Menu

ಬಳ್ಳಾರಿ ಪಿಜಿಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು: ಕೊಲೆಯೆಂದು ಪೋಷಕರ ಆರೋಪ

ಬಳ್ಳಾರಿಯ ಅಶೋಕ್ ನಗರದ ಚೌದ್ರಿ ರೆಸಿಡೆನ್ಸ್ ಪಿಜಿ ಕೊಠಡಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಶ್ವಾಸ್ (24) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಮೃತನ ತಲೆಗೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ವಿದ್ಯಾರ್ಥಿ ವಿಶ್ವಾಸ್‌ನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಗ್ರಾಮದ ನಿವಾಸಿ ವಿಶ್ವಾಸ್ ಬಳ್ಳಾರಿಯ RYMEC ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಆತನಿಗೆ ಪಿಜಿ ಸಹಪಾಠಿಗಳೊಂದಿಗೆ ಜಗಳ ನಡೆದಿತ್ತು ಎನ್ನಲಾಗಿದೆ. ಸ್ಥಳಕ್ಕೆ ಕೌಲ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ಬಳಿಕ ಸಾವಿನ ನಿಜವಾದ ಕಾರಣ ಬಹಿರಂಗಗೊಲ್ಲೂವ ನಿರಿಕ್ಷೆಯಿದೆ.

ಕಾಲುವೆ ಬಳಿ ಯುವಕನರ ಹತ್ಯೆ
ಬಳ್ಳಾರಿಯ ಎಲ್​ಎಲ್​ಸಿ ಕಾಲುವೆ ಬಳಿ ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿ ಬಳಿಕ ಸಾಕ್ಷ್ಯ ನಾಶ ಪಡಿಸಲು ಪೆಟ್ರೋಲ್​ನಿಂದ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮೋಕಾ ಬಳಿಯ ಎಲ್​ಎಲ್​ಸಿ ಕಾಲುವೆ ಬಳಿ ಈ ಘಟನೆ ನಡೆದಿದ್ದು, ಮೃತ ಯುವಕ ಆಂಧ್ರದ ಅನಂತಪುರ ಬೊಲ್ಲನಗುಡ್ಡಂ ನಿವಾಸಿ ಬಸವನಗೌಡ (27) ಎಂದು ಗುರುತಿಸಲಾಗಿದೆ.

ಆತ ಖಾಸಗಿ ಲ್ಯಾಬ್​ನಲ್ಲಿ ಟೆಕ್ನಿಷಿಯನ್ ಆಗಿದ್ದ, ದುಷ್ಕರ್ಮಿಗಳು ಕೊಲೆ ಮಾಡಿ 13 ಕಿ.ಮೀ. ದೂರದಲ್ಲಿ ಮೃತದೇಹ ಸುಟ್ಟು ಹಾಕಿದ್ದಾರೆ. ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *