ಉದಯಕಾಲ ನ್ಯೂಸ್, ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ ವಜಾಗೆ ಒತ್ತಾಯಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕರೆ ನೀಡಿರುವ ‘ಜಂತರ್ ಮಂತರ್ 2.0’ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರ ಹೆದರಿ ಹೈರಾಣಾಗಿದೆ. ಮೋದಿಯ ನಿರ್ದೇಶನದಂತೆ ದೆಹಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆಯನ್ನು ಬೃಹತ್ ಮಟ್ಟದಲ್ಲಿ ಹತ್ತಿಕ್ಕುವ ಕ್ರಮಗಳನ್ನು ಮುಂದುವರಿಸಿದ್ದಾರೆ. ಮುಂಬೈನಿಂದ ದೆಹಲಿಗೆ ಆಗಮಿಸಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಇಳಿದ ತಕ್ಷಣವೇ ಪ್ರಮುಖ ನಾಯಕರನ್ನು ಪೊಲೀಸರು ವಿಮಾನದ ಒಳಗಡೆಯೇ ವಶಕ್ಕೆ ಪಡೆದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯೇ ಸರಿ.
ವಿಮಾನದೊಳಗೆಯೇ ದೀಪ್ಕೆ ಮತ್ತು ಇತರರ ಹೈಜಾಕ್
ಮುಂಬೈನಿಂದ ವಿಮಾನದಲ್ಲಿ ದೆಹಲಿಗೆ ಬಂದಿಳಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ, ಪಕ್ಷದ ವಕ್ತಾರರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ದೆಹಲಿ ಪೊಲೀಸರು ವಿಮಾನದ ಒಳಗಡೆಯೇ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯುವ ಮುನ್ನ ಪ್ರತಿಕ್ರಿಯಿಸಿದ ಅಭಿಜಿತ್ ದೀಪ್ಕೆ, “ನಾವು ಯಾವುದಕ್ಕೂ ಹೆದರಲ್ಲ, ಎಲ್ಲದ್ದಕ್ಕೂ ಸಿದ್ಧರಿದ್ದೇವೆ. ಅವರು ನನ್ನನ್ನು ಬಂಧಿಸಲಿ ಅಥವಾ ವಶಕ್ಕೆ ಪಡೆಯಲಿ, ಅದರಿಂದ ನನಗೇನೂ ವ್ಯತ್ಯಾಸವಾಗುವುದಿಲ್ಲ. ಯುಎಪಿಎ (UAPA) ಅಥವಾ ಎನ್ಎಸ್ಎ (NSA) ಕಾಯ್ದೆಗಳನ್ನು ಹೇರಲಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳಿಗಾಗಿ ಮತ್ತು ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ನಮ್ಮ ಹೋರಾಟ ಮುಂದುವರಿಯುತ್ತದೆ”* ಎಂದು ಸವಾಲು ಹಾಕಿದ್ದಾರೆ.
ಪ್ರತಿಭಟನೆಯನ್ನು ಸಂಪೂರ್ಣವಾಗಿ ವಿಫಲಗೊಳಿಸಲು ದೆಹಲಿ ಪೊಲೀಸರು ರಾಜಧಾನಿಯಾದ್ಯಂತ ಅಭೂತಪೂರ್ವ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ
ಸ್ಪೈಕ್ ಸ್ಟ್ರಿಪ್ ಅಳವಡಿಕೆ: ಮೋಹನ್ ಎಸ್ಟೇಟ್ ಪ್ರದೇಶದ ಸುತ್ತಮುತ್ತ ವಾಹನಗಳ ಟೈರ್ ಒಡೆಯುವ ವಿಶೇಷ ‘ಸ್ಪೈಕ್ ಸ್ಟ್ರಿಪ್’ಗಳನ್ನು ಅಳವಡಿಸಲಾಗಿದೆ.
7 ಹಂತದ ಬ್ಯಾರಿಕೇಡ್
ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ ಕಡೆಗೆ ತೆರಳುವ ರಸ್ತೆಗಳಲ್ಲಿ ಕನಿಷ್ಠ ಏಳು ಹಂತದ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಪ್ರತಿಭಟನಾಕಾರರು ನುಗ್ಗುವುದನ್ನು ತಡೆಯಲು ಕೊನೆಯ ಹಂತದ ಕೆಲವು ಬ್ಯಾರಿಕೇಡ್ಗಳನ್ನು ಪರಸ್ಪರ ವೆಲ್ಡ್ (Welding) ಮಾಡಲಾಗಿದೆ.
#Udayakala #UdayakalaNews #AbhijeetDipke #CJPProtest #DhruvRatheeArrest #DelhiPolice #JantarMantar #GyaneshKumar #RatnaSingh #UAPA #NSA #DelhiSecurity #IndiaNews #KannadaNews


