ದೇಶ-ವಿದೇಶ
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು, ಇಂಡಿ ಕೂಟಕ್ಕೆ ಕಪಾಳಮೋಕ್ಷ: ಸಂಸದ ಡಾ.ಕೆ.ಸುಧಾಕರ್
ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನರು ನೀಡಿರುವ ಮೆಚ್ಚುಗೆ ಹಾಗೂ ದೇಶವಿರೋಧಿ ಕಾಂಗ್ರೆಸ್ ಸೇರಿದಂತೆ ಇಂಡಿ ಕೂಟಕ್ಕೆ ಜನರು ಕೊಟ್ಟಿರುವ ಕಪಾಳಮೋಕ್ಷವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೂಟಕ್ಕೆ ದೊರೆತಿರುವ ಭರ್ಜರಿ ಜಯ
ಅಮೆರಿಕ ನಂಬಿಕೆಗೆ ಯೋಗ್ಯವಲ್ಲ: ಇರಾನ್
ಕದನ ವಿರಾಮ ಘೋಷಣೆಯಾಗಿದ್ದರೂ ಅಮೆರಿಕ ನಂಬಿಕೆಗೆ ಯೋಗ್ಯವಲ್ಲ ಎಂದು ಇರಾನ್ ಹೇಳಿದೆ. ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಪರಿಸ್ಥಿತಿ ಮತ್ತೆ ಉಲ್ಬಣಗೊಳ್ಳಬಹುದು. ಅಮೆರಿಕ ಮತ್ತು ಇಸ್ರೇಲ್ ಜೊತೆ ಯುದ್ಧ ಮತ್ತೆ ಆರಂಭವಾಗಬಹುದು. ಅಮೆರಿಕ ಯಾವುದೇ ಒಪ್ಪಂದಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ
ತಿರುಪತಿಗೆ ಆರು ತಿಂಗಳು ಮಾಸಿಕ 2 ಲಕ್ಷ ಕೆ.ಜಿ ನಂದಿನಿ ತುಪ್ಪ ಪೂರೈಕೆ: ಡಿಕೆ ಸುರೇಶ್
“ಮುಂದಿನ ಆರು ತಿಂಗಳು ತಿರುಪತಿ ತಿರುಮಲ ಸನ್ನಿಧಾನಕ್ಕೆ ಬಮುಲ್ ನಿಂದ ತಿಂಗಳಿಗೆ 2 ಲಕ್ಷ ಕೆ.ಜಿ ತುಪ್ಪ ಸರಬರಾಜು ಮಾಡಲಾಗುತ್ತದೆ. ಪ್ರತಿವರ್ಷ ಕೆಎಂಎಫ್ ನಿಂದ ತುಪ್ಪ ಸರಬರಾಜು ಮಾಡಲಾಗುತ್ತಿತ್ತು” ಎಂದು ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ತಿಳಿಸಿದ್ದಾರೆ. ಬೆಂಗಳೂರು ಸಹಕಾರ ಹಾಲು
19 ಸಾವಿರ ರೂ. ಪಡೆಯಲು ಹೂಳಿದ್ದ ಸೋದರಿಯ ಶವವನ್ನೇ ಬ್ಯಾಂಕಿಗೆ ಹೊತ್ತೊಯ್ದ ಸೋದರ
ಒಡಿಶಾದ ಗ್ರಾಮೀಣ ಪ್ರದೇಶವೊಂದರಲ್ಲಿ ಸಹೋದರನೊಬ್ಬ ತನ್ನ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ 19,300 ರೂಪಾಯಿ ಪಡೆಯುವುದಕ್ಕಾಗಿ ಹೂಳಲಾಗಿದ್ದ ಆಕೆಯ ಶವವನ್ನೇ ತೆಗೆದು ಬ್ಯಾಂಕ್‌ಗೆ ಹೊತ್ತೊಯ್ದ ಘಟನೆ ದೇಶಾ ದ್ಯಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರ ಸಾವು
ಮುಂಬೈನ ಪೈಧುನಿ ಪ್ರದೇಶದಲ್ಲಿ ರಾತ್ರಿ ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಹಣ್ಣು ಸೇವಿಸಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಅವರು ತಿಂದಿದ್ದ ಬಿರಿಯಾನಿ ಅಥವಾ ಕಲ್ಲಂಗಡಿ ಹಣ್ಣಿನಲ್ಲಿ ವಿಷವಿತ್ತೇ ಅಥವಾ ಎರಡರ ಮಿಶ್ರಣವು ದೇಹದಲ್ಲಿ ಕೆಟ್ಟ ಪ್ರತಿಕ್ರಿಯೆ ಉಂಟುಮಾಡಿ ಸಾವಿಗೆ ದಾರಿಯಾಯತೇ
ಮಾಂಸದಡುಗೆ ಜಗಳ: ಮಚ್ಚಿನಿಂದ ಹೊಡೆದು ಗಂಡನ ಕೊಲೆಗೈದ ಹೆಂಡತಿ
