Saturday, October 10, 2026
Menu

ಲಕ್ಕುಂಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಕತ್ತು ಸೀಳಿ ಬರ್ಬರ ಹತ್ಯೆ!

ಉದಯಕಾಲ ನ್ಯೂಸ್, ಗದಗ:  ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ ಅಕ್ಷರಸಃ ರಕ್ತಸಿಕ್ತವಾಗಿ ಹೋಗಿದೆ. ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರೊಬ್ಬರ ಬೈಕ್‌ ಅಡ್ಡಗಟ್ಟಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಲಕ್ಕುಂಡಿ ಗ್ರಾಮದ ನಿವಾಸಿ ಹಾಗೂ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಬಸವಣ್ಣೆಪ್ಪ ಮಾಡಲಗೇರಿ (62) ಕೊಲೆಯಾದ ದುರ್ದೈವಿ. ಬಸವಣ್ಣೆಪ್ಪ ಅವರು ರಾತ್ರಿ ವೇಳೆ ತಮ್ಮ ಜಮೀನಿನಿಂದ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದರು. ಈ ವೇಳೆ ಲಕ್ಕುಂಡಿ-ಸಂಭಾಪೂರ ಮಾರ್ಗದಲ್ಲಿ ಅವರ ಬೈಕ್ ಅನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ.

ಕತ್ತು ಸೀಳಿ ಬರ್ಬರ ಹತ್ಯೆ

ಜಮೀನಿನಿಂದ ವಾಪಸ್ಸಾಗುತ್ತಿದ್ದ ಬಸವಣ್ಣೆಪ್ಪ ಅವರನ್ನು ಅಡ್ಡಗಟ್ಟಿದ ಆಪರಾಧಿಗಳು, ಅವರ ಕತ್ತು ಸೀಳಿ ಹಾಗೂ ತಲೆಗೆ ಬಲವಾಗಿ ಹೊಡೆದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ಕೂಡಲೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಕೊಲೆಗೆ ನಿಖರವಾದ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಹತ್ಯೆಯ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನುು ಮುಂದುವರಿಸಲಾಗಿದೆ. ಮಾಜಿ ಪಂಚಾಯತ್ ಸದಸ್ಯರ ಹತ್ಯೆಯಿಂದ ಲಕ್ಕುಂಡಿ ಗ್ರಾಮದಲ್ಲಿ ಆತಂಕ ಹಾಗೂ ಶೋಕಛಾಯೆ ಮೂಡಿದೆ.

#Udayakala #UdayakalaNews #GadagNews #Lakkundi #BasavanneppaModalageri #GadagPolice #CrimeNews #KarnatakaNews #MurderMystery #GadagRuralPolice

Related Posts

Leave a Reply

Your email address will not be published. Required fields are marked *