ಡಿಜಿಟಲ್ ಅರೆಸ್ಟ್ ವಂಚನೆ ತಡೆಗೆ ವಾಟ್ಸಾಪ್‌ಗೆ ಕೇಂದ್ರ ನಿರ್ದೇಶನ
ದೇಶದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳನ್ನು ನಿಯಂತ್ರಿಸಲು ವಾಟ್ಸಾಪ್ ಸಂಸ್ಥೆಗೆ ಮಹತ್ವದ ನಿರ್ದೇಶನಗಳನ್ನು ನೀಡಿರುವ ಕೇಂದ್ರ ಗೃಹ ಸಚಿವಾಲಯವು ವಂಚನೆ ಪ್ರಕರಣಗಳಲ್ಲಿ ಬಳಕೆಯಾಗುವ ಮೊಬೈಲ್ ಡಿವೈಸ್ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚಿಸಿದೆ. ವಂಚಕ ಅಥವಾ ವಂಚಕರ ಜಾಲವನ್ನು ಗುರುತಿಸಿದ ತಕ್ಷಣ, ಮೊಬೈಲ್‌ನ ಡಿವೈಸ್ ಐಡಿಯನ್ನು ಬ್ಲಾಕ್ ಮಾಡಬೇಕು, ಆಗ ವಂಚಕರು ಅದೇ ಮೊಬೈಲ್ ಬಳಸಿ ಮತ್ತೊಂದು ಅಕೌಂಟ್ ತೆರೆಯಲು ಸಾಧ್ಯವಾಗುವುದಿಲ್ಲ. ಐಟಿ ನಿಯಮಗಳ ಪ್ರಕಾರ, ಡಿಲಿಟ್ ಆದ ಅಕೌಂಟ್‌ಗಳ ಮಾಹಿತಿಯನ್ನು
ಇರಾನ್- ಇಸ್ರೇಲ್ ಸಂಘರ್ಷ: ಡಿಯಾಗೋ ಗಾರ್ಸಿಯಾ ಯುಎಸ್-ಯುಕೆ ಆರ್ಮಿ ಬೇಸ್ ಮೇಲೆ ಇರಾನ್ ದಾಳಿ
ನೆರೆಯ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದ ಇರಾನ್ ಈಗ ದಾಳಿಯ ತೀವ್ರತೆಯನ್ನು ಹೆಚ್ಚಿಸಿದ್ದು, ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಯುಕೆ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಅಮೆರಿಕ ಈ ದಾಳಿಯನ್ನು ನಿರಾಕರಿಸಿದೆ, ಆದರೂ ಟ್ರಂಪ್ ಇದನ್ನು ಖಂಡಿಸುವುದಾಗಿ ಹೇಳಿದ್ದಾರೆ. 4,000
ಅರಸೀಕೆರೆಯಲ್ಲಿ ಜೂಜು ಅಡ್ಡೆಗೆ ಪೊಲೀಸ್ ದಾಳಿ: ತಪ್ಪಿಸಿಕೊಳ್ಳುವಾಗ ಬಿದ್ದು ವ್ಯಕ್ತಿ ಸಾವು
ಹಾಸನದ ಅರಸೀಕೆರೆಯ ಅರೆಕೆರೆ ಗ್ರಾಮದಲ್ಲಿ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಪ್ರವೀಣ್ (34) ಮೃತಪಟ್ಟ ವ್ಯಕ್ತಿ. ಯುಗಾದಿ ಹಬ್ಬದ ಸಂಭ್ರಮದಲ್ಲಿ ತಾವರೆಹಳ್ಳಿ ನಿರ್ಜನ ಪ್ರದೇಶದಲ್ಲಿ ಯುವಕರ
ಚಿನ್ನಾಭರಣವಿದ್ದ ಬ್ಯಾಗ್ ವಾಪಸ್ ನೀಡಿದ ಬಿಎಂಟಿಸಿ ಡ್ರೈವರ್, ಕಂಡಕ್ಟರ್
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಚಿನ್ನಾಭರಣಗಳಿದ್ದ ಬ್ಯಾಗನ್ನು ಬಿಎಂಟಿಸಿ ಡ್ರೈವರ್ ಮತ್ತು ಕಂಡಕ್ಟರ್ ಪ್ರಾಮಾಣಿಕತೆಯಿಂದ ವಾಪಸ್ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಶುಕ್ರವಾರ ರಾತ್ರಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅವಸರದಲ್ಲಿ ಬ್ಯಾಗ್ ಅನ್ನು ಕುಳಿತ ಸೀಟಿನಲ್ಲೇ ಬಿಟ್ಟು ಇಳಿದಿದ್ದರು. ಬ್ಯಾಗ್‌ನಲ್ಲಿ
ಪಾವಗಡದಲ್ಲಿ ಇಲಾಖೆ ಜಂಟಿ ನಿರ್ದೇಶಕನ ಕಿರುಕುಳ ಆರೋಪ: ಅಧಿಕಾರಿ ಆತ್ಮಹತ್ಯೆ
