ನೀವು ಶುದ್ಧ ಮಾಡ್ಬೇಕಿರೋದು ಪ್ರತಿದಿನ ಸುಳ್ಳು ಹೇಳೋರನ್ನು, ಅವಾಚ್ಯ ಪದ ಬಳಸೋರನ್ನು ಎಂದು ನಟ ಪ್ರಕಾಶ ರೈ ಹೇಳಿದರು. ಕಲಬುರಗಿ ನಗರದ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆದ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕಾಶ ರಾಜ್‌ರನ್ನ ಕರಾವಳಿಗೆ ಹಾಕಿ ಅಂತ ಹೇಳಿದ್ದಾರೆ.ಆದರೆ ಅದೇ ಕರಾವಳಿ ಮಂದಿ ಆ ಸಮುದ್ರದ ಮೀನು ತಿಂದು ನನ್ನ ಹಾಗೇ ಆದರೆ? ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅಂದರೆ ಆಗಿಬರಲ್ಲ. ಅವರಿಗೆ ಬಾಬಾ ಸಾಹೇಬರು ಕೂಡ ಆಗಿಬರಲ್ಲ, ಸಂವಿಧಾನ ಬ್ರಿಟಿಷರು ಬಂದ ಮೇಲೆ ರಚನೆ ಮಾಡಿದ್ದು ಎಂದು ವಾಗ್ದಾಳಿ ನಡೆಸಿದರು.
ಡಿಮಾನಿಟೈಷನ್ ಮಾಡಿ ಅವರ ದುಡ್ಡು ಅವರೇ ತೆಗೆದುಕೊಳ್ಳದ ಹಾಗೇ ಮಾಡಿದವರು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಕಾಂಟ್ರಾಕ್ಟ್ ತಗೊಂಡಿದ್ದಾರೆ. ದೇಶವನ್ನ ವಿಕಸಿತ ಭಾರತ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಭಾರತವನ್ನು ಅವನತಿಗೆ ತಂದಿದ್ದಾರೆ. ರಾಮ ಮಂದಿರ ಪ್ರದೇಶದ ವ್ಯಾಪ್ತಿಯಲ್ಲೇ ಅವರು ಗೆದ್ದಿಲ್ಲ. ಕರ್ನಾಕಟದಲ್ಲಿ ಪ್ರಜೆಗಳೇ ಆರಿಸಿದ ಸರ್ಕಾರವಿದೆ. ರಾಜ್ಯದಲ್ಲಿ ಯಾವ ಒಬ್ಬರು ಮತದಾನ ಹಕ್ಕು ಕಳೆದುಕೊಳ್ಳದ ಹಾಗೆ ನೋಡಿಕೊಳ್ಳಬೇಕು ಎಂದರು.
ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿ ಮತಗಳನ್ನ ಡಿಲಿಟ್ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸೋಲಿನ ಭಯದಿಂದ ದೇಶದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಆರಂಭಿಸಲಾಗಿದೆ. ಮೋದಿ ತನ್ನ ಶಕ್ತಿ ಮೇಲೆ ನಿಂತಿಲ್ಲ. ಅಕ್ಕಪಕ್ಕದಲ್ಲಿ ಇರೋ ಪವನ್ ಕಲ್ಯಾಣ್ , ನಿತೀಶ್ ಕುಮಾರ ಮೇಲೆ ನಿಂತಿದ್ದಾರೆ ಎಂದು ಛೇಡಿಸಿದರು.
ಎಂಪಿ ಎಮ್‌ಎಲ್ ಎ ಗಳನ್ನ ಖರೀಧಿ ಮಾಡಲು ರಾಮ ಮಂದಿರ ದುಡ್ಡು ಕದಿಯಲಾಗಿದೆ. ಮೋದಿ ಕೆಳಗಿಳಿಯುತ್ತಾರೆ, ಜನ ಇಳಿಸುತ್ತಾರೆ.ಇವರ ನಂತರ ಬಾಬಾ ಸಾಹೇಬರು ತೋರಿಸಿದ ದಾರಿ ದೀಪದಂತೆ ಮುಂದಿನ ಪ್ರಧಾನಿ ಆರಿಸೋಣ ಎಂದ ನಟ ಪ್ರಕಾಶ ರಾಜ್, ಸದನದಲ್ಲಿ ನೀವು ಗುಡುಗುತ್ತಿರಿ ಖರ್ಗೆಯವರೇ, ನಾವು ನಿಮ್ಮ ಜೊತೆ ಇರ್ತೀವಿ ಎಂದರು.
ನೆಕ್ಕುತ್ತಿರೋರು ನಮಗೆ ರಾಷ್ಟ್ರ ಭಕ್ತಿ ಬಗ್ಗೆ ಹೇಳ್ತಿದಾರೆ. ಇವೆರೆಲ್ಲ ವಾಟ್ಸಪ್ ಮತ್ತು ನಾಗಪುರ ಯುನಿವರ್ಸಿಟಿಯಿಂದ ಬಂದವರು ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ನಲ್ಲಿ ಬ್ರಾಹ್ಮಣರೇ ಇದ್ದಾರೆ, ಬೇರೆ ಯಾರು ಸಿಗಲ್ವ, ಖರ್ಗೆಯವರಿಗೆ ಇಳಿವಯಸ್ಸಿನಲ್ಲಿ ಎಐಸಿಸಿ ಸ್ಥಾನ ವಹಿಸಲಾಗಿದೆ. ಬಿಜೆಪಿಯವರು ಸಂವಿಧಾನ ಬುಡಮೇಲು ಮಾಡಲು ಹೊರಟಿದ್ದಾರೆ. ಸಂವಿಧಾನ ರಕ್ಷಣೆ ಮಾಡೋ ಜವಬ್ದಾರಿ ಖರ್ಗೆಯವರ ಮೇಲೆ ಇದೆ ಎಂದರು.
