ಅಪರಾಧ
ಬಾಲಕಿ ಜೊತೆಗಿನ ಸಂಬಂಧ: ಮದುವೆಯಾಗಿ 20 ದಿನಕ್ಕೆ ಹೆಂಡತಿಯ ಕೊಲೆ
ಮದುವೆಯಾಗಿ ಇಪ್ಪತ್ತು ದಿನಗಳಲ್ಲೇ ವ್ಯಕ್ತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆ.ದಿಬ್ಬದಹಳ್ಳಿಯಲ್ಲಿ ನಡೆದಿದೆ. ಹೊಲದಿಂದ ಕರಿಬೇವು ಕಿತ್ತು ತರಲೆಂದು ಬೈಕ್‌ನಲ್ಲಿ ಕರೆದೊಯ್ದ ಪತಿ, ತನ್ನ ಸ್ನೇಹಿತನ ಜತೆ ಸೇರಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅನಿತಾ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಕೆ.ದಿಬ್ಬದಹಳ್ಳಿಯ
ಸಮಸ್ಯೆ ನಿವಾರಣೆಗಾಗಿ ವಿಶೇಷ ಪೂಜೆ: ಮಹಿಳೆಯ ಒಡವೆ, ಹಣ ದೋಚಿ ಫೇಕ್ ಸ್ವಾಮೀಜಿ ಎಸ್ಕೇಪ್
ಮಗಳ ವೈವಾಹಿಕ ಬದುಕಿನಲ್ಲಿ ಎದುರಾಗಿರುವ ಸಮಸ್ಯೆಗಳನ್ನು ವಿಶೇಷ ಪೂಜೆ ಮೂಲಕ ಪರಿಹರಿಸುವುದಾಗಿ ನಂಬಿಸಿ ಸ್ವಾಮೀಜಿ ಎಂದು ಹೇಳಿಕೊಂಡ ವ್ಯಕ್ತಿ 37 ವರ್ಷದ ಮಹಿಳೆಯಿಂದ 43 ಗ್ರಾಂ ಚಿನ್ನಾಭರಣ ಹಾಗೂ 1.3 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಂಚನೆಗೊಳಗಾದ
ಆನ್‌ಲೈನ್ ಗೇಮಿಂಗ್ ಚಟ: ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹತ್ತಿರದ ಮಾರಪ್ಪನಪಾಳ್ಯದಲ್ಲಿ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡು ಮೂರು ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 20 ವರ್ಷದ ಉದಯ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕೆಸಿ ಜನರಲ್ ಆಸ್ಪತ್ರೆಯಲ್ಲಿ
ಲಿವ್ ಇನ್ ಜೋಡಿ: ಮತ್ತೊಬ್ಬನಿಗೆ ಸಂದೇಶ ಕಳಿಸುತ್ತಿರುವುದಕ್ಕೆ ಬಾಲಕಿಯ ಕೊಲೆಗೈದ ಬಾಲಕ
ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಅಪ್ರಾಪ್ತ ವಯಸ್ಕ ಜೋಡಿಯಲ್ಲಿ ಬಾಲಕಿ ಮತ್ತೊಬ್ಬನಿಗೆ ಮೆಸೇಜ್ ಮಾಡುತ್ತಿರುವುದನ್ನು ಗಮನಿಸಿದ ಬಾಲಕ ಆಕೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಕೊಲೆಯನ್ನು ಮುಚ್ಚಿ ಹಾಕಲು ಆರೋಪಿ ಬಾಲಕ ಇತರ ಇಬ್ಬರೊಂದಿಗೆ ಸೇರಿ ಮೃತದೇಹವನ್ನು ಕೃಷಿ ಜಮೀನಿನಲ್ಲಿ ಹೂತುಹಾಕಿದ್ದ. ಪ್ರಕರಣ ಸಂಬಂಧ
3.38 ಕೋಟಿ ರೂ. ಅಕ್ರಮ ಪಾವತಿ: ಬೌರಿಂಗ್ಸ್ ಕ್ಲಬ್ ಮಾಜಿ ಪದಾಧಿಕಾರಿ ಎಚ್.ಎಸ್.ಶ್ರೀಕಾಂತ್ ಅಮಾನತು
ಕೇಟರಿಂಗ್ ಕಂಪನಿಯೊಂದಕ್ಕೆ ರೂ 3.38 ಕೋಟಿಯನ್ನು ನಿಯಮಬಾಹಿರವಾಗಿ ಪಾವತಿಸಿರುವ ಆರೋಪದ ಮೇಲೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಬೌರಿಂಗ್ ಇನ್ ಸ್ಟಿಟ್ಯೂಟ್ ನ (ಬೌರಿಂಗ್ಸ್ ಕ್ಲಬ್) ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶ್ರೀಕಾಂತ್ ಅವರ ಸದಸ್ಯತ್ವವನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.