ತುಮಕೂರಿನ ಪಾವಗಡದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದು, ಸಂಬಂಧಿಸಿದ ವೀಡಿಯೊ ಸಹೋದ್ಯೋಗಿಗಳಿಗೆ ಕಳಿಸಿದ್ದು ವೈರಲ್ ಆಗಿದೆ. ಪೊಲೀಸರು
ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ ಜಾರಿ: ಡಿಕೆ ಶಿವಕುಮಾರ್
ಬೆಂಗಳೂರು ನಾಗರಿಕರಿಗೆ ಜಲಮಂಡಳಿಯು ಯುಗಾದಿ ಉಡುಗೊರೆ ನೀಡಿದ್ದು, ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು, ಒನ್ ಟೈಮ್ ಸೆಟಲ್‌ಮೆಂಟ್ (𝗢𝗧𝗦 ) ಯೋಜನೆಯನ್ನು ಬರುವ ಏಪ್ರಿಲ್ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈ
ಸೈಬರ್ ವಂಚನೆ: 15 ಕೋಟಿ ರೂ. ಕಳೆದುಕೊಂಡ ಉದ್ಯಮಿ
ವೃದ್ಧ ಉದ್ಯಮಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ೧5 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಉದ್ಯಮಿಗೆ ವಿಡಿಯೋ ಕಾಲ್ ಮಾಡಿದ್ದ ಸೈಬರ್ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಫ್ರಾಡ್ ಲಿಸ್ಟ್‌ನಲ್ಲಿ ತೋರಿಸುತ್ತಿದೆ. ನೀವು ಮನಿ ಲಾಡ್ರಿಂಗ್
ಬೆಸ್ಕಾಂ ಚಿತ್ರದುರ್ಗ ವ್ಯಾಪ್ತಿಯಲ್ಲಿ ನಾಳೆಯಿಂದ ಮಾರ್ಚ್ 25ರ ವರೆಗೆ ವಿದ್ಯುತ್ ವ್ಯತ್ಯಯ
ಬೆಸ್ಕಾಂ ವ್ಯಾಪ್ತಿಯ ಚಿತ್ರದುರ್ಗ ಮತ್ತು ಕೋಲಾರ ಸೇರಿ ಹಲವೆಡೆ ನಾಳೆಯಿಂದ ಮಾರ್ಚ್ 25ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ನಿರ್ವಹಣಾ ಕಾಮಗಾರಿಗಳು ಮತ್ತು ಹೆಚ್‌ಟಿ ರೀಕಂಡಕ್ಟರಿಂಗ್ ಕಾರಣ
ಬಾಗಲಕೋಟೆ: ಕೈ ಟಿಕೆಟ್‌ಗೆ ಮೇಟಿ ಕುಟುಂಬದ ಫೈಟ್ ಮಧ್ಯೆ ಗೋವಿಂದರಾಜ ನಾಮಪತ್ರ ಸಲ್ಲಿಕೆ, ಬಿಜೆಪಿಯಿಂದ ಚರಂತಿಮಠ
ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಮೇಟಿ ಕುಟುಂಬದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿರುವ ಮಧ್ಯೆಯೇ ಗೋವಿಂದರಾಜ ಬಳ್ಳಾರಿ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಗೋವಿಂದರಾಜು ತಾವು ಆಕಾಂಕ್ಷಿಯೆಂದು ಹೇಳಿದ್ದು, ಯಾರಿಗೆ ಟಿಕೆಟ್ ಎನ್ನುವುದು ಫೈನಲ್
ತಮಿಳುನಾಡಿನಲ್ಲಿ ಬಿಜೆಪಿ ಗಾಳಕ್ಕೆ ಬೀಳದ ವಿಜಯ್
ಪರಿಶಿಷ್ಟರು, ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಅಭೂತಪೂರ್ವ ಬೆಂಬಲದಿಂದಲೇ ತಮಿಳುನಾಡು ಮತ್ತು ಆಂಧ್ರದಲ್ಲಿ ಡ್ರಾವಿಡ ಪಕ್ಷಗಳು ಮತ್ತು ತೆಲುಗುದೇಶಂ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ ಎಂಬುದು ಕಟುಸತ್ಯ. ತಮಿಳುನಾಡಿನ ರಾಜಕೀಯ ಒಂದು ಮತ -ಜಾತಿ ಹಾಗೂ ಧರ್ಮದ ಮೇಲೆ ಅವಲಂಬಿತವಾಗಿಲ್ಲ. ದ್ರಾವಿಡ ನೆಲದಲ್ಲಿ




