ಈ ಬಾರಿ ಸಿಂಧನೂರು ಕ್ಷೇತ್ರಕ್ಕೆ ಸಚಿವ ಸ್ಥಾನ ಗ್ಯಾರಂಟಿ: ಶಾಸಕ ಹಂಪನಗೌಡ
ರಾಜ್ಯ ಸರ್ಕಾರ ಸಚಿವ ಸಂಪುಟ ರಚನೆ ಮಾಡಿದರೆ ಈ ಬಾರಿ ನನ್ನನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಾರೆ, ಸಚಿವ ಸ್ಥಾನದ ಆಕಾಂಕ್ಷಿ ನಾನು ಇದ್ದೇನೆ. ಕೊಡುವ ನಿರೀಕ್ಷೆಯ ಗ್ಯಾರಂಟಿಯಲ್ಲಿ ಇದ್ದೇನೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ಸಿಂಧನೂರು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿ ಜಿಲ್ಲೆಯ ಹಿರಿಯ ಶಾಸಕರನ್ನು ಈ ಬಾರಿ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಮತ್ತು ರಾಜ್ಯ ನಾಯಕರ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದೇವೆ
ಬೆಂಗಳೂರು-ಮೈಸೂರು ಹೆದ್ದಾರಿ ಡಿವೈಡರ್‌ಗೆ ಬಸ್ ಡಿಕ್ಕಿ: ನಾಲ್ವರ ಸಾವು
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಡಿವೈಡರ್‌ಗೆ ಬಸ್ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಕೇರಳದ ಮಹಮ್ಮದ್ ಪರಾನ್ (22), ರಫೀಜ್ (45) ಹಾಗೂ ಬೆಂಗಳೂರು ಮೂಲದ ರಶೀದ್ (45), ಸಕೀರ್ (27) ಎಂದು ಗುರುತಿಸಲಾಗಿದೆ. ಕೇರಳ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದ
ದಲಿತರ ಹಣ ವಂಚಿಸಿದ ಕಾಂಗ್ರೆಸ್ ಸರ್ಕಾರ: ಆರ್ ಅಶೋಕ ಆರೋಪ
ಪರಿಶಿಷ್ಟರಿಗೆಲ್ಲಿದೆ SCSP/TSP ಅನುದಾನ ಗ್ಯಾರೆಂಟಿ? 4 ವರ್ಷಗಳಲ್ಲಿ ₹53,000 ಕೋಟಿ ದಲಿತರ ಹಣ ವಂಚಿಸಿದ ಕಾಂಗ್ರೆಸ್ ಸರ್ಕಾರ. 2023–24ನೇ ಸಾಲಿನಲ್ಲಿ ₹11,114 ಕೋಟಿ 2024–25ನೇ ಸಾಲಿನಲ್ಲಿ ₹14,282.38 ಕೋಟಿ 2025–26ನೇ ಸಾಲಿನಲ್ಲಿ ₹13,433 ಕೋಟಿ, 2026-27ನೇ ಸಾಲಿನಲ್ಲಿ ₹14,198.93 ಕೋಟಿ ವಂಚಿಸಲಾಗಿದೆ ಎಂದು
ಎಲ್‌ಪಿಜಿ ಬಿಕ್ಕಟ್ಟು: ರಾಜ್ಯದ ಬೇಡಿಕೆಗೆ ಕೇಂದ್ರ ಸ್ಪಂದಿಸಲಿ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಮತ್ತೆ ಮನವಿ ಮಾಡಿರುವುದು ಸರಿಯಷ್ಟೆ. ಈ ಮನವಿಯನ್ನು ಕೇಂದ್ರ ಸಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಇಂದು ಬೆಂಗಳೂರು, ಕೇವಲ ಕರ್ನಾಟಕದ ರಾಜಧಾನಿ ಮಾತ್ರವಲ್ಲ. ಭಾರತದ ಒಂದು ಪ್ರಮುಖ ಐಟಿ, ಬಿಟಿ ಮತ್ತು ವಾಣಿಜ್ಯ, ಶೈಕ್ಷಣಿಕ ಮತ್ತು
ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನಕ್ಕೆ ಆಗ್ರಹಿಸಿ ಸ್ವಾಮೀಜಿಗಳು ದೆಹಲಿಗೆ
ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕೂಲಿ ಸಿಗಬೇಕು. ಅವರಿಗೆ ಅತಿ ಶೀಘ್ರ ಮುಖ್ಯಮಂತ್ರಿ ಹುದ್ದೆ ಸಿಗಬೇಕು. ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್ ಬಳಿ ಒತ್ತಾಯಿಸುವುದಾಗಿ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ
