Monday, September 28, 2026
Menu

ವಿಮಾನದಲ್ಲಿ ಬಂದು ಬಿಎಸ್ಸೆನ್ನೆಲ್‌ ಕೇಬಲ್‌ ಕದಿಯುತ್ತಿದ್ದ ಖದೀಮರು ಅರೆಸ್ಟ್‌

ವಿಮಾನದಲ್ಲಿ ಬಂದು ಬಿಎಸ್‌ಎನ್‌ಎಲ್ ನೌಕರರು ಧರಿಸುವ ಮಾದರಿಯ ನೀಲಿ ಬಣ್ಣದ ಸಮವಸ್ತ್ರ ಧರಿಸಿಕೊಂಡು ಬಿಎನ್ನೆಸ್ಸೆಲ್‌ನ ಲಕ್ಷಾಂತರ ರೂಪಾಯಿ ಮೌಲ್ಯದ ತಾಮ್ರದ ತಂತಿಗಳನ್ನು ಕಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶದ ಅಂತರಾಜ್ಯ ಕಳ್ಳರ ತಂಡವನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ನಿವಾಸಿಗಳಾದ ರವಿ ಚವ್ಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಬಂಧಿತರು. ಈ ಕಳ್ಳರು ಬೆಂಗಳೂರು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಇದೇ ರೀತಿ ಕಳ್ಳತನ ನಡೆಸುತ್ತಿರುವುದು ಪತ್ತೆಯಾಗಿದೆ. ಸಾರ್ವಜನಿಕರಿಗೆ ಅನುಮಾನ

ವಾಟ್ಸಾಪ್ ಯುನಿವರ್ಸಿಟಿ ಮಾಹಿತಿ ಒಪ್ಪಲಾಗದು: ಸುಪ್ರೀಂಕೋರ್ಟ್‌

ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬಂದ ಮಾಹಿತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀಕ್ಷ್ಣ ಹೇಳಿಕೆ ನೀಡಿದೆ. ಶಬರಿಮಲೆ ಸೇರಿದಂತೆ ದೇಶದ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಾಲಯ ಈ ಅಭಿಪ್ರಾಯ ಮಂಡಿಸಿದೆ.

ತಾಯಿ, ಪತ್ನಿ, ಮಕ್ಕಳ ಕೊಂದು ವ್ಯಕ್ತಿ ಆತ್ಮಹತ್ಯೆ

ತಿರುಪತಿ ಜಿಲ್ಲೆಯ ನಾರಾಯಣವನಂ ಮಂಡಲದ ವೆಂಕಟಕೃಷ್ಣಪಾಲೆಂ ಪಂಚಾಯತ್‌ನಲ್ಲಿ ಐದು ಜನರ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೋಹನ್ ಎಂಬ ವ್ಯಕ್ತಿ ಪತ್ನಿ ಮತ್ತು ತಾಯಿಯನ್ನು ಕತ್ತು ಹಿಸುಕಿ ಕೊಂದು, ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾರತ, ಚೀನಾ ನಾಗರಿಕತೆ ತೊಟ್ಟಿಲುಗಳಲ್ಲ, ನರಕದ ಕೂಪಗಳು: ಹೀಯಾಳಿಸಿದ ಟ್ರಂಪ್‌

ಭಾರತ, ಚೀನಾ ಕೇವಲ ನರಕದ ಕೂಪಗಳು, ಇವುಗಳು ನಾಗರಿಕತೆಯ ತೊಟ್ಟಿಲುಗಳಲ್ಲ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರು ಗ್ಯಾಂಗ್‌ಸ್ಟರ್ಸ್‌ ವಿತ್‌ ಲ್ಯಾಪ್‌ಟಾಪ್‌ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೀಯಾಳಿಸಿದ್ದಾರೆ. ಟ್ರಂಪ್ ಭಾರತ ಮತ್ತು ಚೀನಾ ವಲಸಿಗರ ವಿರುದ್ಧ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026: ಭಾರತದ ಮ್ಯಾಪ್‌ ಪಝಲ್‌ ಜೋಡಿಸಿದ ಕೊಪ್ಪಳದ ತೇಜಸ್‌

ಕೊಪ್ಪಳ ಜಿಲ್ಲೆಯ ಬಾಲಕ ತೇಜಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಸಾಧಾರಣ ಏಕಾಗ್ರತೆ ಮತ್ತು ವೇಗದ ಮೂಲಕ ಭಾರತದ ನಕಾಶೆಯ ಪಝಲ್‌ಗಳನ್ನು ಜೋಡಿಸುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026’ರಲ್ಲಿ ಸ್ಥಾನ ಪಡೆದಿದ್ದಾನೆ. ತೇಜಸ್‌ ಕೊಪ್ಪಳಕಿದದಾಳದ ಶಾರದಾ ಇಂಟರ್‌ ನ್ಯಾಷನಲ್ ಶಾಲೆಯ 4ನೇ

