Menu

ಮದುವೆಯಾಗಿ ನಾಲ್ಕು ತಿಂಗಳಿಗೆ ಅಮೆರಿಕದಲ್ಲಿ ಪತ್ನಿಯ ಕೊಲೆ: ಭಾರತದಲ್ಲಿರುವ ಪ್ರೇಯಸಿಗೆ ಮೃತದೇಹದ ಪೋಟೊ

ಅಮೆರಿಕದ ವಾಷಿಂಗ್ಟನ್‌ನಲ್ಲಿ ತೆಲಂಗಾಣದ ಭಾರತೀಯ ಎಂಜಿನಿಯರ್‌ವೊಬ್ಬ ಮದುವೆಯಾಗಿ ನಾಲ್ಕು ತಿಂಗಳಿಗೆ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಅವಿನಾಶ್ ನಾರ್ನೆ ಕೊಲೆ ಆರೋಪಿ, ಆತನ ಹೆಂಡತಿ ರಾಜಿತಾ ಸಬ್ಬಿನೇನಿ ಕೊಲೆಯಾದವರು. ಆರೋಪಿ ಪತ್ನಿಯ ಕತ್ತು ಹಿಚುಕಿ ಕೊಲೆ ಮಾಡಿ, ಮೃತದೇಹದ ಫೋಟೊವನ್ನು ಗೆಳತಿಗೆ ಕಳಿಸಿರುವ ಆರೋಪವಿದೆ.

2025 ರ ಅಕ್ಟೋಬರ್‌ನಲ್ಲಿ ಬೆಲ್ಲೆವ್ಯೂನಲ್ಲಿರುವ ವುಡ್‌ಲ್ಯಾಂಡ್ ಕಾಮನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಈ ಕೊಲೆ ನಡೆದಿದೆ. ಆರೋಪಿಯು 911ಗೆ ಕರೆ ಮಾಡಿ ಹೆಂಡತಿ ಸ್ನಾನಗೃಹದಲ್ಲಿ ಲಾಕ್ ಆಗಿದ್ದಾಳೆ ಮತ್ತು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಸಿದ್ದಾನೆ. ಪೊಲೀಸರು ಸ್ನಾನಗೃಹ ಓಪನ್​ ಮಾಡಿದ ಮೇಲೆ ನೆಲದ ಮೇಲೆ ರಾಜಿತಾ ಮೃತಪಟ್ಟಿ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ಶವಪರೀಕ್ಷೆಯಲ್ಲಿ ರಾಜಿತಾ ಕತ್ತು ಹಿಸುಕಿದ್ದಕ್ಕೆ ಉಸಿರುಕಟ್ಟಿ ಸತ್ತಿರುವುದಾಗಿ ವರದಯಾಗಿತ್ತು, ಹೀಗಾಗಿ ಕೊಲೆ ಪ್ರಕರಣವೆಂದು ದಾಖಲಿಸಲಾಗಿತ್ತು.

ಹೆಂಡತಿಯ ಕೊಲೆ ಮಾಡಿದ ಕೂಡಲೇ ಅವಿನಾಶ್ ಭಾರತದಲ್ಲಿರುವ ತನ್ನ ಗೆಳತಿಯೊಂದಿಗೆ ಸಂಪರ್ಕದಲ್ಲಿದ್ದ. ಮೃತದೇಹದ ಫೋಟೊವನ್ನು ಆಕೆಗೆ ಕಳುಹಿಸಿದ್ದಾನೆ. ಕೊಲೆಯ ದಿನವೇ ಆಕೆಯೊಂದಿಗೆ ನಾಲ್ಕಾರು ಬಾರಿ ಮಾತನಾಡಿದ್ದಾನೆ ಎಂದು ಹೇಳಲಾಗಿದೆ.

ರಾಜಿತಾ ಸಾವಿನ ಸಮಯದಲ್ಲಿ ಅವಿನಾಶ್ ಹೊರತುಪಡಿಸಿ ಬೇರೆ ಯಾರೂ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಿಲ್ಲ ಎಂದು ದಾಖಲೆಗಳು ದೃಢಪಡಿಸಿವೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಅವಿನಾಶ್​ ಕಿಂಗ್ ಕೌಂಟಿ ಜೈಲಿನಲ್ಲಿ ದ್ದಾನೆ. ತನ್ನ ಮೇಲಿನ ಕೊಲೆ ಆರೋಪವನ್ನು ನಿರಾಕರಿಸಿದ್ದಾನೆ.

Related Posts

Leave a Reply

Your email address will not be published. Required fields are marked *