Menu

ಒಮ್ಮತದಿಂದ ಸ್ವೀಕೃತಗೊಂಡಿದ್ದ ಮಹಿಳಾ ಮೀಸಲು ಮಸೂದೆ ಮರಳಿ ತನ್ನಿ: ಪ್ರಿಯಾಂಕಾ ಗಾಂಧಿ

ಹಿಂದೆ ಎಲ್ಲಾ ರಾಜಕೀಯ ಪಕ್ಷಗಳಿಂದ ಒಮ್ಮತದಿಂದ ಸ್ವೀಕೃತಗೊಂಡಿದ್ದ ಮಹಿಳಾ ಮೀಸಲು ಮಸೂದೆಯನ್ನು ಮರಳಿ ತರುವಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ಎಲ್ಲಾ ಪಕ್ಷಗಳಿಂದ ಅಂಗೀಕರಿಸಲ್ಪಟ್ಟ ಹಳೆಯ ಮಹಿಳಾ ಮಸೂದೆಯನ್ನು ಸೋಮವಾರವೇ ಕೇಂದ್ರ ಸರ್ಕಾರ ಮಂಡಿಸಬೇಕು. ಸಂಸತ್ ಅಧಿವೇಶನ ನಡೆಸಿ ಹಳೆಯ ಮಸೂದೆಯನ್ನು ತನ್ನಿ, ಯಾರು ಮಹಿಳಾ ವಿರೋಧಿ ಎಂಬುದನ್ನು ನೋಡೋಣ. ನಾವೆಲ್ಲರೂ ಮತ ಚಲಾಯಿಸುತ್ತೇವೆ ಮತ್ತು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.

ಮಹಿಳಾ ಮೀಸಲಾತಿಯ ಅನುಷ್ಠಾನಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬಳಿಕ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿದೆ, ಈ ಮಧ್ಯೆ ಪ್ರಿಯಾಂಕಾ ಗಾಂಧಿ ಈ ಸವಾಲು ಹಾಕಿದ್ದಾರೆ.

ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಸಿಕ್ಕಿಲ್ಲ, ವನ್ನು ಪಡೆಯಲು ಸಾಧ್ಯವಾಗಲಿಲ್ಲ, 298 ಮತ ಪರವಾಗಿ ಮತ್ತು 230 ಮತ ವಿರುದ್ಧವಾಗಿ ಚಲಾವಣೆಗೊಂಡಿವೆ.

ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗದ ಕಾರಣಗಿ ಸಂಸತ್ತಿನ ಆವರಣದಲ್ಲಿ ಎನ್‌ಡಿಎ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಅರ್ಜುನ್ ರಾಮ್ ಮೇಘವಾಲ್ ಸಂಸತ್ತಿನಲ್ಲಿ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ 2026, ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ 2026, ಡಿಲಿಮಿಟೇಶನ್ ಮಸೂದೆ 2026 ಮಂಡಿಸಿದ್ದರು. ಲೋಕಸಭೆಯ ಗಾತ್ರ ಹೆಚ್ಚಿಸಲು, 2011ರ ಜನಗಣತಿಯ ಆಧಾರದಲ್ಲಿ ಸೀಮಾ ನಿರ್ಣಯ ಸಕ್ರಿಯಗೊಳಿಸಲು ಮತ್ತು ಸೀಮಾ ನಿರ್ಣಯದ ಆಧಾರದ ಮೇಲೆ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವ ಉದ್ದೇಶ ಹೊಂದಿತ್ತು.

Related Posts

Leave a Reply

Your email address will not be published. Required fields are marked *