Menu

ಕಡಿಮೆ ನೀರಿನ ಬೆಳೆ: ರೈತರಿಗೆ ಮಾಹಿತಿ ಕೊಡಿ

ಕಡಿಮೆ ನೀರಿನ ಪ್ರದೇಶದಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆ ಯಾವುದು ? ಇದೇ ಇಂದಿನ ಗಂಭೀರ ವಿಚಾರ. ನಾಡಿಗೆ ಅವಶ್ಯಕವಾಗಿ ಬೇಕಿರುವುದು ಬರದ ಸಮಸ್ಯೆಗೆ ಸಮರ್ಪಕ ಪರಿಹಾರವಷ್ಟೆ. ಬರೀ ರಾಜಕೀಯ ಕೆಸರೆರಚಾಟದಿಂದ ಜನತೆಗೆ ಯಾವ ಪ್ರಯೋಜನವೂ ಇಲ್ಲ ! ಇಂಟರ್‌ನೆಟ್ ಮತ್ತು ವಾಟ್ಸಪ್ ಅನ್ನು ಜನೋಪಯೋಗಿ ಆಗಿ ಬಳಸುವ ಬಗ್ಗೆ  ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಿದೆ. ರಾಜ್ಯದಲ್ಲಿ ಕೆಲವು ಕಡೆ ಮುಂಗಾರು ವಿಫಲ. ಇದರ ಪರಿಣಾಮವಾಗಿ ಅನ್ನದಾತ ಕಂಗಾಲು .

ಬಿಜೆಪಿ ಅಧಿಕಾರದಲ್ಲಿದ್ದಾಗ ಅಕ್ರಮ ವಲಸಿಗರನ್ನು ಯಾಕೆ ಓಡಿಸಲಿಲ್ಲ: ಸಿಎಂ ಡಿಕೆ ಶಿವಕುಮಾರ್‌

ವಿರೋಧ ಪಕ್ಷಗಳವರು  ಸುಮ್ಮನೆ ಅಕ್ರಮ ಬಾಂಗ್ಲಾ ವಲಸಿಗರು ಎಂದು ಹೇಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಅವರನ್ನು ಓಡಿಸಲಿಲ್ಲ,  ಆಗ ಯಾರು ತಡೆದಿದ್ದರು ಎಂದು ಸಿಎಂ ಡಿಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ  4.50 ಕೋಟಿ ಜನ ಜಾತಿ ಪ್ರಮಾಣಪತ್ರ ತೆಗೆದುಕೊಂಡಿದ್ದಾರೆ.

ಮಳವಳ್ಳಿಯಲ್ಲಿ ಕರಕಲಾದ ಶವ ಪತ್ತೆ ಕೇಸ್‌: ವಿವಾಹಿತೆ ಜೊತೆ ಸ್ನೇಹ, ಕೊಲೆ, ಆತ್ಮಹತ್ಯೆ

ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪದ ಸತ್ತೆಗಾಲ ರಸ್ತೆಯಲ್ಲಿ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಪ್ರಕರಣದ ತನಿಖೆ ನಡೆಸಿದ ಪೊಲೀಸರು ರಹಸ್ಯವನ್ನು ಬಯಲಿಗೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ನಳಿನಿ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ತಮಿಳುನಾಡು‌ ಉಪ್ಪಾರಹಳ್ಳಿಯ ರಾಜಶೇಖರ್ ಆಕೆಯನ್ನು

ಮಹಾರಾಷ್ಟ್ರದಲ್ಲಿ ಮಳೆ ಅವಾಂತರಕ್ಕೆ 13 ಮಂದಿ ಬಲಿ

ಮಹಾರಾಷ್ಟ್ರದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ಮುಂಬೈ, ಥಾಣೆ ಮತ್ತು ರಾಯಘಡ ತತ್ತರಿಸಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಮುಂಬೈ, ಪಾಲ್ಘರ್ ಮತ್ತು ರಾಯಗಡ ಜಿಲ್ಲೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾಗಿ

SIR ಲೋಪದ ಬಗ್ಗೆ ದೂರು: ಬಿಜೆಪಿಯ ಹೊಸ ನಾಟಕವೆಂದ ಪ್ರಿಯಾಂಕ್‌ ಖರ್ಗೆ 

ಎಸ್ ಐಆರ್ ಲೋಪದ ಬಗ್ಗೆ ದೂರು ಕೊಟ್ಬಿದ್ದು, ಬಿಜೆಪಿಯ ಮತ್ತೊಂದು ಹೊಸ ನಾಟಕ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ  ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ‌ ಬಂಗಾಳದಲ್ಲಿ ಮೊದಲು ಪ್ರತಿಭಟನೆ ಮಾಡಿದ್ದೆ ಬಿಜೆಪಿ. ಆಮೇಲೆ