ದೂರು ಕೊಟ್ಟ ತಕ್ಷಣ ಎಫ್ ಐ ಆರ್ ದಾಖಲಿಸಿದ್ರೆ ಪ್ರತಿಭಟನೆ ಮಾಡ್ತಿರಲಿಲ್ಲ: ಮಲ್ಲಿಕಾರ್ಜುನ್ ಖರ್ಗೆ
ದೂರು ಕೊಟ್ಟ ತಕ್ಷಣವೇ ಎಫ್ ಐ ಆರ್ ದಾಖಲಿಸಿದ್ರೆ ಪ್ರತಿಭಟನೆ ಮಾಡ್ತಿರಲಿಲ್ಲ. ಎಫ್ ಐ ಆರ್ ದಾಖಲಿಸಿಲ್ಲ ಅಂತ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯ ಪೊಲೀಸ್ ಠಾಣೆ ಮುಂದೆ ರಾಹುಲ್ ಗಾಂಧಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದರು.
ತೆಲಂಗಾಣ ಸಿಎಂಗೆ ಅಮೆರಿಕ ಪ್ರವಾಸಕ್ಕೆ ಕೇಂದ್ರ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಮಗೆ ಬೇಕಾದ ವ್ಯಕ್ತಿಗಳನ್ನ ಮಾತ್ರ ಕೇಂದ್ರ ಅಮೆರಿಕ ಬಿಡುತ್ತೆ. ಈ ರೀತಿಯಾಗಿ ಅನುಮತಿ ನೀಡದೆ ಇರೋದು ಅನ್ಯಾಯ. ಅಲ್ಲಿಂದ ಬಂಡವಾಳ ಬಂದ್ರೆ ದೇಶಕ್ಕೆ ಒಳ್ಳೆಯದಾಗುತ್ತಿತ್ತು. ಈ ವರ್ತನೆಯನ್ನು ನಾನು ಖಂಡಿಸುತ್ತೆನೆ. ಅಮೆರಿಕದಲ್ಲಿ ಆಂಧ್ರದ ಬಹಳಷ್ಟು ಜನ ಎನ್ ಆರ್ ಐಗಳು ಇದ್ದಾರೆ ಎಂದರು.
ವಂದೇ ಮಾತರಂ ಗೀತೆ ಬಗ್ಗೆ ವಿವಾದ ಕುರಿತು ಮಾತನಾಡಿದ ಖರ್ಗೆ, ಎಲ್ಲರೂ ಇತಿಹಾಸ ಓದಬೇಕು. ಸ್ವಾತಂತ್ರ್ಯ ಬರೋದಕ್ಕೂ ಮುಂಚೆ ಎರಡೂ ಪ್ಯಾರಾಗಳಿಗೆ ಸೀಮಿತ ಮಾಡಿದ್ದರು.ಇಲ್ಲಿಯವರೆಗೂ ನಮ್ಮ ಸೇವಾದಳ ಅದನ್ನೇ ಹಾಡುತ್ತ್ತೆತದೆ. ರವೀಂದ್ರನಾಥ ಟ್ಯಾಗೂರ್ ಹೇಳಿದ್ದು ಎರಡೇ ಪ್ಯಾರಾ. ನಾವು ಅದನ್ನೇ ಹಾಡಿದ್ರೆ ದೇಶದ್ರೋಹಿಗಳಾ? ಹಾಗಿದ್ರೆ ಟ್ಯಾಗೂರ್,ಜವಾಹಾರಲಾಲ್ ನೆಹರು, ಸರ್ದಾರ್ ಪಟೇಲ್ ದೇಶದ್ರೋಹಿನಾ, ಇಷ್ಟು ದಿನ ನೀವು ಅದನ್ನೇ ಹಾಡಿದ್ದೀರಿ, ನೀವು ದೇಶದ್ರೋಹಿನಾ ಎಂದು ಪ್ರಶ್ನಿಸಿದರು.
11 ವರ್ಷ ಅಧಿಕಾರ ಮಾಡಿದ್ರಲ್ಲ ಅವಾಗ್ಯಾಕೆ ನೆನಪು ಬರಲಿಲ್ಲ. ಅಂದ್ರೆ ಅಲ್ಲಿಯವರೆಗೂ ನೀವು ದೇಶದ್ರೋಹಿನಾ? ಗೃಹ ಸಚಿವ ಅಮಿತ್ ಶಾ ಹುಟ್ಟೇ ಇರಲಿಲ್ಲ.ಸ್ವಾತಂತ್ರ್ಯ ತಂದವರನ್ನು ನೀವು ಅವಮಾನ ಮಾಡ್ತಿರಾ, ಅಮಿತ್ ಶಾಗೆ 60-65 ವರ್ಷ ಇರಬೇಕು. ಈ ರೀತಿ ಚಿಲ್ಲರೆ ಕೆಲಸ ಬಿಡಿ. ದೇಶದ ಜನತೆಗೆ ಉಧ್ಯೋಗ, ಶಿಕ್ಷಣದ ನೀಡೋ ಬಗ್ಗೆ ಯೋಚನೆ ಮಾಡಿ ಎಂದು ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿದರು.


