Menu

ಬಾಲ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ ಭವಿಷ್ಯ ರೂಪಿಸಬೇಕಿದೆ

ದೇಶದಲ್ಲಿಂದು ಬಾಲ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರಿಯಾದ ಪರಿಹಾರ ದೊರಕುತ್ತಿಲ್ಲ. ಯಾವಾಗ ಸರ್ಕಾರಗಳು ಇದನ್ನು ತಾತ್ಸಾರದಿಂದ ಕಾಣುವುದೋ ಅಂತಹ ಸಮಯದಲ್ಲಿ ಈ ದೇಶದ ಎನ್‌ಜಿಓಗಳು ಮತ್ತು ಸಂವಿಧಾನದ ನಾಲ್ಕನೆ ಆಯಾಮ ಎನಿಸಿಕೊಂಡಿರುವ ಮಾಧ್ಯಮವು ಬಾಲ ಕಾರ್ಮಿಕರ ನಿಜವಾದ ಹಕ್ಕುಗಳನ್ನು ರಕ್ಷಿಸುವ ಗುರುತರವಾದ ಹೊಣೆಗಾರಿಕೆಯನ್ನು ವಹಿಸಬೇಕಿದೆ.

ದೇಶದಲ್ಲಿ ಬಾಲ ಕಾರ್ಮಿಕರನ್ನು ನಿಷೇಧಿಸುವ ಹಲವುಹತ್ತು ಕಾನೂನುಗಳಿವೆ. ಆದರೆ ಈ ಎಲ್ಲ ಕಾನೂನುಗಳೂ ಸಮರ್ಪಕವಾಗಿ ಅನುಷ್ಠಾನಗೊಂಡಿದೆಯೇ ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದು ಈ ದಿಶೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

ಆರರಿಂದ ಹದಿನಾಲ್ಕು ವರ್ಷದ ವಯಸಿನ ಮಕ್ಕಳಿಗೆ ಪೋಷಕರು ಮತ್ತು ಸರ್ಕಾರಗಳು ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕು. ಇದು ಸಂವಿಧಾನ ವಿಧಿಸಿರುವ ನಿಯಮಾವಳಿ. ಇದರ ಉಲ್ಲಂಘನೆಗೆ ಕಠಿಣ ಶಾಸನವೂ ಇದೆ. ಅಲ್ಲದೆ ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಕೂಡಾ. ಗಣಿಗಾರಿಕೆ, ರಾಸಾಯನಿಕ ತಯಾರಿಕೆ ಘಟಕಗಳು ಮತ್ತು ಸ್ಪೋಟಕ ತಯಾರಿಕೆ ಘಟಕಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸುವಂತಿಲ್ಲ. ಆದರೆ ಇಂತಹ ಘಟಕಗಳು ದೇಶದ ಉದ್ದಗಲಕ್ಕೂ ಸಾವಿರಾರು ಇವೆ. ಇಲ್ಲಿ ಲಕ್ಷಾಂತರ ಮಂದಿ ಬಾಲ ಕಾರ್ಮಿಕರು ಹಗಲೂ ರಾತ್ರಿ ಜೀತದಾಳುಗಳಂತೆ ದುಡಿಯುತ್ತಿದ್ದಾರೆ.

ದೇಶದ ಸಂವಿಧಾನವು ಇವರಿಗೆ ಹಲವು ಹತ್ತು ಭದ್ರೆತೆ ಮತ್ತು ಹಕ್ಕುಗಳನ್ನು ನೀಡಿದ್ದರೂ ಇವುಗಳನ್ನು ಸಮರ್ಪಕ ಪ್ರಮಾಣದಲ್ಲಿ ಜಾರಿಗೊಳಿಸಲು ಸರ್ಕಾರಗಳ ಕೈಯಲ್ಲಿ ಸಾಧ್ಯವಾಗಿಲ್ಲ. ಕಾರ್ಮಿಕ ಇಲಾಖೆ ಅಲ್ಲದೆ ಗೃಹ, ಸಮಾಜ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಈ ದಿಶೆಯಲ್ಲಿ ಕಾರ್ಯನಿರ್ವಹಿಸುವ ಹೊಣೆಗಾರಿಕೆಯನ್ನು ಹೊತ್ತಿವೆ. ಆದರೆ ಈ ಹೊಣೆಗಾರಿಕೆಗಳನ್ನು ಅಧಿಕಾರ ವರ್ಗ ದೇಶದ ಕಾನೂನುಗಳಿಗೆ ಅನುಗುಣವಾಗಿ ನಿರ್ವಹಿಸಿಲ್ಲ. ಇದು ದುರದೃಷ್ಟಕರ.

ಕಠಿಣವಾದ ಕೆಲಸಗಳಿಗೆ ಮಕ್ಕಳನ್ನು ನೇರವಾಗಿ ಬಳಸುವಂತಿಲ್ಲ. ಇಂತಹ ಮಕ್ಕಳ ಸಂಖ್ಯೆ ಕುಡಾ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ಇಂದು ಕೋಲ್ಕತ್ತ, ಮುಂಬೈ, ಚೆನೈ ಮತ್ತು ಬೆಂಗಳೂರಿನಲ್ಲಿ ಇಂತ ಅನಾಥ ಮಕ್ಕಳ ಪ್ರಮಾಣ ಆಧಿಕ ಪ್ರಮಾಣದಲ್ಲಿದೆ. ಕಟ್ಟಡ ಮತು ಹೆದ್ದಾರಿ ನಿರ್ಮಾಣಗಳಲ್ಲಿ ಮಕ್ಕಳನ್ನು ಕೆಲ ಪ್ರಭಾವಿ ಗುತ್ತಿಗೆದಾರರು ಅಕ್ರಮವಾಗಿ ಬಳಸುತ್ಚಿರುವುದು ಕಟು ವಾಸ್ತವ.  ಈ ರೀತಿ ಕಾನೂನುಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ಮಕ್ಕಳನ್ನು ಕಾರ್ಮಿಕರಾಗಿ ಬಳಕೆಯಾಗುತಿದ್ದರೂ ಕಾರ್ಮಿಕ ಇಲಾಖೆ ಇದನ್ನು ನಿರ್ಲಕ್ಷಿಸಿರುವುದು ಕಳವಳಕಾರಿ.

ಮುಂಬೈ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಮಾಫಿಯಾ ಜಗತ್ತು ಮತ್ತು ಕ್ರಿಮಿನಲ್ ಶಕ್ತಿಗಳು ಮಕ್ಕಳನ್ನು ಡ್ರಗ್‌ಲೋಕಕ್ಕೆ ಎಳೆದೊಯ್ದು ಅವರನ್ನು ದೇಶದ ದುಷ್ಟಶಕ್ತಿಗಳಾಗಿ ಮಾಡುವುದರದಲ್ಲಿ ತೊಡಗಿರುವುದು ಆತಂಕಕಾರಿ. ದೇಶದ ನಾಳಿನ ಉತ್ತಮ ಪೌರರಾಗಬೇಕಿರುವ ಇಂದಿನ ಮಕ್ಕಳನ್ನು ಅಪರಾಧ ಜಗತ್ತಿಗೆ ತಳ್ಳುವ ವಿದ್ರೋಹಿಗಳನ್ನು ಬಗ್ಗು ಬಡಿಯುವ ಗುರುತರವಾದ ಹೊಣೆಗಾರಿಕೆ ಸರ್ಕಾರಗಳದ್ದು . ಇವರಿಗೆ ಪೋಷಕಾಂಶಯಯುಕ್ತ ಆಹಾರ, ಆರೋಗ್ಯ, ಶಿಕ್ಷಣ ಮತ್ತು ಇವರ ಕಲಿಕೆಗೆ ಬೇಕಿರುವ ಸುಪ್ತ ವಾತಾವರಣವನ್ನು ಕಲ್ಪಿಸುವ ಕೆಲಸವೂ ಸರ್ಕಾರಗಳದ್ದೇ.

ಬಾಲ ಕಾರ್ಮಿಕರ ವಿರೋಧಿ ದಿನ ಎಂದು ನಾವಿಂದು ಸಾರ್ವತ್ರಿಕವಾಗಿ ಫಲಕ ಹಾಕಿಕೊಂಡು ಘೋಷಣೆ ಹಾಕುವುದರಿಂದ ಯಾವ ಉಪಯೋಗವೂ ಇಲ್ಲ. ದೇಶದಲ್ಲಿಂದು ಬಾಲ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ಯಾವಾಗ ಸರ್ಕಾರಗಳು ಇದನ್ನು ತಾತ್ಸಾರದಿಂದ ಕಾಣುವುದೋ ಅಂತಹ ಸಮಯದಲ್ಲಿ ಈ ದೇಶದ ಎನ್‌ಜಿಓಗಳು ಮತ್ತು ಸಂವಿಧಾನದ ನಾಲ್ಕನೆ ಆಯಾಮ ಎನಿಸಿಕೊಂಡಿರುವ ಮಾಧ್ಯಮವು ಬಾಲ ಕಾರ್ಮಿಕರ ನಿಜವಾದ ಹಕ್ಕುಗಳನ್ನು ರಕ್ಷಿಸುವ ಗುರುತರವಾದ ಹೊಣೆಗಾರಿಕೆಯನ್ನು ವಹಿಸಬೇಕಿದೆ .

Related Posts

Leave a Reply

Your email address will not be published. Required fields are marked *