Menu

ಬಿಸಿಲ ಬೇಗೆಗೆ ಬೆಳೆಗಳು ಭಸ್ಮ, ಕುಡಿಯಲು ನೀರಿಲ್ಲ; ಎಲ್ಲಿದೆ ‘ಕೈ’ ಸರ್ಕಾರದ ರೈತಪರ ಕಾಳಜಿ?

R Ashoka

ರಾಜ್ಯದಲ್ಲಿ ಭೀಕರ ಬಿಸಿಲಿನಿಂದಾಗಿ ರೈತರ ಬದುಕು ಹಸಿಗೆಯ ಮೇಲೆ ಬಿದ್ದಂತಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ ಭಾಗದ ರೈತರ ಶೇ. 20% ರಷ್ಟು ಕಬ್ಬು ಬೆಳೆ ಈಗಾಗಲೇ ನಾಶವಾಗಿದೆ. ಗದಗ ಜಿಲ್ಲೆಯ 76ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುತ್ತಿದ್ದಾರೆ. ಆದರೆ ಈ ಕಾಂಗ್ರೆಸ್ ಸರ್ಕಾರ ಮಾತ್ರ ಕುರ್ಚಿ ಕಾದಾಟದಲ್ಲಿ ಮಗ್ನವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು,  ವಿದ್ಯುತ್ ಕಡಿತದ ಕಾಟ: ಕಬಿನಿ, ಕೃಷ್ಣಾ, ಮಲಪ್ರಭಾ ನದಿಗಳಲ್ಲಿ ನೀರಿದ್ದರೂ ರೈತರಿಗೆ ಪಂಪ್‌ಸೆಟ್ ಚಲಾಯಿಸಲು ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಕರೆಂಟ್ ಇದ್ದರೆ ನೀರಿಲ್ಲ, ನೀರಿದ್ದರೆ ಕರೆಂಟ್ ಇಲ್ಲ ಎನ್ನುವಂತಾಗಿದೆ ಈ ಸರ್ಕಾರದ ಅವಾಂತರ ಎಂದು ಆಕ್ರೋಶ  ವ್ಯಕ್‌ತಪಡಿಸಿದ್ದಾರೆ.

ಒಣಗುತ್ತಿರುವ ಕಬ್ಬು ಬೆಳೆ: ಬಿಸಿಲಿನ ಧಗೆ ಮತ್ತು ವಿದ್ಯುತ್ ಕಡಿತದಿಂದಾಗಿ ರೈತರ ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ರೈತರ ಈ ಕಣ್ಣೀರು ಒರೆಸಬೇಕಾದ ಸರ್ಕಾರ ಏನು ಮಾಡುತ್ತಿದೆ?,   ಕುಡಿಯುವ ನೀರಿಗೂ ಬರ: ಗದಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿವ ನೀರಿಗಾಗಿ, ಜಾನುವಾರುಗಳ ಮೇವಿಗಾಗಿ ಜನ ಪರದಾಡುತ್ತಿದ್ದಾರೆ. ಆದರೆ ಟ್ಯಾಂಕರ್ ಮಾಫಿಯಾಕ್ಕೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆಯೇ ಎಂದು ಕೇಳಿದ್ದಾರೆ.

ಸಿಎಂ @siddaramaiah ಅವರೇ, ಕುರ್ಚಿ ಉಳಿಸಿಕೊಳ್ಳುವುದನ್ನೇ ಏಕೈಕ ಅಜೆಂಡಾ ಮಾಡಿಕೊಂಡಿರುವ ತಾವು, ಕುರ್ಚಿ ಚಿಂತೆ ಬಿಟ್ಟು, ಬಿಸಿಲ ಬೇಗೆಯಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದ ರೈತರ ಕಡೆಗೆ ಒಮ್ಮೆ ನೋಡಿ ಸ್ವಾಮಿ.  ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಬೆಳೆ ಹಾನಿ ಪರಿಹಾರ ಘೋಷಿಸಿ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ಇಲ್ಲದಿದ್ದರೆ ರೈತರ ಶಾಪಕ್ಕೆ ಈ ಭ್ರಷ್ಟ ಸರ್ಕಾರ ಸುಟ್ಟು ಭಸ್ಮವಾಗುವುದು ಖಂಡಿತ ಎಂದು ಹೇಳಿದ್ದಾರೆ.

ಕುಡಿಯುವ ನೀರಿಗಾಗಿ ಸರ್ಕಾರದಿಂದ ನಯಾಪೈಸೆ ಬಿಡುಗಡೆ ಮಾಡಿಲ್ಲ. ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ನೌಕರರ ಸಂಬಳ ಕಡಿತ ಮಾಡಲಾಗಿದೆ. ಕರ್ನಾಟಕಕ್ಕೂ ಅದೇ ಸ್ಥಿತಿ ಬರುವ ಲಕ್ಷಣ ಕಾಣುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿ 10 ಕೋಟಿ ರೂ. ಬಿಡುಗಡೆ ಮಾಡಬೇಕು. ಇದನ್ನು ಬೋರ್‌ವೆಲ್‌ ಪುನಶ್ಚೇತನ, ಟ್ಯಾಂಕರ್‌ ನೀರು ಪೂರೈಕೆಗೆ ಬಳಸಬೇಕು. ಕೂಡಲೇ ಗೋಶಾಲೆಗಳನ್ನು ನಿರ್ಮಿಸಿ, ಜಾನುವಾರುಗಳಿಗೆ ಮೇವು ಪೂರೈಸಬೇಕು. ಹವಾಮಾನ ಇಲಾಖೆಯ ವರದಿ ಪ್ರಕಾರ ಈ ಬಾರಿ ಮಳೆ ಕಡಿಮೆ ಇರಲಿದೆ. ಇದನ್ನು ಮಾಡಲು ಆಗದಿದ್ದರೆ ಸಚಿವರು ದೆಹಲಿಯಲ್ಲೇ ಕೂರಲಿ. ಉಳಿದ ಎರಡು ವರ್ಷವನ್ನು ದೆಹಲಿಯಲ್ಲಿ ಕಳೆದರೆ ರಾಜ್ಯದ ಅಭಿವೃದ್ಧಿ ನಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *