ತುಮಕೂರು ನಗರದ ಜನತಾಕಾಲೋನಿಯಲ್ಲಿ ವಾಸವಿದ್ದ ಮಹಿಳೆಯ ಪ್ರಿಯಕರನ್ನನು ಆಕೆಯ ಮಾಜಿ ಪತಿ ಹತ್ಯೆ ಮಾಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮಾಜಿ ಪತ್ನಿಯ ಜೊತೆ ವಾಸವಿದ್ದ ಪ್ರಿಯಕರ ದಸ್ತಗಿರ್ ಎಂಬಾತನನ್ನು ಆಕೆಯ ಮಾಜಿ ಪತಿ ಗೌಸ್ ಕೊಲೆ ಮಾಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌಸ್ನಿಂದ ಹಲ್ಲೆಗೊಂಡು ಆಸ್ಪತ್ರೆ ಸೇರಿದ್ದ ದಸ್ತಗಿರ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
36 ವರ್ಷದ ಮಹಿಳೆಯು ಪ್ರಿಯಕರ 26 ವರ್ಷದ ದಸ್ತಗಿರ್ ಜೊತೆ ವಾಸವಿದ್ದರು, ದಸ್ತಗೀರ್ ಎರಡು ವರ್ಷಗಳ ಹಿಂದೆ ಮಹಿಳೆಯ ಪತಿ ಗೌಸ್ ಜೊತೆ ದಸ್ತಗಿರ್ ಕೆಲಸ ಮಾಡುತ್ತಿದ್ದ. ಈ ವೇಳೆ ಗೌಸ್ನ ಪತ್ನಿಯ ಪರಿಚಯವಾಗಿತ್ತು. ಆಕೆ ತನಗೆ ಪತಿಯಿಂದ ಕಿರುಕುಳವಾಗುತ್ತಿದೆ ಎಂದು ದಸ್ತಗೀರ್ ಬಳಿ ಹೇಳಿಕೊಂಡಿದ್ದು, ಬಳಿಕ ಇಬ್ಬರಲ್ಲೂ ಪ್ರೀತಿಯಾಗಿತ್ತು ಎನ್ನಲಾಗಿದೆ.
ಒಂದೂವರೆ ವರ್ಷದ ಹಿಂದೆ ದಸ್ತಗೀರ್ ಮಹಿಳೆಯೊಂದಿಗೆ ಮನೆ ಬಿಟ್ಟು ತೆರಳಿದ್ದ. ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದರು. ಮಹಿಳೆ ಗೌಸ್ನಿಂದ ವಿಚ್ಛೇದನ ಪಡೆದ ಬಳಿಕ ದಸ್ತಗೀರ್ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೂ ಗೌಸ್ನಿಂದ ಕಿರುಕುಳ ಮುಂದುವರಿದಿತ್ತು.
ಸೆಪ್ಟಂಬರ್ 16ರಂದು ಜನತಾ ಕಾಲೋನಿಯಲ್ಲಿರುವ ಮಹಿಳೆ ಮತ್ತು ದಸ್ತಗೀರ್ ವಾಸಿಸುತ್ತಿದ್ದ ಮನೆಗೆ ಗೌಸ್ ಬಂದಿದ್ದಾನೆ. ಮಹಿಳೆ ಮೇಲೆ ಚಾಕುವಿನಿಂದ ದಾಳಿ ನಡೆಸಲು ಮುಂದಾದಾಗ ದಸ್ತಗೀರ್ ಅಡ್ಡ ಬಂದಿದ್ದಾನೆ. ಆಗ ದ
ಸ್ತಗೀರ್ ಮೇಲೆ ಚಾಕುವಿನಿಂದ ಹಲವು ಬಾರಿ ದಾಳಿ ನಡೆಸಿ ಗೌಸ್ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ದಸ್ತಗೀರ್ನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.


