ಮೇಲ್ಮನೆ ಚೇರ್‌ಮನ್ ಆಗಿರುವ ತಮ್ಮಿಂದ ಬಲವಂತವಾಗಿ ರಾಜೀನಾಮೆಯನ್ನು ಪಡೆಯಲಾಗಿದೆ ಎಂದು ಹೊರಟ್ಟಿ ರಾಜ್ಯಪಾಲರಿಗೆ ದೂರು ನೀಡಿದ್ದರೂ, ಇದನ್ನು ರಾಜ್ಯಪಾಲರ ಮುಂದೆ ಸಾಬೀತುಪಡಿಸಬೇಕಾದವರೂ ಇವರೇ ಆಗಿದ್ದಾರೆ. ಒಮ್ಮೆ ರಾಜೀನಾಮೆಯನ್ನು ಕೊಟ್ಟಾ ಗ , ಇದು ತನ್ನ ಸ್ವಯಂ ಇಚ್ಛೆಯಿಂದಲೇ ಕೂಡಿದ್ದಾಗಿದೆ ಎಂಬ ಉಲ್ಲೇಖವಿದ್ದ ಮೇಲೆ ಸಲ್ಲಿಕೆಯಾಗುವ ದೂರು ಮತ್ತು ಅಹವಾಲನ್ನು ಕಾನೂನಿನಡಿ ರಾಜ್ಯಪಾಲರು ಹೇಗೆ ಪರಿಗಣಿಸುವರೆಂಬುದೂ ಗಮನಾರ್ಹ.
ರಾಜ್ಯ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಘಟನೆಯೀಗ ರಾಜ್ಯಪಾಲರ ಅಂಗಣ ತಲುಪಿದೆ. ಮೂರು ದಿನಗಳ ಹಿಂದೆ ಹೊರಟ್ಟಿ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದರು. ತದನಂತರ ಈಗ ಹೊರಟ್ಟಿ , ರಾಜೀನಾಮೆಗೆ ಒತ್ತಡವಿತ್ತು ಎಂದು ರಾಜ್ಯಪಾಲರಿಗೆ ದೂರಿದ್ದಾರೆ. ವಾಸ್ತವದಲ್ಲಿ ಹೊರಟ್ಟಿ ತಾವು ಹೊಂದಿರುವ ಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರಲಿಲ್ಲ. ನಿಯಮಾವಳಿ ಪ್ರಕಾರ ಇಂತಹ ಹುದ್ದೆಗಳಿಗೆ ಬಲವಂತವಾಗಿ ರಾಜೀನಾಮೆ ಪಡೆಯುವುದು ಕ್ರಮವಲ್ಲ. ಶಾಸನಸಭೆಯ ಸಭಾಪತಿಗಳು ಮತ್ತು ಸಭಾಧ್ಯಕ್ಷರು ಯಾವ ರಾಜಕೀಯ ಪಕ್ಷದ ಪ್ರತಿನಿಧಿಗಳಲ್ಲ. ರಾಜಕೀಯ ಪಕ್ಷಗಳ ಬೆಂಬಲ ಅಥವಾ ಸಹಯೋಗದಿಂದ ಮೇಲ್ಮನೆ ಅಥವಾ ಕೆಳಮನೆಗೆ ಓರ್ವ ವ್ಯಕ್ತಿ ಆಯ್ಕೆಯಾದರೂ, ನ್ಯಾಯಾಲಯದ ನ್ಯಾಯಪೀಠದಂತೆ ಪ್ರಜಾಸದನದಲ್ಲಿ ತಟಸ್ಥ ಪೀಠವನ್ನು ಅಲಂಕರಿಸುವ ಸಭಾಧ್ಯಕ್ಷರ ಹುದ್ದೆಗಳು ಸಂವಿಧಾನದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಆದರೆ ಈU ರಾಜ್ಯದ ವಿಧಾನಪರಿಷತ್ ಸಭಾಧ್ಯಕ್ಷರ ರಾಜೀನಾಮೆ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಈಗ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಾಗಿದೆ.