ಮಾಂಸದಡುಗೆ ವಿಚಾರವಾಗಿ ದಂಪತಿ ಮಧ್ಯೆ ಆರಂಭವಾದ ಜಗಳ ಪತಿಯ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಕೊಲೆ ಆರೋಪಿ ಪತ್ನಿ ಜೈಲು ಸೇರಿರುವ ಪ್ರಕರಣ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ. ಕೋದಂಡ ಶಿವಾಜಿ ಮತ್ತು ಲಕ್ಷ್ಮಿ ದಂಪತಿ ಇಬ್ಬರುಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಕುಟುಂಬವು
ಕದನ ವಿರಾಮಕ್ಕೆ ಒಪ್ಪಿಕೊಳ್ಳದಿದ್ದರೆ ತೈಲ ಪೈಪ್‌ಲೈನ್‌ಗಳು ಸ್ಫೋಟ: ಟ್ರಂಪ್ ಇರಾನ್‌ಗೆ ವಾರ್ನ್
ಮೂರು ದಿನಗಳೊಳಗೆ ಕದನ ವಿರಾಮಕ್ಕೆ ಒಪ್ಪಿಕೊಳ್ಳಿ, ಇಲ್ಲದಿದ್ದರೆ ತೈಲ ಪೈಪ್‌ಲೈನ್‌ಗಳು ಸ್ಫೋಟಗೊಳ್ಳಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ವಾರ್ನ್ ಮಾಡಿದ್ದಾರೆ. ಅಮೆರಿಕದ ನೌಕಾಪಡೆ ಬಂದರುಗಳನ್ನು ದಿಗ್ಬಂಧನ ಮಾಡಿದ್ದರಿಂದ ಇರಾನ್‌ಗೆ ತೈಲವನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ತೈಲ ಹರಿವು ನಿಂತರೆ
ಪತ್ನಿಯ ಕೊಲೆಗೈದು ಮರದ ಪೆಟ್ಟಿಗೆಯಲ್ಲಿ ಅಡಗಿಸಿ ನಾಪತ್ತೆ ದೂರು ದಾಖಲಿಸಿದ ಪತಿ
ಸೂರತ್ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಕೊಲೆ ಮಾಡಿ ಆಕೆಯ ಮೃತದೇಹವನ್ನು ಮರದ ಪೆಟ್ಟಿಗೆಯಲ್ಲಿ ಅಡಗಿಸಿ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದು, ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. 40 ವರ್ಷದ ವಿಶಾಲ್ ಸಾಲ್ವಿ ಎಂಬಾತ ಪತ್ನಿ ಶಿಲ್ಪಾ ಸಾಲ್ವಿ (39)ಯನ್ನು ಹತ್ಯೆ
ವಿಚ್ಛೇದಿತ ಟೆಕ್ಕಿಯ ಮದುವೆಯಾಗುವುದಾಗಿ 9.35 ಕೋಟಿ ರೂ. ದೋಚಿದ ತೆಲುಗು ನಟಿ
ಮದುವೆಯಾಗುವುದಾಗಿ ನಂಬಿಸಿ ಲಂಡನ್‌ನಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್‌ಗೆ 9.35 ಕೋಟಿ ರೂಪಾಯಿ ವಂಚಿಸಿದ ಆರೋಪದಡಿ ನಟಿ, ತೆಲುಗು ಬಿಗ್ಬಾಸ್ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲಾಗಿದೆ. ಲಂಡನ್ ಮೂಲದ ವಿಚ್ಚೇದಿತ ಟೆಕ್ಕಿ ಧರ್ಮೇಂದ್ರ ಎಂಬವರ ತಂದೆ ಹೈದರಾಬಾದ್‌ನ ಶೇಕ್‌ಪೇಟ್ ನಿವಾಸಿ ಸತ್ಯನಾರಾಯಣ ದೂರು ನೀಡಿದ್ದು, ನಟಿ
ನನಗೆ ಸಿಕ್ಕಂಥ ತಂದೆ ಬೇರೆ ಯಾರಿಗೂ ಸಿಗದಿರಲಿ, ತಂದೆ ನನ್ನ ದೇಹ ಮುಟ್ಟದಿರಲಿ: ಡೆತ್ ನೋಟ್ ಬರೆದಿಟ್ಟು ಯುವ ವಕೀಲ ಆತ್ಮಹತ್ಯೆ
ತಂದೆಯ ನಿರಂತರ ಮಾನಸಿಕ ಕಿರುಕುಳ ಹಾಗೂ ಅತಿ ಕಟ್ಟುನಿಟ್ಟುಗಳಿಂದ ಬೇಸತ್ತ ಯುವ ವಕೀಲ ಪ್ರಿಯಾಂಶು ಶ್ರೀವಾಸ್ತವ ಕಾನ್ಪುರ ನ್ಯಾಯಾಲಯ ಸಂಕೀರ್ಣದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ಅಪ್ಪಾ, ಕೊನೆಗೂ ನೀವು ಗೆದ್ದಿರಿ, ನಾನು ಸೋತುಹೋಗಿದ್ದೇನೆ. ನಿಮಗೆ ಅಭಿನಂದನೆಗಳು…” ಎಂದು ಯುವ




