ದೇಶ-ವಿದೇಶ
ಜಾರ್ಖಂಡ್ ಪ್ರತಿಭಟನೆ: ವಿದ್ಯಾರ್ಥಿಗಳ ನಿಯಂತ್ರಣಕ್ಕೆ ಜಲಫಿರಂಗಿ ಪ್ರಯೋಗ
ಜಾರ್ಖಂಡ್‌ನಲ್ಲಿ ನಡೆದ ನಾನಾ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಜಾರ್ಖಂಡ್‌ನ ಸಾವಿರಾರು ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಬೆಳಿಗ್ಗೆ ಪ್ರತಿಭಟನಾಕಾರರು ವಿಧಾನಸೌಧದೆಡೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ 51 ನೇ ಹುಟ್ಟುಹಬ್ಬದ ದಿನವಾದ ಗುರುವಾರ ಪ್ರತಿಭಟನೆ ತೀವ್ರಗೊಂಡಿದೆ, ಅಹಿತಕರ ಘಟನೆ ನಡೆಯದಂತೆ ನಿಷೇಧಾಜ್ಞೆ ವಿಧಿಸಲಾಗಿದೆ. 4 ಕಿ.ಮೀ ಪ್ರದೇಶದಲ್ಲಿ ಭಾರೀ
ಕಾವೇರಿಗಾಗಿ ತಮಿಳುನಾಡು ಅರ್ಜಿ: ವಿಚಾರಣೆಗೆ ಸುಪ್ರೀಂ ಅಸ್ತು
ಸಿಡಬ್ಲ್ಯುಸಿ ಆದೇಶ ಪ್ರಕಾರ ತಕ್ಷಣವೇ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಗಸ್ಟ್ ೧೩ರಂದು ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ತಮಿಳುನಾಡು ಸರ್ಕಾರದ ಪ ವಕೀಲ ಸಿ.ಎಸ್. ವೈದ್ಯನಾಥನ್ ಅರ್ಜಿಯ ತುರ್ತು
ಪಾಕ್ ಮಹಿಳೆಯಿಂದ ಹನಿಟ್ರ್ಯಾಪ್: ರಕ್ಷಣಾ ಮಾಹಿತಿ ಕಳಿಸಿದ ಐಎಎಫ್ ವಿಂಗ್ ಕಮಾಂಡರ್
ಭಾರತೀಯ ವಾಯುಪಡೆಯ ಉನ್ನತ ಕಮಾಂಡರ್‌ವೊಬ್ಬರು ಪಾಕಿಸ್ತಾನದ ಮಹಿಳೆಯೊಬ್ಬರ ಹನಿಟ್ರ್ಯಾಪ್‌ಗೆ ಸಿಲುಕಿ ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಸೋರಿಕೆ ಮಾಡಿರುವ ಪ್ರಕರಣ ಬಹಿರಂಗಗೊಂಡಿದೆ. ಆರೋಪಿ ಅಧಿಕಾರಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ಕುದಉರಿದ ಸ್ನೇಹ ಹನಿ ಟ್ರ್ಯಾಪ್ ಆಗಿ ಬದಲಾಗಿದೆ. ವಿಂಗ್ ಕಮಾಂಡರ್ ಅವರ
ರಷ್ಯಾದಿಂದ ತೈಲ ಖರೀದಿ: ಭಾರತ, ಚೀನಾಗಳಿಗೆ ಶೇ 100 ಸುಂಕ ವಿಧಿಸಲು ಅಮೆರಿಕ ಸಿದ್ಧತೆ
ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವ ಚೀನಾ ಮತ್ತು ಭಾರತ ಸೇರಿದಂತೆ ಕೆಲವು ದೇಶಗಳಿಂದ ಬರುವ ಸರಕುಗಳ ಮೇಲೆ ಶೇ.100 ಸುಂಕ ಸುಂಕ ವಿಧಿಸಲು ಅಮೆರಿಕ ಸೆನೆಟ್ ಬಹುಮತದ ಅನುಮೋದನೆ ನೀಡಿದೆ. ಈ ಮಾದರಿ ವ್ಯಾಪಾರವು ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸಲು ನೆರವಾಗುತ್ತಿದೆ
ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಸರಿಯೇ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ
ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳ ಹೆಸರಿನಲ್ಲಿ ಇಡೀ ದೆಹಲಿ ನಗರದ ಜನಜೀವನವನ್ನು ಹಾಳುಗೆಡವಲು ಅವಕಾಶ ನೀಡುವುದು ಸರಿಯಲ್ಲ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ದೇಶದಲ್ಲಿ ನಿರಂತವಾಗಿ ಪ್ರತಿಭಟನೆಗಳು ಮತ್ತು ಧರಣಿಗಳು ನಡೆಯುತ್ತಿರುವುದರ ಬಗ್ಗೆ ದೆಹಲಿ ಹೈಕೋರ್ಟ್ ಆಕ್ಷೇಸಿದೆ.
ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ವಿರುದ್ಧ ಶಶಿ ತರೂರು ಕಿಡಿ
ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಯೋಜಿಸಿರುವ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026ರ ಪ್ರಸ್ತಾವಿತ ತಿದ್ದುಪಡಿ ವಿರುದ್ಧ ಕೇರಳದ ತಿರುವನಂತಪುರದ ಸಂಸದ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಕಿಡಿ ಕಾರಿದ್ದಾರೆ. ಇದು ಕಾರ್ಯಾಂಗದ ಅಧಿಕಾರ ಕೇಂದ್ರಿಕರಣ ಪ್ರಕ್ರಿಯೆ ಅಪಾಯಕಾರಿ ಮಟ್ಟಕ್ಕೆ ಹೆಚ್ಚಳ
ಲೈಂಗಿಕ ದೌರ್ಜನ್ಯ ಪ್ರಕರಣ: ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ದೋಷಿ ಎಂದ ಹೈಕೋರ್ಟ್
2013ರಲ್ಲಿ ದೇಶಾದ್ಯಂತ ಸದ್ದು ಮಾಡಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ನಿಯಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ದೋಷಿ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮಸಂಡೇಕರ್ ಅವರನ್ನೊಳಗೊಂಡ ವಿಭಾಗೀಯ
ಸರ್ಕಾರಿ ಶಿಕ್ಷಕರಿಗೆ ಟಿಇಟಿ ಉತ್ತೀರ್ಣರಾಗಲು ಮತ್ತೊಂದು ವರ್ಷ ಗಡುವು ವಿಸ್ತರಣೆ: ಪ್ರಲ್ಹಾದ್ ಜೋಶಿ
ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಟಿಇಟಿ ಅರ್ಹತೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರ ಈ ಹಿಂದೆ ನೀಡಲಾಗಿದ್ದ ಆಗಸ್ಟ್ 31, 2027 ರ ಗಡುವನ್ನು ಮತ್ತೊಂದು ವರ್ಷ ವಿಸ್ತರಿಸಿ ಆಗಸ್ಟ್ 31, 2028 ರವರೆಗೆ ಕಾಲಾವಕಾಶ ನೀಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಟಿಇಟಿ ಪಾಸಾಗಲು
ಗಡಿ ನಿರ್ಣಯ, ಮಹಿಳಾ ಮೀಸಲು: ಮಸೂದೆಗಳ ಚರ್ಚೆಗೆ ವಿಶೇಷ ಅಧಿವೇಶಕ್ಕೆ ಕೇಂದ್ರ ಚಿಂತನೆ
ಗಡಿ ನಿರ್ಣಯ ಮಸೂದೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಚರ್ಚೆಗಾಗಿ ಮುಂಗಾರು ಅಧಿವೇಶನ ಮುಗಿದ ಬಳಿಕ ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ವಿಶೇಷ ಅಧಿವೇಶನ ಆಗಸ್ಟ್ 16 ರಿಂದ 18 ರವರೆಗೆ ನಡೆಯುವ ಸಾಧ್ಯತೆಯಿದೆ
ವಿದ್ಯಾರ್ಥಿಗಳ ಪ್ರತಿಭಟನೆ: ಕಾನೂನು ಜಾರಿ ಸಂಸ್ಥೆಗಳಿಗೆ ಸಂಯಮವಿರಲಿ, ಅತಿ ಬಲಪ್ರಯೋಗ ಬೇಡವೆಂದ ಸುಪ್ರೀಂ
ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ನಿಭಾಯಿಸುವಾಗ ಕಾನೂನು ಜಾರಿ ಸಂಸ್ಥೆಗಳು ಸಂಯಮದಿಂದ ವರ್ತಿಸಬೇಕು. ವಿದ್ಯಾರ್ಥಿಗಳ ವಿರುದ್ಧ ಅತಿ ಬಲಪ್ರಯೋಗ ಬೇಡ ಎಂದು ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಕೆಲವು ದಾರಿ ತಪ್ಪಿದ ಅಂಶಗಳು ಶಕ್ತಿಗಳು ಕಲ್ಲು ತೂರಾಟ ನಡೆಸಿದರೂ ಯುವಕರಿಗೆ ಸೂಕ್ತ ಸಲಹೆ