ತಮಿಳುನಾಡು, ಪಶ್ಚಿಮಬಂಗಾಳ ವಿಧಾನಸಭೆಗಳಿಗೆ ಮತದಾನ ಇಂದು

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳು ಮತ್ತು ಪಶ್ಚಿಮ ಬಂಗಾಳದ 152 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ತಮಿಳುನಾಡಿನಲ್ಲಿ ಈ ಬಾರಿ ಡಿಎಂಕೆ, ಎಐಡಿಎಂಕೆ ನಡುವೆ ಹಾಗೂ ದಳಪತಿ ವಿಜಯ್‌ ನೇತೃತ್ವದ ಟಿವಿಕೆ ನಡುವೆ

ಬಹಳ ಬಾಂಬ್‌ಗಳು ಸಿಡಿಯುತ್ತವೆ ಎಂದ ಟ್ರಂಪ್‌: ಹೊಸ ಕಾರ್ಡ್‌ಗಳ ಪ್ರದರ್ಶಿಸಲು ಸಿದ್ಧವೆಂದ ಇರಾನ್‌

ಅಮೆರಿಕ ಮತ್ತು ಇರಾನ್ ನಡುವೆ ದ್ವಿತೀಯ ಹಂತದ ಶಾಂತಿ ಮಾತುಕತೆ ಕೂಡ ಫಲಪ್ರದವಾಗುವ ನಿರೀಕ್ಷೆ ಇಲ್ಲದ ಕಾರಣ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಕದನ ವಿರಾಮ ವಿಫಲವಾದರೆ ಬಹಳಷ್ಟು ಬಾಂಬ್‌ಗಳು ಸಿಡಿಯುತ್ತವೆ”ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ

ದಕ್ಷಿಣ ಭಾರತದ ರಾಜ್ಯಗಳ ಹಕ್ಕುಗಳನ್ನು ಉಳಿಸುವ ಸವಾಲು ನಮ್ಮ ಮುಂದೆ: ಡಿಕೆ ಶಿವಕುಮಾರ್‌

ತಮಿಳು, ಕನ್ನಡ, ತೆಲುಗು, ಮಲೆಯಾಳಂ ಸೇರಿದಂತೆ ಅನೇಕ ವೈವಿದ್ಯತೆಯನ್ನು ದಕ್ಷಿಣ ಭಾರತ ಹೊಂದಿದೆ. ನಮ್ಮ ದಕ್ಷಿಣ ಭಾರತದ ರಾಜ್ಯಗಳ ಹಕ್ಕುಗಳನ್ನು ಉಳಿಸುವ ಸವಾಲು ನಮ್ಮ ಮುಂದೆ ಎದುರಾಗಿದೆ. ಇದಕ್ಕಾಗಿ ನೀವು ಡಿಎಂಕೆ, ಕಾಂಗ್ರೆಸ್‌, ಮಿತ್ರಪಕ್ಷಗಳಿಗೆ ಜನ ಆಶೀರ್ವಾದ ಮಾಡಬೇಕು” ಎಂದು ಹೇಳಿದರು.

ಬೋನಿ ಕಪೂರ್‌ ನನ್ನ ಕೊಲೆ ಮಾಡಿದ್ದು ಅಂತ ಹೇಳಿತಾ ಶ್ರೀ ದೇವಿ ಆತ್ಮ?

ಸೂಪರ್ ಸ್ಟಾರ್‌ ಶ್ರೀದೇವಿ 2018 ರಲ್ಲಿ ನಿಗೂಢವಾಗಿ ಮೃತಪಟ್ಟಿದ್ದು, ಅವರ ಸಾವು ಅಪಘಾತವಲ್ಲ, ಕೊಲೆ. ಕೊಲೆ ಮಾಡಿದ ವ್ಯಕ್ತಿ ಬೋನಿ ಕಪೂರ್ ಎಂದು  ಆಕೆಯ ಆತ್ಮವೇ ಹೇಳಿದೆ ಎಂಬ ಮಾಹಿತಿಯನ್ನು ಅತೀಂದ್ರಿಯ ಸಂಶೋಧಕ ಸೌರಭ್ ಪೂನಿಯಾ ಬಹಿರಂಗ ಮಾಡಿದ್ದಾರೆ. ಪ್ಯಾರಾನಾರ್ಮಲ್ ತನಿಖೆ

ಆಪರೇಷನ್ ಆಕ್ಟೋಪಸ್ 2.0: 32 ಬ್ಯಾಂಕ್ ಉದ್ಯೋಗಿಗಳು ಸೇರಿ 52 ಸೈಬರ್‌ ವಂಚಕರ ಬಂಧನ

ಆಪರೇಷನ್ ಆಕ್ಟೋಪಸ್ 2.0 ಹೆಸರಿನಲ್ಲಿ ಹೈದರಾಬಾದ್ ಪೊಲೀಸರು ಒಂಬತ್ತು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಸೈಬರ್‌ ವಂಚನೆ ಜಾಲದಲ್ಲಿರುವ 32 ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ 52 ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾಯಿಸಲು ಸೈಬರ್ ಅಪರಾಧಿಗಳಿಗೆ ನಕಲಿ ಖಾತೆಗಳನ್ನು ತೆರೆಯಲು ಮತ್ತು