ಇರಾನ್‌ನ ನತಾನ್ಜ್ ಯುರೇನಿಯಂ ಕೇಂದ್ರಕ್ಕೆ ಯುಎಸ್-ಇಸ್ರೇಲ್ ದಾಳಿ
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕದ ಜಂಟಿ ಸೈನಿಕ ಕಾರ್ಯಾಚರಣೆಗಳು ನಡೆಯುತ್ತಿದ್ದು, ಇರಾನ್‌ನ ಪ್ರಮುಖ ನತಾನ್ಜ್ ಯುರೇನಿಯಂ ಸಂಸ್ಕರಣಾ ಕೇಂದ್ರದ ಮೇಲೆ ದಾಳಿ ನಡೆದಿದೆ ಎಂದು ಇರಾನ್ ಮಾಧ್ಯಮಗಳು ಮತ್ತು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (IAEA) ಮಾಹಿತಿ ದೃಢೀಕರಿಸಿದೆ. ಇರಾನ್‌ನ ಅಂತರರಾಷ್ಟ್ರೀಯ
ಡಿಜಿಟಲ್ ಅರೆಸ್ಟ್ ವಂಚನೆ ತಡೆಗೆ ವಾಟ್ಸಾಪ್‌ಗೆ ಕೇಂದ್ರ ನಿರ್ದೇಶನ
ದೇಶದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳನ್ನು ನಿಯಂತ್ರಿಸಲು ವಾಟ್ಸಾಪ್ ಸಂಸ್ಥೆಗೆ ಮಹತ್ವದ ನಿರ್ದೇಶನಗಳನ್ನು ನೀಡಿರುವ ಕೇಂದ್ರ ಗೃಹ ಸಚಿವಾಲಯವು ವಂಚನೆ ಪ್ರಕರಣಗಳಲ್ಲಿ ಬಳಕೆಯಾಗುವ ಮೊಬೈಲ್ ಡಿವೈಸ್ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚಿಸಿದೆ. ವಂಚಕ ಅಥವಾ ವಂಚಕರ ಜಾಲವನ್ನು ಗುರುತಿಸಿದ ತಕ್ಷಣ, ಮೊಬೈಲ್‌ನ
ಇರಾನ್- ಇಸ್ರೇಲ್ ಸಂಘರ್ಷ: ಡಿಯಾಗೋ ಗಾರ್ಸಿಯಾ ಯುಎಸ್-ಯುಕೆ ಆರ್ಮಿ ಬೇಸ್ ಮೇಲೆ ಇರಾನ್ ದಾಳಿ
ನೆರೆಯ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದ ಇರಾನ್ ಈಗ ದಾಳಿಯ ತೀವ್ರತೆಯನ್ನು ಹೆಚ್ಚಿಸಿದ್ದು, ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಯುಕೆ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಅಮೆರಿಕ ಈ ದಾಳಿಯನ್ನು ನಿರಾಕರಿಸಿದೆ, ಆದರೂ ಟ್ರಂಪ್ ಇದನ್ನು ಖಂಡಿಸುವುದಾಗಿ ಹೇಳಿದ್ದಾರೆ. 4,000
ಅರಸೀಕೆರೆಯಲ್ಲಿ ಜೂಜು ಅಡ್ಡೆಗೆ ಪೊಲೀಸ್ ದಾಳಿ: ತಪ್ಪಿಸಿಕೊಳ್ಳುವಾಗ ಬಿದ್ದು ವ್ಯಕ್ತಿ ಸಾವು
ಹಾಸನದ ಅರಸೀಕೆರೆಯ ಅರೆಕೆರೆ ಗ್ರಾಮದಲ್ಲಿ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಪ್ರವೀಣ್ (34) ಮೃತಪಟ್ಟ ವ್ಯಕ್ತಿ. ಯುಗಾದಿ ಹಬ್ಬದ ಸಂಭ್ರಮದಲ್ಲಿ ತಾವರೆಹಳ್ಳಿ ನಿರ್ಜನ ಪ್ರದೇಶದಲ್ಲಿ ಯುವಕರ
ಚಿನ್ನಾಭರಣವಿದ್ದ ಬ್ಯಾಗ್ ವಾಪಸ್ ನೀಡಿದ ಬಿಎಂಟಿಸಿ ಡ್ರೈವರ್, ಕಂಡಕ್ಟರ್
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಚಿನ್ನಾಭರಣಗಳಿದ್ದ ಬ್ಯಾಗನ್ನು ಬಿಎಂಟಿಸಿ ಡ್ರೈವರ್ ಮತ್ತು ಕಂಡಕ್ಟರ್ ಪ್ರಾಮಾಣಿಕತೆಯಿಂದ ವಾಪಸ್ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಶುಕ್ರವಾರ ರಾತ್ರಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅವಸರದಲ್ಲಿ ಬ್ಯಾಗ್ ಅನ್ನು ಕುಳಿತ ಸೀಟಿನಲ್ಲೇ ಬಿಟ್ಟು ಇಳಿದಿದ್ದರು. ಬ್ಯಾಗ್‌ನಲ್ಲಿ