ಚಿಂತಾಮಣಿಯಲ್ಲಿ ಪತ್ನಿ, ನಾದಿನಿಯ ಕೊಲೆಗೈದು ವ್ಯಕ್ತಿ ಪರಾರಿ

ಪತ್ನಿ ಮತ್ತು ಆಕೆಯ ತಂಗಿಯನ್ನು ಕೊಲೆ ಮಾಡಿ ವ್ಯಕ್ತಿಯಿ ಮೂವರು ಮಕ್ಕಳೊಂದಿಗೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಚಿಂತಾಮಣಿ ನಗರದ ಜೆಜೆ ಕಾಲೊನಿಯಲ್ಲಿ ನಡೆದಿದೆ.  25 ವರ್ಷದ ಶಮಾ ಮತ್ತು 21 ವರ್ಷದ ರೇಷ್ಮಾ ಕೊಲೆಯಾದ ಅಕ್ಕ-ತಂಗಿ. ಚಿಂತಾಮಣಿ ನಗರ ಠಾಣೆ ಪೊಲೀಸರು

ನಿವೃತ್ತ ಅಧಿಕಾರಿಯಿಂದ ಅನ್ಯಾಯವೆಂದು ಆರೋಪಿಸಿ ಮಗು ಜೊತೆ ಮಹಿಳೆ ಆತ್ಮಹತ್ಯೆ ಯತ್ನ

ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ ಮಹಿಳೆಯೊಬ್ಬರು ನಾಲ್ಕು ವರ್ಷದ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಬೇಕೆಂದು ಪಟ್ಟು ಹಿಡಿದಿದ್ದ ತಾಯಿ-ಮಗುವನ್ನು ಪೊಲೀಸರು ಮನವೊಲಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನಿವೃತ್ತ ಐಎಎಸ್‌ ಅಧಿಕಾರಿ, ಸ್ಥಳೀಯ ಯುವಕನಿಂದ ಅನ್ಯಾಯವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರನ್ನು

ಸಚಿವ ಸ್ಥಾನಕ್ಕಾಗಿ ಬೆಂಬಲಿಗರ ನಿಯೋಗ ಬರಬಾರದು, ವರಿಷ್ಠರ ತೀರ್ಮಾನ ಅಂತಿಮ: ಸಿಎಂ

ವಿಜಯಾನಂದ ಕಾಶಪ್ಪನವರ ಬೆಂಬಲಿಗರ, ಅಭಿಮಾನಿಗಳ ಭಾವನೆಯನ್ನು ವರಿಷ್ಠರಿಗೆ ತಿಳಿಸುತ್ತೇನೆ. ಯಾರೂ ಸಹ ಬೆಂಬಲಿಗರ ನಿಯೋಗ ಕರೆದುಕೊಂಡು ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಬಾರದು ಎಂದು ಮನವಿ ಮಾಡಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಮಂತ್ರಿ

ಭದ್ರಾ ಮೇಲ್ದಂಡೆ ಯೋಜನೆ 2028ಕ್ಕೆ ಪೂರ್ಣ, ಆಗಸ್ಟ್‌ನಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ಪ್ರಾಯೋಗಿಕ ಚಾಲನೆ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ ವೇಗ ನೀಡಲಾಗಿದ್ದು, 2028ರ ಒಳಗಾಗಿ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಯೋಜನೆಯ ಪ್ರಮುಖ ಅಂಗವಾದ ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಆಧರಿಸಿ ಆಗಸ್ಟ್-2026 ವೇಳಗೆ ಪ್ರಾಯೋಗಿಕವಾಗಿ ನೀರನ್ನು ಹರಿಸಿ ಚಾಲನೆ ನೀಡಲಾಗುವುದು

ಬೆಂಗಳೂರು ಗ್ರಾಮಾಂತರಕ್ಕೆ ಎತ್ತಿನಹೊಳೆ ಹರಿಸಿಯೇ ಹರಿಸುತ್ತೇವೆ: ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಎರಡು ಸಾವಿರ ಅಡಿ ಕೆಳಗೆ ಹೋಗಿದೆ. ನಮ್ಮ ಸರ್ಕಾರ ಎತ್ತಿನಹೊಳೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರು ತಂದೇ ತರುತ್ತೇವೆ. ಕೆರೆಗಳನ್ನು ತುಂಬಿಸುತ್ತೇವೆ. ನೀರನ್ನು ಈಗಾಗಲೇ ಹೊರಗೆ ತರುವಂತಹ ಶಕ್ತಿ ಭಗವಂತ ನನಗೆ ನೀಡಿದ್ದಾನೆ ಎಂದು