ಉದಯಕಾಲ ನ್ಯೂಸ್, ಉತ್ತರ ಕನ್ನಡ: ಕಾರವಾರ ತಾಲೂಕಿನ ಮುದಗಾ ಬಂದರಿನಲ್ಲಿ ಅತ್ಯಂತ ಮಣಿಯುವ ಮತ್ತು ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಬೋಟಿನಲ್ಲಿ ಸಂಗ್ರಹವಾಗಿದ್ದ ಕೊಳೆತ ‘ಚಮನ್’ ಮೀನಿನ ಮಾರಕ ವಿಷಗಾಳಿ (ಹೈಡ್ರೋಜನ್ ಸಲ್ಫೇಟ್ ಅನಿಲ) ಸೇವಿಸಿ ಒರಿಸ್ಸಾ ಮೂಲದ ಇಬ್ಬರು ದುರ್ದೈವಿ ಮೀನುಗಾರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಕಾರ್ಮಿಕರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ದುರ್ದೈವದ ಸಂಗತಿಯೆಂದರೆ ಮೂರು ದಿನಗಳ ಹಿಂದಷ್ಟೇ ವಿಷಗಾಳಿ ಸೇವಿಸಿ ಮೂವರು ಮೃತಪಟ್ಟಿದ್ದರು. ಈಗ ಮತ್ತೊಮ್ಮೆ ಮೀನುಗಾರರು ಸತ್ತಿರುವುದು ಬೋಟುಗಳ ಅವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ.
ಮೃತರನ್ನು ಒರಿಸ್ಸಾ ಮೂಲದ ಪುರಂಧರ್ ಬಿಸರ (21) ಹಾಗೂ ಆಕಾಶ್ ನಾಯ್ಕ (24) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ ಲಾಲಿಂದರ್ ದೃವ (41) ಸೇರಿದಂತೆ ರಾಬುಲ್ ಹಾಗೂ ಮತ್ತೊಬ್ಬ ಕಾರ್ಮಿಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾನೆ ಮಲ್ಪೆ ಮೂಲದ ಕೃಷ್ಣ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಮೀನುಗಳನ್ನು ಅನ್‌ಲೋಡ್ ಮಾಡಲು ಮುದಗಾ ಬಂದರಿಗೆ ಆಗಮಿಸಿತ್ತು. ಮೀನುಗಳನ್ನು ಇಳಿಸಿದ ಬಳಿಕ ಬೋಟಿನ ಒಳಭಾಗವನ್ನು ಸ್ವಚ್ಛಗೊಳಿಸಲು ಐವರು ಕಾರ್ಮಿಕರು ಒಳಗೆ ತೆರಳಿದಾಗ ಈ ದುರಂತ ಸಂಭವಿಸಿದೆ.
ಬೋಟಿನ ಸ್ಟೋರೇಜ್ ಹ್ಯಾಚ್ ತೆರೆದ ತಕ್ಷಣವೇ ಒಳಗೆ ಶೇಖರಣೆಯಾಗಿದ್ದ ತೀವ್ರ ವಿಷಪೂರಿತ ಅನಿಲದ ಸೆಟೆತಕ್ಕೆ ಕಾರ್ಮಿಕರು ಉಸಿರುಗಟ್ಟಿ ಕುಸಿದುಬೊಂಡಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಇಬ್ಬರ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಮಾರಕ ಅನಿಲ ಪತ್ತೆ
ಸ್ಥಳಕ್ಕೆ ಧಾವಿಸಿದ NDRF ತಂಡವು ಮಲ್ಟಿ ಡಿಟೆಕ್ಟರ್ ಬಳಸಿ ತಪಾಸಣೆ ನಡೆಸಿದ್ದು, ಬೋಟ್‌ನಲ್ಲಿ ಶೇ.100 ಕ್ಕಿಂತ ಹೆಚ್ಚು ಅಪಾಯಕಾರಿ ಹೈಡ್ರೋಜನ್ ಸಲ್ಫೇಟ್ ಅನಿಲವಿರುವುದು ದೃಢಪಟ್ಟಿದೆ. ಕೇವಲ ಶೇ.10 ರಷ್ಟು ಮಾತ್ರ ಇರಬೇಕಾದ ಈ ಅನಿಲವು ಸಂಪೂರ್ಣವಾಗಿ ತುಂಬಿಕೊಂಡಿರುವುದರಿಂದ, ಸಣ್ಣ ಕಿಡಿ ಅಥವಾ ಬೆಂಕಿ ಬಿದ್ದರೂ ದೊಡ್ಡ ಮಟ್ಟದ ಸ್ಫೋಟ ಸಂಭವಿಸುವ ಅಪಾಯವಿದೆ ಎಂದು ಎನ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್ ಎಚ್ಚರಿಸಿದ್ದಾರೆ.
ಮುದಗಾ ಬಂದರಿನಲ್ಲಿ 30 ಸಿಬ್ಬಂದಿಯ ಎನ್‌ಡಿಆರ್‌ಎಫ್ ತಂಡ ಮೊಕ್ಕಾಂ ಹೂಡಿದ್ದು, ಬೋಟನ್ನು ಪ್ರತ್ಯೇಕಿಸಿ ವಿಷಗಾಳಿಯನ್ನು ತಟಸ್ಥಗೊಳಿಸುವ (Neutralize) ಸಾಹಸ ಕಾರ್ಯ ಮುಂದುವರಿದಿದೆ. ಬೋಟನ್ನು ಮೂರು ದಿನಗಳ ಕಾಲ ತೆರೆದಿಡಲು ಸೂಚಿಸಲಾಗಿದೆ.
#KarwarNews #MudagaPort #FishermenDeath #HydrogenSulfide #NDRF #UdayakalaNews #UttarKannada #BreakingNewsKannada


