Menu

ಹುಚ್ಚು ಪ್ರೇಮಿಯ ಕಾಟಕ್ಕೆ ಬೇಸತ್ತ ವಿವಾಹಿತೆ ಆತ್ಮಹತ್ಯೆ

ಹುಚ್ಚು ಪ್ರೇಮಿಯ ಕಾಟಕ್ಕೆ ಬೇಸತ್ತ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಇಂದಿರಾನಗರದ ಲಕ್ಷ್ಮೀಪುರಂನಲ್ಲಿ ನಡೆದಿದೆ.  ಕವಿತಾ (21) ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಹಳೆಯ ಪ್ರೇಮಿ ಕಿರಣ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕವಿತಾ 2024 ರಲ್ಲಿ ಮದುವೆಯಾಗಿದ್ದು 1.5 ವರ್ಷದ ಮಗು ಇದೆ.

ಆರೋಪಿ ಮೂರು ವರ್ಷದ ಹಿಂದೆ ಪ್ರೀತಿಸುವುದಾಗಿ ಕವಿತಾ ಹಿಂದೆ ಬಿದ್ದಿದ್ದ, ಕಿರಣ್‌ಗೆ ಕವಿತಾ ಕುಟುಂಬಸ್ಥರು ಬುದ್ಧಿ ಹೇಳಿದ್ದರು. 2024ರಲ್ಲಿ ಆಕೆಗೆ ರಾಜು ಎಂಬವರ ಜೊತೆ ಮದುವೆ ಮಾಡಿಸಿದ್ದರು. ಮದುವೆ ಬಳಿಕವೂ ಕಿರಣ್‌, ಕವಿತಾಗೆ ಮೆಸೇಜ್‌ ಮಾಡಿ ಕಾಟ ಕೊಡಲು ಆರಂಭಿಸಿದ್ದ. ಮೆಸೇಜ್‌ ಮಾಡದಿದ್ದರೆ ಸಾಯುತ್ತೇನೆ. ನನ್ನ ನೆಮ್ಮದಿ ಹಾಳು ಮಾಡಿದ ನಿನ್ನ ಜೀವನ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

ಈ ವಿಚಾರವನ್ನು ಕವಿತಾ ಪೋಷಕರಿಗೆ ಪತಿ ರಾಜು ಹೇಳಿದ್ದರು. ಗಂಡ, ಮನೆಯವರಿಗೆ ವಿಷಯ ಗೊತ್ತಾಯಿತು ಎಂದು ನೊಂದ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *