರ್ಮಿಗಳು  ಮನ ಬಂದಂತೆ ದಾಳಿ ನಡೆಸಿದ್ದು,  ಕೈಗಳು ತುಂಡಾಗಿದ್ದು, ಮುಖ ಗುರುತು ಸಿಗದಂತಾಗಿದೆ. ದಾಳಿ ವೇಳೆ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಕಾರಿಯಪ್ಪ ಹಾಗೂ ಕೋಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಸ್ಪೀಟ್​ ಅಡ್ಡೆಯಲ್ಲಿ ಎಂಟ್ರಿ ಯಾಗಿದ್ದ ತಂಡ, ನರಸಿಂಹನನ್ನು ಹತ್ಯೆ ಮಾಡಿತ್ತು. ಈ ಪ್ರಕರಣ ಸಂಬಂಧ ಪೊಲೀಸರು, ಅಂಬು ಅನಿಲ್, ಮಧು, ರವಿ, ಹಾಗೂ ಕತ್ತೆ ಕಾರ್ತಿಕ್​, ಶಬರೀಶ್ ಸೇರಿದಂಥೆ ಐವರನ್ನು ಅರೆಸ್ಟ್ ಮಾಡಿದೆ. ಮುಂದಿನ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.

Related Posts

Leave a Reply

Your email address will not be published. Required fields are marked *