ಮೇಲ್ಮನೆ ಚೇರ್‌ಮನ್ ಆಗಿರುವ ತಮ್ಮಿಂದ ಬಲವಂತವಾಗಿ ರಾಜೀನಾಮೆಯನ್ನು ಪಡೆಯಲಾಗಿದೆ ಎಂದು ಹೊರಟ್ಟಿ ರಾಜ್ಯಪಾಲರಿಗೆ ದೂರು ನೀಡಿದ್ದರೂ, ಇದನ್ನು ರಾಜ್ಯಪಾಲರ ಮುಂದೆ ಸಾಬೀತುಪಡಿಸಬೇಕಾದವರೂ ಇವರೇ ಆಗಿದ್ದಾರೆ. ಒಮ್ಮೆ ರಾಜೀನಾಮೆಯನ್ನು ಕೊಡುವಾಗ , ಇದು ತನ್ನ ಸ್ವಯಂ ಇಚ್ಚೆಯಿಂದಲೇ ಕೂಡಿದ್ದಾಗಿದೆ ಎಂಬ ಉಲ್ಲೇಖವಿದ್ದ ಮೇಲೆ , ತದನಂತರ ಸಲ್ಲಿಕೆಯಾಗುವ ದೂರು ಮತ್ತು ಅಹವಾಲನ್ನು ಕಾನೂನಿನ ಅಡಿ ರಾಜ್ಯಪಾಲರು ಹೇಗೆ ಪರಿಗಣಿಸುವರೆಂಬುದು ಗಮನಾರ್ಹ. ಒಂದು ವೇಳೆ ಹೊರಟ್ಟಿ ನೀಡಿರುವ ದೂರಿನ ಮೇರೆಗೆ ರಾಜ್ಯಪಾಲರು ವಿಚಾರಣೆ ನಡೆಸಲು ಕಾನೂನಿನಲ್ಲಿ ಯಾವ ಯಾವ ಅವಕಾಶವಿದೆ? ಇಂತಹ ವಿದ್ಯಮಾನಗಳಿಗೆ ರಾಜ್ಯಪಾಲ ಗೆಹ್ಲೋಟ್ ಮುಂದಾಗುವರೇ ಎಂಬುದು ಗಂಭೀರ ಪ್ರಶ್ನೆ. ಇಂತಹ ಸಮಯದಲ್ಲಿ ರಾಜ್ಯಪಾಲರು ಸಂವಿಧಾನಿಕವಾಗಿ ತಾವು ಅನುಸರಿಸಬೇಕಿರುವ ಮಾರ್ಗಗಳ ಬಗ್ಗೆ ಅಡ್ವೋಕೇಟ್ ಜನರಲ್ ಅವರ ಸಲಹೆ ಕೇಳಬಹುದು.
ಒಟ್ಟಿನಲ್ಲಿ ಹೊರಟ್ಟಿ ಅವರೀಗ ನೇರವಾಗಿ ಲೋಕಭವನದ ಕದ ತಟ್ಟಿರುವ ಪರಿಣಾಮವಾಗಿ, ವಿಧಾಪರಿಷತತ್ ಸಭಾಪತಿಯ ಮುಂದಿನ ಆಯ್ಕೆ ಕೂಡಾ ಗೊಂದಲ ಮತ್ತು ಗೋಜಲುಮಯವಾಗುವುದು ಖಂಡಿತ. ನಾಲ್ಕು ತಿಂಗಳ ಹಿಂದೆ ರಾಜ್ಯಸಭೆಯ ಚೇರ್‌ಮೆನ್ ಆಗಿದ್ದ ಜಯದೀಪ್ ಧನಕರ್ ಕೂಡಾ ಯಾವ ಸುಳಿವೂ ಮತ್ತು ಸೂಚನೆ ಇಲ್ಲದೆ ರಾಜ್ಯಸಭೆ ಹುದ್ದೆಗೆ ಗುಡ್‌ಬೈ ಹೇಳಿ ಈ ಆ ಸ್ಥಾನದಿಂದ ಪಕ್ಕಕ್ಕೆ ಸರಿದಿದ್ದು ಗಮನಾರ್ಹ. ಈ ಮಧ್ಯೆ ರಾಜ್ಯಪಾಲರು ಈ ವಿಚಾರದಲ್ಲಿ ಕೈಗೊಳ್ಳುವ ತೀರ್ಮಾನವನ್ನು ಪ್ರಶ್ನಿಸಿ ಹೊರಟ್ಟಿ ಅವರು ಹೈಕೋರ್ಟ್ ಮೆಟ್ಟಿಲು ಏರುವ ಸಾಧ್ಯತೆಯೂ ಇದೆ. ಒಂದು ವೇಳೆ ಹೈಕೋರ್ಟ್ ಈ ವಿಚಾರದಲ್ಲಿ ಮಧ್ಯೆಪ್ರವೇಶಿಸಿ ಆದೇಶವನ್ನು ನೀಡಿದರೆ ಮೇಲ್ಮನೆ ಸಭಾಪತಿಯ ಹುದ್ದೆ, ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿಯೆ ಮೊಟ್ಟ ಮೊದಲ ಭಾರಿಗೆ ಭಾರಿ ಸಂವಿಧಾನ ಬಿಕ್ಕಟ್ಟು ಒಂದು ತಲೆದೋರಿದಂತಾಗುವುದು ಖಂಡಿತ.


