Menu

ಬಿಡದಿ ನಕಲಿ ಔಷಧಿ ಜಾಲಕ್ಕೆ ಐದು ರಾಜ್ಯಗಳ ಲಿಂಕ್‌

ಬೆಂಗಳೂರಿನ ಬಿಡದಿಯಲ್ಲಿ ಪತ್ತೆಯಾಗಿರುವ ನಕಲಿ ಔಷಧಿ ಪೂರೈಕೆ ಜಾಲದ ಆಳ, ಅಗಲ ಜಾಲಾಡುತ್ತಿರುವ ತನಿಖಾ ತಂಡವು ಈ ಹಗರಣದಲ್ಲಿ ಐದು ರಾಜ್ಯಗಳ ಲಿಂಕ್‌ ಇರುವುದನ್ನು ಪತ್ತೆ ಹಚ್ಚಿದೆ.

ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನ್ನೈ, ಆಂಧ್ರಪ್ರದೇಶ ರಾಜ್ಯಗಳೊಂದಿಗೆ ಈ ನಕಲಿ ಔಷಧಿ ಜಾಲಕ್ಕೆ ಸಂಪರ್ಕವಿದೆ. ಡ್ರಗ್‌ ಕಂಟ್ರೋಲರ್‌ಗಳ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ತನಿಖಾ ತಂಡಗಳು ಐದು ರಾಜ್ಯಗಳಿಗೆ ಭೇಟಿ ನೀಡಲಿವೆ.

ಐದು ರಾಜ್ಯಗಳ ಕಂಪನಿಯ ಲೇಬಲ್ ಇರುವುದು ದೃಢಪಟ್ಟಿದೆ. ಪ್ರಕರಣ ಸಂಬಂಧ ಅಧಿಕಾರಿಗಳು ಐದು ರಾಜ್ಯಗಳಿಂದ ಮಾಹಿತಿ ಸಂಗ್ರಹಿಸುವ ಜೊತೆಗೆ ಐದು ರಾಜ್ಯದ ಕಂಪನಿಗಳಿಗೂ ಲೆಟರ್ ಹೆಡ್ ರೆಡಿ ಮಾಡಿ ಮಾಹಿತಿ ಕೋರಲಿದ್ದಾರೆ. ಔಷಧಿ ಮೇಲೆ ಪ್ರತಿಷ್ಠಿತ ಕಂಪನಿಯ ಲೇಬಲ್ ಇದ್ದು, ಅನಧಿಕೃತವಾಗಿ ಪ್ಯಾಕಿಂಗ್ ಆಗುತ್ತಿದೆಯೇ ಎಂಬ ಬಗ್ಗೆ ಬಗ್ಗೆ ತನಿಖೆ ನಡೆಯಲಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡೇರಿ ಸಮೀಪದ ಸಿ.ಕೆ. ತಾಂಡ್ಯಾ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧ ತಯಾರಿ ಜಾಲ ಪತ್ತೆಯಾಗಿದೆ. ಪ್ರತಿಷ್ಠಿತ ಕಂಪನಿಗಳ ಹೆಸರನ್ನು ಬಳಸಿಕೊಂಡು ನಕಲಿ ಔಷಧಿಗಳಿಗೆ ಬ್ರ್ಯಾಂಡ್ ರೂಪ ನೀಡಲಾಗುತ್ತಿತ್ತು. ಬಾಟಲ್‌ಗಳಿಗೆ ಲೇಬಲ್ ಅಂಟಿಸಿ, ಕ್ಯಾಪ್ ಹಾಕಿ ಮಾರುಕಟ್ಟೆಗೆ ರವಾನಿಸಲು ಸಿದ್ಧಪಡಿಸಲಾಗುತ್ತಿತ್ತು. ಔಷಧಿಗಳ ನಕಲಿ ತಯಾರಿಕೆ ಜೊತೆಗೆ ಪ್ಯಾಕಿಂಗ್ ಮತ್ತು ಲೇಬಲಿಂಗ್‌ನ ಸಂಪೂರ್ಣ ವ್ಯವಸ್ಥೆ ಘಟಕದಲ್ಲೇ ಇತ್ತು. ಅವಧಿ ಮೀರಿದ ಉತ್ಪನ್ನಗಳ ಜೊತೆಗೆ ಇಂಜೆಕ್ಷನ್‌ಗಳನ್ನೇ ನಕಲಿ ಮಾಡಿರುವುದು ಪತ್ತೆಯಾಗಿದೆ. ಇವು ಈಗಾಗಲೇ ಆಸ್ಪತ್ರೆ ಮತ್ತು ಮೆಡಿಕಲ್‌ ಶಾಪ್‌ಗಳಿಗೆ ತಲುಪಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ.

Related Posts

Leave a Reply

Your email address will not be published. Required fields are marked *