ಲಿವ್ ಇನ್ ರಿಲೇಷನ್‌ಶಿಪ್: ಮಗು ಅನುಮಾನಾಸ್ಪದ ಸಾವು
ಲಿವ್ ಇನ್ ರಿಲೇಷನ್‌ಶಿಪ್ ಜೋಡಿಯೊಂದಿಗೆ ಇದ್ದ ಎರಡು ವರ್ಷದ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಬೆಂಗಳೂರಿನ ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ ನಡೆದಿದೆ. ಜೇಸನ್ ಆಂಥೋನಿ ಮತ್ತು ರೋಸ್ಲಿನ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಅವರ ಎರಡು ವರ್ಷದ ಮಗು ಕಾರ್ಲೆಟ್ ಡೈಸಿ ಮೃತಪಟ್ಟಿದೆ.
ವಿಚ್ಛೇದಿತೆಯೊಂದಿಗೆ ಪ್ರೇಮವಿವಾಹ: ಅರತಕ್ಷತೆ ರಾತ್ರಿಯೇ ಯುವಕನ ಕೊಲೆ
ಬಳ್ಳಾರಿಯ ಬಟ್ಟಿ ಏರಿಯಾದಲ್ಲಿ ಪ್ರೀತಿಸಿ ಮದುವೆಯಾಗಿದ್ದ ನಭೀ ರಸೂಲ್ ಎಂಬ ಯುವಕನನ್ನು ಆರತಕ್ಷತೆ ದಿನವೇ ರಾತ್ರಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಯುವತಿಯ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವುದಾಗಿ ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಭೀ ರಸೂಲ್ ಹತ್ಯೆಯಾದ
ನಕಲಿ ಚಿನ್ನ ನೀಡಿ 85 ಲಕ್ಷ ರೂ. ವಂಚಿಸಿದ್ದ ಮೂವರ ಬಂಧನ
ಹಳೆ ಮನೆಯ ಪಾಯ ತೋಡುವಾಗ ‘ಚಿನ್ನದ ನಿಧಿ’ ಸಿಕ್ಕಿದೆ ಎಂದು ನಂಬಿಸಿ ಮಹಾರಾಷ್ಟ್ರದ ಉದ್ಯಮಿಯೊಬ್ಬರಿಗೆ 85 ಲಕ್ಷ ರೂಪಾಯಿ ವಂಚಿಸಿದ್ದ ಮೂವರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಸಚಿನ್ ಗೋಂಧಳಿ ಅಲಿಯಾಸ್ ಸ್ಯಾಂಡಿ (21), ನ್ಯಾಮತಿ ತಾಲೂಕಿನ
ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯ ಹತ್ಯೆಗೈದ ಯುವಕ
ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಯುವಕನೊಬ್ಬ ಯುವತಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಕ್ಯಪದವು ನಿವಾಸಿ ಲಾವಣ್ಯ (21) ಕೊಲೆಯಾದ ಯುವತಿ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ
ಬೆಂಗಳೂರಿನಲ್ಲಿ ಗರ್ಭಿಣಿಯ ಕೊಲೆಗೈದು ಪತಿ ಆತ್ಮಹತ್ಯೆ
ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯು ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಮನೋಜ್ (28) ಮತ್ತು ಸ್ವಪ್ನ (26) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದವರಾದ ಇವರು




