ನಗೋಯಾ: ಜಪಾನ್ನ ಐಚಿ-ನಗೋಯಾದಲ್ಲಿ (Aichi-Nagoya) ಅತ್ಯಂತ ರೋಮಾಂಚಕಾರಿಯಾಗಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ (Asian Para Games) ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ. ಸ್ಪರ್ಧೆಯ ಮೂರನೇ ದಿನವಾದ ಇಂದು ಭಾರತದ ಅಥ್ಲೀಟ್ಗಳು ಪದಕಗಳ ಬೇಟೆಯನ್ನು ಮುಂದುವರಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಪುರುಷರ ಶಾಟ್ ಪುಟ್ ಸ್ಪರ್ಧೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಯುವ ಕ್ರೀಡಾಪಟು ಆಯುಷ್ ವರ್ಮಾ (Ayush Verma) ಭಾರತಕ್ಕೆ ಈ ಕೂಟದ 10ನೇ ಚಿನ್ನದ ಪದಕವನ್ನುತಂದುಕೊಟ್ಟಿದ್ದಾರೆ.
ಶಾಟ್ ಪುಟ್ನಲ್ಲಿ ಚಿನ್ನದ ಘರ್ಜನೆ ಹಾಗೂ ಎರಡನೇ ಪದಕದ ಸಾಧನೆ
ಪುರುಷರ ಶಾಟ್ ಪುಟ್ F53 ವಿಭಾಗದಲ್ಲಿ ಕಣಕ್ಕಿಳಿದ ಆಯುಷ್ ವರ್ಮಾ, ಅತ್ಯಂತ ನಿಖರ ಹಾಗೂ ಶಕ್ತಿಶಾಲಿಯಾದ ಪ್ರದರ್ಶನ ನೀಡಿ ಬರೋಬ್ಬರಿ 8.16 ಮೀಟರ್ ದೂರಕ್ಕೆ ಗುಂಡು (Shot Put) ಎಸೆದು ಅಗ್ರಸ್ಥಾನವನ್ನು ಅಲಂಕರಿಸಿದರು. ಇದರೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ ಹತ್ತಕ್ಕೇರಿದೆ. ವಿಶೇಷವೆಂದರೆ, ನಿನ್ನೆಷ್ಟೇ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದ ಆಯುಷ್, ಇಂದು ಶಾಟ್ ಪುಟ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಕ್ರೀಡಾಕೂಟದಲ್ಲಿ ತಮ್ಮ ಎರಡನೇ ಪದಕವನ್ನು ಮುಡಿಗೇರಿಸಿಕೊಂಡು ಡಬಲ್ ಧಮಾಕ ಸೃಷ್ಟಿಸಿದ್ದಾರೆ.
ಬಿಲ್ಲುಗಾರಿಕೆಯಲ್ಲಿ ಬೆಳ್ಳಿಯ ಹೆಮ್ಮೆ
ಇನ್ನು ಬಿಲ್ಲುಗಾರಿಕೆ ವಿಭಾಗದಲ್ಲೂ ಭಾರತೀಯ ಕ್ರೀಡಾಪಟುಗಳು ಪದಕದ ಖಾತೆ ತೆರೆದಿದ್ದಾರೆ. ಕಾಂಪೌಂಡ್ ಮಹಿಳೆಯರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಪ್ಯಾರಾ ಆರ್ಚರ್ ಶೀತಲ್ ದೇವಿ ಮತ್ತು ಪಾಯಲ್ ನಾಗ್ ಜೋಡಿಯು ಬಲಿಷ್ಠ ಚೀನಾ ದೇಶದ ಝಾವೋ ಜಿಂಗ್ ಮತ್ತು ಕ್ಸು ಕ್ಸುಕ್ವಿಂಗ್ ವಿರುದ್ಧ ತೀವ್ರ ಹೋರಾಟ ನಡೆಸಿ ಬೆಳ್ಳಿ ಪದಕವನ್ನತಮ್ಮದಾಗಿಸಿಕೊಂಡರು. ವಿಶ್ವ ಮಟ್ಟದಲ್ಲಿ ಭಾರತದ ಹೆಣ್ಣುಮಕ್ಕಳು ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.
ಭಾರತದ ಪದಕ ಬೇಟೆ ಚುರುಕು
ಈಗಾಗಲೇ ಪ್ಯಾರಾ-ಅಥ್ಲೆಟಿಕ್ಸ್, ಪ್ಯಾರಾ-ಈಜು, ಪ್ಯಾರಾ-ಪವರ್ಲಿಫ್ಟಿಂಗ್, ಪ್ಯಾರಾ-ಸೈಕ್ಲಿಂಗ್, ಪ್ಯಾರಾ-ಜೂಡೋ, ಪ್ಯಾರಾ-ಬ್ಯಾಡ್ಮಿಂಟನ್ ಮತ್ತು ಪ್ಯಾರಾ-ಟೇಬಲ್ ಟೆನ್ನಿಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭಾರತೀಯ ಅಥ್ಲೀಟ್ಗಳು ವಿರೋಚಿತ ಪ್ರದರ್ಶನ ನೀಡುತ್ತಿದ್ದಾರೆ. ಪದಕ ಪಟ್ಟಿಯಲ್ಲಿ ಭಾರತ ಮತ್ತಷ್ಟು ಮೇಲಕ್ಕೇರುವ ವಿಶ್ವಾಸ ಮೂಡಿಸಿದ್ದು, ದೇಶದ ಕ್ರೀಡಾಭಿಮಾನಿಗಳು ಕ್ರೀಡಾಪಟುಗಳ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
#AsianParaGames2026 #AyushVerma #SheetalDevi #TeamIndia #UdayakalaNews #ParaAthletics #ArcherySilver #ProudMoment


