Saturday, October 31, 2026
Menu

ಕಾಂಗ್ರೆಸ್‌ ‘ದೆಹಲಿ ಚಲೋ’ ರ‍್ಯಾಲಿಗೆ ವಿರುದ್ಧ ಬಿಜೆಪಿ ಪ್ರಾಯೋಜಿತ ಸಿಖ್‌ ಗಲಭೆ ಸಂತ್ರಸ್ತರ ಪ್ರತಿಭಟನೆ!

ಉದಯಕಾಲ ನ್ಯೂಸ್, ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನವೆಂಬರ್ 1 ರಂದು ವಿಪಕ್ಷಗಳ ‘ಇಂಡಿಯಾ’ (INDIA) ಒಕ್ಕೂಟ ಹಾಗೂ ಬಿಜೆಪಿ ನಡುವೆ ಶಕ್ತಿ ಪ್ರದರ್ಶನದ ನೇರ ಹಣಾಹಣಿ ಏರ್ಪಟ್ಟಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ರಾಮಲೀಲಾ ಮೈದಾನದ ಬೃಹತ್ ರ‍್ಯಾಲಿಗೆ ಟಾಂಗ್ ನೀಡಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ.

ದಿಗಿಲು ಬಿದ್ದ ಮೋದಿ ಪಡೆ

ಕಾಂಗ್ರೆಸ್ ಮೆರವಣಿಗೆಗೆ ಕೌಂಟರ್‌ ಆಗಿ ನವೆಂಬರ್ 1 ರಂದೇ ಸುಮಾರು 5,000ಕ್ಕೂ ಅಧಿಕ ಸಿಖ್ ಗಲಭೆ ಸಂತ್ರಸ್ತರು ಮತ್ತು ಪ್ರತಿಭಟನಾಕಾರರನ್ನು ಬೀದಿಗಿಳಿಸಿ ಬೃಹತ್ ಮೆರವಣಿಗೆ ನಡೆಸಲು ಬಿಜೆಪಿ ರಂಗ ಮಂಚವನ್ನು  ಸಿದ್ಧಪಡಿಸಿದ್ದು, ಕಾಂಗ್ರೆಸ್ ಪ್ರತಿಭಟನೆಗೆ  ಮೋದಿ ಪಡೆ ಅಕ್ಷರಸಃ ನಡುಗುತ್ತಿರುವುದನ್ನು ಕಾಣಬಹುದಾಗಿದೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ನೇತೃತ್ವದಲ್ಲಿ ಪಶ್ಚಿಮ ದೆಹಲಿಯ ಹರಿ ನಗರದಲ್ಲಿ ಈ ಮೆರವಣಿಗೆ ನಡೆಯಲಿದ್ದು, ಕಾಂಗ್ರೆಸ್‌ನ ರಾಜಕೀಯ ನಡೆಗೆ ಸಿಖ್ ಸಮುದಾಯದ ನೋವನ್ನು ನೆನಪಿಸುವ ಮೂಲಕ ತಕ್ಕ ತಿರುಗೇಟು ನೀಡಲು ಕೇಸರಿಪಡೆ ಸಜ್ಜಾಗಿದೆ.

ರಾಮಲೀಲಾ ಮೈದಾನದಲ್ಲಿ ಇಂಡಿಯಾ ಬಣದ ರ‍್ಯಾಲಿ ನಡೆಯಲಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮತ್ತು ‘ಸಾರ್ವಜನಿಕ ದೋಷಾರೋಪಣೆ’ಮಾದರಿಯಲ್ಲಿ ಕಾಂಗ್ರೆಸ್‌ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಇದಕ್ಕೆ ಪ್ರತಿರೋಧವಾಗಿ ಅಥವಾ ಜನರ ದೃಷ್ಟಿಯ ದಿಕ್ಕನ್ನು ಬದಲಾಯಿಸಲು ನವೆಂಬರ್ 1 ರಂದೇ 5,000 ಜನರೊಂದಿಗೆ ಬಿಜೆಪಿಯಿಂದ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ನಿಜಕ್ಕೂ ಮೋದಿ ಸರ್ಕಾರ ಭಯಭೀತವಾಗಿರುವುದು ಜಗಜ್ಜಾಹೀರಾಗಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಪಕ್ಷದ ಹಿರಿಯ ಸಿಖ್ ನಾಯಕರು ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದು ಬಿಜೆಪಿಯ ಹೊಲಸು ರಾಜಕೀಯ ಆಟವನ್ನು ಇಲ್ಲಿ ಕಾಣಬಹುದಾಗಿದೆ.
#DelhiChalo #BJPvsCongress #1984SikhRiots #RamlilaMaidan #IndiaAlliance #HardeepSinghPuri #DelhiNews #UdayakalaNews #PoliticalClash

Related Posts

Leave a Reply

Your email address will not be published. Required fields are marked *