Menu

ಹರ್ಮುಜ್ ಜಲಸಂಧಿಯಲ್ಲಿ ಇರಾನ್‌ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ

ಹರ್ಮುಜ್ ಜಲಸಂಧಿಯಲ್ಲಿ ಇರಾನ್‌ಗೆ ಸೇರಿದ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಟ್ಯಾಂಕರ್‌ಗಳು ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ಇರಾನ್ ಬಂದರುಗಳಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದವು ಎಂದು ಅಮೆರಿಕದ ಸೇನೆ ಹೇಳಿದ್ದು, ದಾಳಿಯ ನಡೆಸಿದ ವೀಡಿಯೊಗಳನ್ನೂ ಬಿಡುಗಡೆ ಮಾಡಿದೆ.

ಎರಡು ದಿನಗಳ ಹಿಂದೆ ಹರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಯ ಮೂರು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಲು ಯತ್ನಿಸಿತ್ತು ಎಂಬಯದಾಗಿ ಅಮೆರಿಕ ಸೇನೆ ಆರೋಪಿಸಿದೆ. ಈ ದಾಳಿಯನ್ನು ತಡೆದು ಬಳಿಕ ಇರಾನ್‌ನ ಸೈನಿಕ ನೆಲೆಗಳ ಮೇಲೂ ಪ್ರತಿದಾಳಿ ನಡೆಸಲಾಗಿದೆ. ಘಟನೆಯಲ್ಲಿ ಅಮೆರಿಕದ ಯುದ್ಧ ಹಡಗುಗಳಿಗೆ ಹಾನಿಯಾಗಿಲ್ಲ ಎಂದು ಹೇಳಿದೆ.

ಇರಾನ್ ಉಡಾಯಿಸಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಮೂರು ಡ್ರೋನ್‌ ದಾಳಿ ತಡೆ ಕಾರ್ಯಾಚರಣೆ ವೇಳೆ ಮೂವರು ಗಾಯಗೊಂಡಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಫೆಬ್ರವರಿ 28ರಂದು ಅಮೆರಿಕಮತ್ತು ಇಸ್ರೇಲ್ ಆರಂಭಿಸಿದ ಯುದ್ಧದ ಬಳಿಕ ಇರಾನ್ ಹರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಬಿಗಿಗೊಳಿಸಿದೆ.

ಅಮೆರಿಕವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ, ಅಮೆರಿಕನ್ನರನ್ನು ಬೆದರಿಸಿದರೆ ಪರಿಣಾಮ ಗಂಭೀರವಾಗಿರುತ್ತದೆ” ಎಂದುಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಜಲಸಂಧಿ ಪುನರಾರಂಭ ಮತ್ತು ಇರಾನ್‌ನ ಪರಮಾಣು ಯೋಜನೆ ಹಿಂಪಡೆಯುವ ಕುರಿತು ಇರಾನ್‌ ಗಂಭೀರ ಪ್ರಸ್ತಾವನೆ ನೀಡಬೇಕೆಂದು ಹೇಳಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ , ಅಮೆರಿಕದ ನಡೆಯನ್ನು ಖಂಡಿಸಿದ್ದು, ಪ್ರತಿ ಬಾರಿ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ವೇಳೆಗೆ ಅಮೆರಿಕ ಸೈನಿಕ ಸಾಹಸಕ್ಕೆ ಮುಂದಾಗುತ್ತದೆ” ಎಂದು ಆರೋಪಿಸಿದ್ದಾರೆ. ಈ ದಾಳಿಗಳು ಕದನ ವಿರಾಮ ಉಲ್ಲಂಘನೆ ಎಂದೂ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಕದನ ವಿರಾಮ ಇನ್ನೂ ಜಾರಿಯಲ್ಲಿದೆ ಎನ್ನುತ್ತ ಇರಾನ್ ಒಪ್ಪಂದಕ್ಕೆ ಬಾರದಿದ್ದರೆ ಮತ್ತೆ ಬಾಂಬ್ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಜಲಸಂಧಿ ಮೂಲಕ ಸಾಗುವ ಹಡಗುಗಳ ಮೇಲೆ ತೆರಿಗೆ ಮತ್ತು ಪರಿಶೀಲನೆ ನಡೆಸಲು ಇರಾನ್‌ ಮುಂದಾಗಿದ್ದು, ಒಪ್ಪಲಾಗದ ಕ್ರಮ ಎಂದು ಅಮೆರಿಕ ಟೀಕಿಸಿದೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಇಸ್ರೇಲ್ ಮತ್ತು ಲೆಬನಾನ್ ನಡುವಿನ ಮುಂದಿನ ಸುತ್ತಿನ ಮಹತ್ವದ ಮಾತುಕತೆಗಳು ಮೇ 14 ಮತ್ತು 15ರಂದು ನಡೆಯಲಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ. ಇತ್ತೀಚೆಗೆ ಇಸ್ರೇಲ್-ಲೆಬನಾನ್ ಗಡಿಭಾಗದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ವಿಶೇಷವಾಗಿ ಹಿಜ್ಬುಲ್ಲಾ ಸಂಘಟನೆ ಮತ್ತು ಇಸ್ರೇಲ್ ಸೇನೆಯ ನಡುವೆ ನಡೆದ ದಾಳಿ-ಪ್ರತಿದಾಳಿಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ.

Related Posts

Leave a Reply

Your email address will not be published. Required fields are marked *