Wednesday, October 07, 2026
Menu

ನೀರಿನ ಸಂಪಿಗೆ ಬಿದ್ದು 6 ವರ್ಷದ ಬಾಲಕ ಸಾವು: ಮರಣೋತ್ತರ ಪರೀಕ್ಷೆ ವಿಳಂಬ, ಕುಟುಂಬಸ್ಥರ ಆಕ್ರೋಶ

ಉದಯಕಾಲ ನ್ಯೂಸ್‌, ಹುಬ್ಬಳ್ಳಿ: ನೀರು ತೆಗೆಯಲು ತೆರೆದಿದ್ದ ನೀರಿನ ಸಂಪಿಗೆ (Sump) ಆಯತಪ್ಪಿ ಬಿದ್ದು 6 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.ಹುಬ್ಬಳ್ಳಿ ಉಣಕಲ್ ಗ್ರಾಮದ ಗಣೇಶ್ ಕಾಲೋನಿ ನಿವಾಸಿ ಸಿದ್ಧಾರ್ಥ್ (6) ಮೃತ ದುರ್ದೈವಿ. ಬಾಲಕ ಸಿದ್ಧಾರ್ಥ್ 1ನೇ ತರಗತಿಯಲ್ಲಿ ಓದುತ್ತಿದ್ದನು.
ಬೆಳಗ್ಗೆ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಮನೆ ಬಳಿ ನೀರು ತೆಗೆಯಲು ತೆರೆದಿದ್ದ ಸಂಪಿನಲ್ಲಿ ಆಯತಪ್ಪಿ ಬಾಲಕ ಬಿದ್ದಿದ್ದಾನೆ. ಬಾಲಕ ಸಂಪಿಗೆ ಬಿದ್ದಿರುವುದನ್ನು ಗಮನಿಸಿದ ತಂದೆ ನಾಗಪ್ಪ ತಕ್ಷಣವೇ ರಕ್ಷಣೆಗೆ ಧಾವಿಸಿ, ಕೂಡಲೇ ಅಸ್ವಸ್ಥ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಬಾಲಕ ಪ್ರಾಣಪಕ್ಷಿ ಹಾರಿಹೋಗಿದೆ.
ಮರಣೋತ್ತರ ಪರೀಕ್ಷೆ ವಿಳಂಬಕ್ಕೆ ಆಕ್ರೋಶ
ಸದ್ಯ ಸಿದ್ಧಾರ್ಥ್ ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು, ಆಸ್ಪತ್ರೆಯ ಶವಾಗಾರದ ಎದುರು ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರೋಶ ಮುಗಿಲುಮುಟ್ಟಿದೆ. ಬೆಳಗ್ಗೆಯಿಂದ ಕಾಯುತ್ತಿದ್ದರೂ ಇದುವರೆಗೆ ಪೋಸ್ಟ್‌ಮಾರ್ಟಂ ಮಾಡಿಲ್ಲ ಎಂದು ಆರೋಪಿಸಿರುವ ಸಂಬಂಧಿಕರು, ವೈದ್ಯರು ಲಭ್ಯವಿಲ್ಲದಿರುವುದು ಹಾಗೂ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
**#Hubballi #Unkal #ChildDeath #WaterSumpAccident #KIMS #UdayakalaNews #KarnatakaNews #AccidentalDeath**

Related Posts

Leave a Reply

Your email address will not be published. Required fields are marked *