Friday, September 25, 2026
Menu

ಬೆಂಗಳೂರಿನಲ್ಲಿ ಖಾಲಿ ಸೈಟ್‌ ಕ್ಲೀನ್‌ ವೇಳೆ ಮಹಿಳೆಯ ಶವ ಪತ್ತೆ, ಕೊಲೆಗಾರ ಪತಿ ಅರೆಸ್ಟ್‌

ಬೆಂಗಳೂರಿನ ಸಂಪಿಗೆಹಳ್ಳಿ ಬಳಿ ಎಂಎಸ್‌ ನಗರ ಅಗ್ರಹಾರ ಲೇಔಟ್‌ನಲ್ಲಿ ಸರ್ಕಾರದ ಆದೇಶದಂತೆ ಖಾಲಿ ಸೈಟ್‌ ಸ್ವಚ್ಛಗೊಳಿಸುವಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಅನುಸೂಯ (28) ಎಂದು ಮೃತ ಮಹಿಳೆಯ ಗುರುತು ಪತ್ತೆಯಾಗಿದೆ.

ಒಡಿಶಾದ ಸಾಗರ್ ಚಂದ್ರ ರಾವತ್ ಮತ್ತು ಅನುಸೂಯ ಪ್ರೀತಿಸಿ ಮದುವೆಯಾಗಿದ್ದು, ನಗರದ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಹಣಕಾಸು ವಿಚಾರಕ್ಕೆ ಆಗಸ್ಟ್ 11ರಂದು ದಂಪತಿ ನಡುವೆ ಗಲಾಟೆ ನಡೆದು, ಸಾಗರ್‌
ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮೂರು ದಿನ ಶವದ ಜೊತೆ ಮನೆಯಲ್ಲಿದ್ದು, ನಂತರ ಹಾಸಿಗೆಯಲ್ಲಿ ಸುತ್ತಿ ಖಾಲಿ ಸೈಟ್‌ನಲ್ಲಿ ಎಸೆದಿದ್ದ.

ಸ್ವಚ್ಛಗೊಳಿಸಲು ಸೈಟ್ ಮಾಲೀಕರು ಕಾರ್ಮಿಕರನ್ನು ಕಳುಹಿಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ನಾಯಿಗಳು ಕಚ್ಚಿ ತಿಂದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಸಂಪಿಗೆಹಳ್ಳಿ ಪೊಲೀಸರಿಗೆ ಶವದ ಮೇಲಿದ್ದ ಮಾಲ್ ಒಂದರ ಬಟ್ಟೆ ಟ್ಯಾಗ್ ಸಿಕ್ಕಿತ್ತು. ಅದರ ಬಿಲ್ ಆಧಾರದಲ್ಲಿ ತನಿಖೆ ತೀವ್ರಗೊಳಿಸಿ ಗುರುತು ಪತ್ತೆಹಚ್ಚಿದ ಪೊಲೀಸರು, ಕೊಲೆ ನಡೆದು 20 ದಿನಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ.

ಯುವಕನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಗೃಹಿಣಿ ಆತ್ಮಹತ್ಯೆ

ಹುಣಸೂರು ತಾಲೂಕಿನ ಲಕ್ಕನಕೊಪ್ಪಲು ಗ್ರಾಮದಲ್ಲಿ ಅಕ್ರಮ ಸಂಬಂಧ ವಿಚಾರದಲ್ಲಿ ಯುವಕ ಮಾಡಿದ ಬ್ಲ್ಯಾಕ್‌ಮೇಲ್‌ಗೆ ಹೆದರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

34 ವರ್ಷದ ಸಿಂಧೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆಕೆ ಶ್ರೀಕಾಂತ್ ಎಂಬವರ ಪತ್ನಿ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕ್ರಿಮಿನಾಶಕ ಮಾತ್ರೆ ಸೇವಿಸಿದ್ದ ಸಿಂಧೂ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಾವಿಗೂ ಮೊದಲು ವಿಕಾಸ್ ಎಂಬಾತನೇ ತನ್ನ ಸಾವಿಗೆ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಮೊಬೈಲ್ ಪರಿಶೀಲನೆ ವೇಳೆ ವಿಕಾಸ್ ಜೊತೆ ನಿರಂತರ ವಾಟ್ಸಪ್ ಸಂದೇಶ, ವೀಡಿಯೊ ಕಾಲ್ ಪತ್ತೆಯಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಮೂವರ ವಿರುದ್ಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *