Thursday, January 30, 2025
Menu

ಶಾಲೆಗೆ ಹೋಗಬೇಕೆಂಬ ಧಾವಂತದಲ್ಲಿ ಮನೆಗೆ ಹೊರಟಿದ್ದ ತಾಯಿ ಮಕ್ಕಳು ಅಪಘಾತಕ್ಕೆ ಬಲಿ

ತುಮಕೂರು ತಾಲೂಕಿನ ಓಬಳಾಪುರ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮಹಮ್ಮದ್​​ ಆಸೀಫ್ ​(12), ಮಮ್ತಾಜ್ ​​(38), ಶಾಖಿರ್​​ ಹುಸೇನ್ ​(18) ಮೃತ ದುರ್ದೈವಿಗಳು.

ಮೃತರು ಮಧುಗಿರಿ ತಾಲೂಕಿನ ಗುಡ್ಡೆನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಸ್​ಪಿ ಅಶೋಕ್ ವೆಂಕಟ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತುಮಕೂರು ಕಡೆಯಿಂದ ಮಧುಗಿರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.

ಓಬಳಾಪುರ ಗ್ರಾಮದ ಬಳಿ ಬೈಕ್​ ಚಾಲಕನ ನಿಯಂತ್ರಣ ತಪ್ಪಿ ​ನಿಂತಿದ್ದ ಟ್ರ್ಯಾಕ್ಟರ್​​​ ಟ್ರೇಲರ್​ಗೆ ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಮಹಮ್ಮದ್ ಆಸೀಪ್​ ಪಿಯುಸಿ, ಶಾಖಿರ್​​ ಹುಸೇನ್ 6ನೇ ತರಗತಿಯಲ್ಲಿ ಓದುತ್ತಿದ್ದನು. ಈ​ ಮೂವರು ಸೋಮವಾರ ಸಂಜೆ ಶಿರಾ ಗೇಟ್​ನಲ್ಲಿನ ಸಂಬಂಧಿ ಮನೆಗೆ ತೆರಳಿದ್ದರು. ಮಂಗಳವಾರ ಶಾಲೆ-ಕಾಲೇಜಿಗೆ ಹೋಗಬೇಕೆಂದು ಬೆಳಗಿನ ಜಾವ 6 ಗಂಟೆಗೆ ವಾಪಸ್ ಊರಿಗೆ ಹೋಗುತ್ತಿದ್ದರು.

Related Posts

Leave a Reply

Your email address will not be published. Required fields are marked *