Saturday, October 31, 2026
Menu

ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ: ಅದಮ್ಯ ಧೈರ್ಯ,ದೂರದೃಷ್ಟಿ ನಾಯಕತ್ವ ಸ್ಮರಿಸಿದ ಕಾಂಗ್ರೆಸ್‌ ದಿಗ್ಗಜರು!

ಉದಯಕಾಲ ನ್ಯೂಸ್, ನವದೆಹಲಿ: ಭಾರತದ ಉಕ್ಕಿನ ಮಹಿಳೆ, ದೇಶದ ಪ್ರಥಮ ಮಹಿಳಾ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ರಾಷ್ಟ್ರ ರಾಜಧಾನಿಯಲ್ಲಿ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ. ಅಖಂಡ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿ, ತಮ್ಮ ಅಚಲ ದೃಢನಿಶ್ಚಯ ಹಾಗೂ ದೂರದೃಷ್ಟಿಯ ನಾಯಕತ್ವದಿಂದ ಇತಿಹಾಸ ಸೃಷ್ಟಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಹಿರಿಯ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಲವಾರು ಗಣ್ಯರು ಸ್ಮರಿಸಿದ್ದಾರೆ.

ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅವರ ಸ್ಮಾರಕ ‘ಶಕ್ತಿ ಸ್ಥಳ’ಕ್ಕೆ ಭೇಟಿ ನೀಡಿದ ಪ್ರಮುಖ ಕಾಂಗ್ರೆಸ್ ನಾಯಕರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವಾರ್ಪಣೆ ಮಾಡಿದರು. 1984ರ ಅಕ್ಟೋಬರ್ 31ರಂದು ತಮ್ಮದೇ ಅಂಗರಕ್ಷಕರ ಗುಂಡೇಟಿಗೆ ಬಲಿಯಾಗಿದ್ದ ಇಂದಿರಾ ಗಾಂಧಿ ಅವರ ತ್ಯಾಗ ಮತ್ತು ದೇಶಸೇವೆಯನ್ನು ಈ ಸಂದರ್ಭದಲ್ಲಿ ದೇಶಾದ್ಯಂತ ಸ್ಮರಿಸಿಕೊಳ್ಳಲಾಯಿತು.

ರಾಹುಲ್ ಗಾಂಧಿ ಭಾವುಕ ನಮನ

ಅಜ್ಜಿಯ ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ನಿಮ್ಮ ಮಡಿಲಲ್ಲಿ ಕುಳಿತು, ನಿಮ್ಮ ಕೈಗಳನ್ನು ಹಿಡಿದು ಆ ನುಡಿಗಳನ್ನು ಆಲಿಸುತ್ತಿದ್ದೆ. ನೀವು ನನಗೆ ನೀಡಿದ ಉಡುಗೊರೆ ಅಮೂಲ್ಯವಾದದ್ದು ಎಂದು ಬಾಲ್ಯದ ನೆನಪುಗಳನ್ನು ಮೆಲುಕುಹಾಕಿದ್ದಾರೆ.

ಅದಮ್ಯ ಧೈರ್ಯದ ಪ್ರತೀಕ

ನಿಮ್ಮ ಅಪಾರ ಧೈರ್ಯ, ದೃಢ ಸಂಕಲ್ಪ ಮತ್ತು ದೂರದೃಷ್ಟಿಯುಳ್ಳ ನಾಯಕತ್ವದ ಪ್ರತೀಕವಾದ ನೀವು, ಬಲಿಷ್ಠ ಹಾಗೂ ಪ್ರಗತಿಪರ ಭಾರತದ ನಿರ್ಮಾತೃ” ಎಂದು ಮಲ್ಲಿಕಾರ್ಜುನ ಖರ್ಗೆ ಬಣ್ಣಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಪ್ರಶಂಸೆ

“ನೀವೆಂತಹ ಅದ್ಭುತ ಮಹಿಳೆ; ಆಕಾಶದಷ್ಟು ಮುಕ್ತ, ಸಾಗರದಷ್ಟು ಆಳ, ಭೂಮಿಯಷ್ಟು ಸ್ಥಿರತೆ ಹಾಗೂ ಬೆಂಕಿಯಷ್ಟು ಪ್ರಕಾಶಮಾನ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಅಜ್ಜಿಯನ್ನು ಕೊಂಡಾಡಿದ್ದಾರೆ.

ಭಾರತದ ರಾಜಕೀಯ ಇತಿಹಾಸದಲ್ಲಿ ‘ಉಕ್ಕಿನ ಮಹಿಳೆ’ ಎಂದೇ ಖ್ಯಾತಿ ಪಡೆದಿದ್ದ ಇಂದಿರಾ ಗಾಂಧಿ ಅವರು ದೇಶದ ಪ್ರಗತಿಗೆ, ಹಸಿರು ಕ್ರಾಂತಿ ಹಾಗೂ ಬ್ಯಾಂಕ್‌ಗಳ ರಾಷ್ಟ್ರೀಕರಣದಂತಹ ದಿಟ್ಟ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದಾರೆ.

#IndiraGandhi #IndiraGandhiDeathAnniversary #ShaktiSthal #RahulGandhi #MallikarjunKharge #Congress #UdayakalaNews #IndianPolitics

Related Posts

Leave a Reply

Your email address will not be published. Required fields are marked *