ಜಾಗತಿಕ ತೈಲ ಬಿಕ್ಕಟ್ಟಿನ ಮಧ್ಯೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ ಪೆಟ್ರೋಲಿಯಂ ಪೂರೈಕೆ ಸಂಘಟನೆಗಳಾದ ಒಪೆಕ್ ಮತ್ತು ಒಪೆಕ್+ ತೊರೆದಿದೆ, ಯುಎಇಯ ಇಂಧನ ಸಚಿವ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ನಿರ್ಧಾರವನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಯಾವುದೇ ಇತರ ದೇಶದೊಂದಿಗೆ ನೇರ ಸಮಾಲೋಚನೆ ನಡೆಸಿಲ್ಲ. ನಾವು ನಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಇರಾನ್ ಬೆದರಿಕೆಗಳು ಮತ್ತು ಹಡಗುಗಳ ಮೇಲಿನ ದಾಳಿಗಳಿಂದಾಗಿ ಒಪೆಕ್ ದೇಶಗಳು ಹರ್ಮುಜ್ ಜಲಸಂಧಿಯ ಮೂಲಕ ರಫ್ತುವಿನಲ್ಲಿ ತೊಂದರೆಗಳನ್ನು ಎದುರಿಸುತ್ತಿವೆ. ಹರ್ಮುಜ್ ಜಲಸಂಧಿಯ ದಿಗ್ಬಂಧನವನ್ನು ಎದುರಿಸುತ್ತಿರುವ ಒಪೆಕ್ ಯುಎಇಯ ಈ ಕ್ರಮದಿಂದ ದೊಡ್ಡ ಹಿನ್ನಡೆ ಕಾಣುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಒಪೆಕ್ ನಿಂದ ಯುಎಇ ಹಿಂದೆ ಸರಿದಿರುವುದು ದೊಡ್ಡ ಗೆಲುವಾಗಿದೆ. ರಷ್ಯಾ ಮತ್ತು ಸೌದಿ ಅರೇಬಿಯಾ ಪ್ರಾಬಲ್ಯ ಹೊಂದಿರುವ ಈ ಸಂಘಟನೆಯನ್ನು ದುರ್ಬಲಗೊಳಿಸಲು ಟ್ರಂಪ್ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದರು.
ಒಪೆಕ್ ಮತ್ತು ಒಪೆಕ್+ ತೈಲ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸಲು 1960ರಲ್ಲಿ ಸ್ಥಾಪನೆಗೊಂಡಿದೆ. ಇರಾಕ್, ಇರಾನ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ, ಸೌದಿ ಅರೇಬಿಯಾ, ಇರಾಕ್, ಇರಾನ್, ಯುಎಇ, ಲಿಬಿಯಾ, ಇಂಡೋನೇಷ್ಯಾ, ಕುವೈತ್, ನೈಜೀರಿಯಾ ಇದರಲ್ಲಿ ಒಳಗೊಂಡಿದ್ದವು. ಈ 12 ಸದಸ್ಯರಲ್ಲದೆ ರಷ್ಯಾ, ಅಜೆರ್ಬೈಜಾನ್, ಬಹ್ರೇನ್, ಬ್ರೂನಿ, ಕಝಾಕಿಸ್ತಾನ್, ಮಲೇಷ್ಯಾ, ಮೆಕ್ಸಿಕೊ, ಓಮನ್ ಮತ್ತು ದಕ್ಷಿಣ ಸುಡಾನ್ ಸೇರಿದಂತೆ 10 ದೇಶಗಳಿವೆ.


