Menu

ಕದನ ವಿರಾಮಕ್ಕೆ ಒಪ್ಪಿಕೊಳ್ಳದಿದ್ದರೆ ತೈಲ ಪೈಪ್‌ಲೈನ್‌ಗಳು ಸ್ಫೋಟ: ಟ್ರಂಪ್‌ ಇರಾನ್‌ಗೆ ವಾರ್ನ್‌

ಮೂರು ದಿನಗಳೊಳಗೆ ಕದನ ವಿರಾಮಕ್ಕೆ ಒಪ್ಪಿಕೊಳ್ಳಿ, ಇಲ್ಲದಿದ್ದರೆ ತೈಲ ಪೈಪ್‌ಲೈನ್‌ಗಳು ಸ್ಫೋಟಗೊಳ್ಳಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ವಾರ್ನ್‌ ಮಾಡಿದ್ದಾರೆ.

ಅಮೆರಿಕದ ನೌಕಾಪಡೆ ಬಂದರುಗಳನ್ನು ದಿಗ್ಬಂಧನ ಮಾಡಿದ್ದರಿಂದ ಇರಾನ್‌ಗೆ ತೈಲವನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ತೈಲ ಹರಿವು ನಿಂತರೆ ಪೈಪ್‌ಲೈನ್‌ಗಳಲ್ಲಿ ಅತಿ ಒತ್ತಡ ಉಂಟಾಗಿ ಅವು ಯಾಂತ್ರಿಕವಾಗಿ ಮತ್ತು ತಾಂತ್ರಿಕವಾಗಿ ಹಾನಿಗೊಳಗಾಗುತ್ತವೆ. ಪೈಪ್‌ಲೈನ್‌ಗಳು ಸ್ಫೋಟಗೊಂಡರೆ ಅಥವಾ ಹಾನಿಗೊಳಗಾದರೆ ಅದನ್ನು ಮೊದಲಿನ ಸ್ಥಿತಿಗೆ ತರಲು ಸಾಧ್ಯವಿಲ್ಲ. ಇರಾನ್ ಒಟ್ಟು ತೈಲ ಉತ್ಪಾದನಾ ಸಾಮರ್ಥ್ಯದ ಶೇ. 50 ರಷ್ಟು ಶಾಶ್ವತವಾಗಿ ಕಳೆದುಕೊಳ್ಳಬಹುದು ಎಂದು ಟ್ರಂಪ್‌ ಹೇಳಿದ್ದಾರೆ.

ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಪಾಕಿಸ್ತಾನದ ಮೂಲಕ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿ. ಅಮೆರಿಕ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡರೆ ಹರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಹೇಳಿದ್ದಾರೆ. ಅಮೆರಿಕದ ನಿಯಮಗಳಿಗೆ ಒಪ್ಪದಿದ್ದರೆ ಈ ಯಾವುದೇ ಪ್ರಸ್ತಾವನೆಗಳು ಕೆಲಸ ಮಾಡುವುದಿಲ್ಲ ಎಂದು ಟ್ರಂಪ್‌ ಕಠಿಣ ನಿಲುವು ಪ್ರಕಟಿಸಿದ್ದಾರೆ.

ಫಾಕ್ಸ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ವೇಳೆ ಇರಾನ್ ತೈಲ ರಫ್ತು ಮಾಡಲು ಸಾಧ್ಯವಾಗದಿದ್ದರೆ, ತೈಲ ಸಂಗ್ರಹಣಾ ಸಾಮರ್ಥ್ಯ ಮೀರಿ ಪೈಪ್‌ಲೈನ್‌ಗಳ ಒಳಗೆ ಒತ್ತಡ ಹೆಚ್ಚಾಗಲಿದೆ. ಇದರಿಂದಾಗಿ ಪೈಪ್‌ಲೈನ್‌ಗಳು ಒಳಗಿನಿಂದಲೇ ಸ್ಫೋಟಗೊಳ್ಳಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್ ತನ್ನ ದೇಶದಲ್ಲಿ ನಡೆಸುತ್ತಿರುವ ಯುರೇನಿಯಂ ಚಟುವಟಿಕೆಗಳನ್ನು ಸಂಪೂರ್ಣ ನಿಲ್ಲಿಸಬೇಕು. ಇರಾನ್ 440 ಕೆಜಿಗಿಂತ ಹೆಚ್ಚು ಪ್ರಮಾಣದ ಶೇ. 60ರಷ್ಟು ಪುಷ್ಟೀಕರಿಸಿದ ಯುರೇನಿಯಂ ದಾಸ್ತಾನನ್ನು ಅಮೆರಿಕಕ್ಕೆ ಅಥವಾ ಯಾವುದಾದರೂ ಮೂರನೇ ದೇಶಕ್ಕೆ ಹಸ್ತಾಂತರಿಸಬೇಕು ಎಂದು ಅಮೆರಿಕ ಹೇಳಿದೆ.

Related Posts

Leave a Reply

Your email address will not be published. Required fields are marked *